ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು 2019 ಆಗಸ್ಟ್ 29 ಪ್ರಾರಂಭಿಸಿದ್ದ
ಫಿಟ್ ಇಂಡಿಯಾ ಆಂದೋಲನಕ್ಕೆ ಬೆಂಬಲವಾಗಿ ಭಾನುವಾರ ಮೈಸೂರಿನಲ್ಲಿ
ಸೈಕಲ್ ಮ್ಯಾರಥಾನ್ ಜಾಥಾಗೆ ಚಾಲನೆ ನೀಡಲಾಯಿತು.

2019 ಆಗಸ್ಟ್ 29 ರಂದು
ಫಿಟ್ ಇಂಡಿಯಾ ಆಂದೋಲನಕ್ಕೆ ಮೋದಿ ಅವರು ಚಾಲನೆ ನೀಡಿದ್ದರು.ಇದು ಜನರು ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆ ಮತ್ತು ಕ್ರೀಡೆಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.

ಹಾಗಾಗಿ ಈ ಆಂದೋಲನಕ್ಕೆ ಬೆಂಬಲವಾಗಿ ಮೈಸೂರು ಕೇಂದ್ರ ಜಿ.ಎಸ್.ಟಿ ಆಯೋಗವು ಮೈಸೂರಿನ ಸಿದ್ದಾರ್ಥ ನಗರದ ಜಿ.ಎಸ್.ಟಿ ಭವನದಲ್ಲಿ ಸೈಕಲ್ ಮ್ಯಾರಥಾನ್ ಅಭಿಯಾನ ಹಮ್ಮಿಕೊಂಡಿದ್ದು ಕೇಂದ್ರ ಜಿ.ಎಸ್.ಟಿ ಆಯುಕ್ತರಾದ ಪ್ರದೀಪ್ ಸುಮನ್ ಅವರು ಚಾಲನೆ ನೀಡಿದರು.

ಈ ಅಭಿಯಾನದಲ್ಲಿ ಜಿಲ್ಲಾ ಗ್ರಂಥಾಲಯದ ಉಪ ನಿರ್ದೇಶಕರಾದ ಮಂಜುನಾಥ್,ನಿವೃತ್ತ ಎಸಿಪಿ ಧನಂಜಯ್ ಹಾಗೂ ದೀಪಕ್, ವಿಜಯ ಸಿಂಗ್, ಆದಿಲ್ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
