ಕ್ರೈಸ್ಟ್ ಕಾಲೇಜು ವಿದ್ಯಾರ್ಥಿಗಳಿಂದ ಸ್ವಯಂ ಪ್ರೇರಿತ ರಕ್ತದಾನ

Spread the love

ಮೈಸೂರು: ನಗರದ ಶ್ರೀರಾಂಪುರದಲ್ಲಿರುವ ಕ್ರೈಸ್ಟ್ ಕಾಲೇಜಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಲಯನ್ಸ್ ಬ್ಲಡ್ ಸೆಂಟರ್, ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಈ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಶಿಬಿರದಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 10ಕ್ಕೂ ಹೆಚ್ಚು ಸಿಬ್ಬಂದಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಈ ವೇಳೆ ಪ್ರಾಂಶುಪಾಲರಾದ ಫಾದರ್ ಜಿಂಟೋ ಜೋಸ್, ಶೈಕ್ಷಣಿಕ ಚಟುವಟಿಕೆಗಳ ಸಂಯೋಜಕರಾದ ಫಾದರ್ ರೇಜೋ ಜೇಕಬ್, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ವೇದರಾಜ್ ಕೂರಗಲ್, ರಾ ಸೇ ಯೋ ಘಟಕದ ಸದಸ್ಯ, ಅದ್ಯಾಪಕ ಶಶಿಕಿರಣ್, ರಾಬಿನ್ ಶರತ್ ಕುಮಾರ್, ಮೇರಿ ಅನ್ಸಿಲಾ, ಸ್ಪೂರ್ತಿ, ಆಡಳಿತಾಧಿಕಾರಿ ರಶ್ಮಿ ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಹಾಗೂ ಸಿಬ್ಬಂದಿ ವರ್ಗ, ಸ್ವಯಂಸೇವಕ, ಸೇವಕಿಯರು ಹಾಜರಿದ್ದರು.