ಬೆಳಗಾವಿ: ದಾವಣಗೆರೆ ಜಿಲ್ಲೆಯ ಹರಿಹರದ ಮರಿಯಮ್ ಸ್ಕ್ಯಾಪ್ ಡೀಲರ್ಸ್ ಮೇಲೆ ದಾಳಿ ನಡೆಸಿದ ಕೇಂದ್ರ ಜಿಎಸ್ ಟಿ ಬೆಳಗಾವಿ ಕಚೇರಿಯ ವಿಚಕ್ಷಣಾ ದಳದ ಅಧಿಕಾರಿಗಳು ಸುಮಾರು 21.64ಕೋಟಿ ತೆರಿಗೆ ವಂಚನೆ ಬಯಲಿಗೆ ಎಳೆದಿದ್ದಾರೆ.
ತೆರಿಗೆ ವಂಚನೆ ಸಂಬಂಧ ಮೆರಿಯಮ್ ಸ್ಕ್ರ್ಯಾಪ್ ನ ಮೊಹಮ್ಮದ್ ಸಾಕ್ಲಿಯಾನ್ ಎಂಬಾತನನ್ನು ವಶಕ್ಕೆಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ಸುಳ್ಳು ಬಿಲ್ಲುಗಳನ್ನು ಸಲ್ಲಿಸಿ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್(Input Tax Credit) ಮೋಸ ಮಾಡಿರುವುದು ಗೊತ್ತಾಗಿದೆ.
ನೊಂದಣಿಯಾಗದ ಪೂರೈಕೆದಾರರಿಂದ ಮೆಟಲ್ ಸ್ಕ್ರ್ಯಾಪ್ ಆಮದು ಮಾಡಿಕೊಂಡು ವ್ಯವಹಾರ ನಡೆಸುತ್ತಿರುವುದು ಜೊತೆಗೆ ನಕಲಿ ಜಿ ಎಸ್ ಟಿ ನೊಂದಣಿಗೆ, ನಕಲಿ ದಾಖಲೆಗಳನ್ನು ಬಳಕೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಮೊಹಮ್ಮದ್ ಸಾಕ್ಲೆನ್ ಎಂಬಾತನನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ ಎಂದು ಕೇಂದ್ರ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.