ಡಿ.ಕೆ.ಶಿ ಸಿಎಂ ಆಗಲೆಂದು ಅಯ್ಯಪ್ಪ ಸನ್ನಿಧಿಯಲ್ಲಿ ಅಭಿಮಾನಿಗಳ ಪ್ರಾರ್ಥನೆ

ಮೈಸೂರು: ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲೆಂದು ಪ್ರಾರ್ಥಿಸಿ, ಅಭಿಮಾನಿಗಳು ಸೋಮವಾರ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಮಾಲಾಧಾರಿಗಳಾಗಿ ಶಬರಿಮಲೆ ಯಾತ್ರೆಗೆ ಸಿದ್ಧರಾಗಿರುವ ಭಕ್ತರು, ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರ ಹಿಡಿದು ಜಪ ಮಾಡಿ, ಭಜನೆ ಮತ್ತು ಶ್ಲೋಕ ಪಠಣ ನಡೆಸಿ, ಅವರ ರಾಜಕೀಯ ಜೀವನ ಸುಗಮವಾಗಲಿ, ಅಡೆತಡೆಗಳು ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಈ‌ ವೇಳೆ ಅಯ್ಯಪ್ಪ ಭಕ್ತರು ಮಾತನಾಡಿ,
ಮಂಡಲ ಪೂಜೆ ಪೂರ್ಣಗೊಂಡ ನಂತರ ಶಬರಿಮಲೆ ಯಾತ್ರೆಯಲ್ಲಿ ಕೂಡ ಡಿ.ಕೆ.ಶಿವಕುಮಾರ್ ಸಿಎಂ ಆಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಅವರು ಮಾತಿಗೆ ತಪ್ಪುವವರಲ್ಲ.ಅವರು ಮುಖ್ಯ ಮಂತ್ರಿ ಗಾದಿಯನ್ನ ಬಿಡುತ್ತಾರೆ,
ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ವಿಶ್ವಾಸದಿಂದ ನುಡಿದರು.

ಈ ವಿಶೇಷ ಪ್ರಾರ್ಥನೆಯಲ್ಲಿ
ಅಖಿಲ ಕರ್ನಾಟಕ ಡಿ.ಕೆ ಶಿವಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷರಾದ ಜಿ ರಾಘವೇಂದ್ರ, ಹರೀಶ್ ಗೌಡ, ಎಸ್. ಎನ್ ರಾಜೇಶ್,ಅಯ್ಯಪ್ಪ ಮಾಲಧಾರಿಗಳಾದ
ಯೋಗೇಶ್, ಮಂಜುನಾಥ್, ರಾಮಣ್ಣ, ಪುಟ್ಟಾಚಾರ್, ಪ್ರಮೋದ್, ರಾಹುಲ್, ವಿಜಯಕುಮಾರ್, ಪ್ರಶಾಂತ್, ಮಹದೇವಸ್ವಾಮಿ ಮತ್ತು
ಹಲವು ಮಾಲಾಧಾರಿಗಳು, ಅಭಿಮಾನಿಗಳು ಮತ್ತು ಭಕ್ತರು ಹಾಜರಿದ್ದರು.