ಮುದ್ದೇಬಿಹಾಳ: ನದಿಯಲ್ಲಿ ಎತ್ತುಗಳಿಗೆ ಸ್ನಾನ ಮಾಡಿಸುವ ವೇಳೆ ಮೊಸಳೆ ಪ್ರತ್ಯಕ್ಷವಾಗಿ ವ್ಯಕ್ತಿ ಯನ್ನ ಎಳೆದೊಯ್ದ ಘಟನೆ ತಾಲೂಕಿನ ಕುಂಚಗನೂರು ಗ್ರಾಮದ ಬಳಿ ನಡೆದಿದೆ.
ತಾಲೂಕಿನ ಕುಂಚಗನೂರು ಗ್ರಾಮದ ಹತ್ತಿರ ಕೃಷ್ಣಾ ನದಿಯಲ್ಲಿ ಈ ಘಟನೆ ನಡೆದಿದ್ದು,ಗ್ರಾಮಸ್ಥ ಕಾಶಪ್ಪ ಹಣಮಂತ ಕಂಬಳಿ (38) ಎಂಬಾತನನ್ನು ಮೊಸಳೆ ಎಳೆದೊಯ್ದಿದೆ.
ಅಮವಾಸ್ಯೆ ಹಿನ್ನೆಲೆ ಎತ್ತುಗಳಿಗೆ ಮೈತೊಳೆಸಲು ನದಿಗೆ ಇಳಿದಾಗ ದಿಢೀರನೆ ಬಂದ ಮೊಸಳೆ ವ್ಯಕ್ತಿಯನ್ನು ಹಿಡಿದು ನೀರೊಳಗೆ ಹೋಗಿಬಿಟ್ಟಿದೆ.
ಅರಣ್ಯ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ನದಿಯಲ್ಲಿ ದೋಣಿ, ತೆಪ್ಪದ ಮೂಲಕ ಶವಕ್ಕಾಗಿ ಶೋಧ ನಡೆಸಿದ್ದಾರೆ.
ಕಾಶಪ್ಪನಿಗೆ ಪತ್ನಿ, ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ನದಿ ದಂಡೆಯಲ್ಲಿ ಸೇರಿದ್ದು ದೇಹಕ್ಕಾಗಿ ಕಾಯುತ್ತಿದ್ದಾರೆ.
ಮುದ್ದೇಬಿಹಾಳ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಸ್ಥಳದಲ್ಲಿದ್ದಾರೆ.