ಮೈಸೂರು: ಫ್ರಾಡ್ ಮೆಸೇಜ್ ಓಪನ್ ಮಾಡಿ 21 ನಿಮಿಷದಲ್ಲಿ ಖದೀಮರು ಕ್ರೆಡಿಟ್ ಕಾರ್ಡ್ ನಿಂದ 1.98 ಲಕ್ಷ ರೂ ದೋಚಿರುವ ಘಟನೆ ನಗರದಲ್ಲಿ ನಡೆದಿದೆ.
ಪ್ಯಾಕರ್ಸ್ ಅಂಡ್ ಮೂವರ್ಸ್ ಮಾಲೀಕ ಚಂದ್ರಶೇಖರ್ ಅವರು ಮೋಸ ಹೋಗಿದ್ದು,ಹೆಬ್ಬಾಳ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಖಾಸಗಿ ಬ್ಯಾಂಕ್ ಒಂದರಲ್ಲಿ ಕ್ರೆಡಿಟ್ ಕಾರ್ಡ್ ಹೊಂದಿರುವ ಚಂದ್ರಶೇಖರ್ ಅವರಿಗೆ ಕರೆ ಬಂದಿದೆ.ಬ್ಯಾಂಕ್ ನಿಂದ ಆಫೀಸರ್ ಗಳು ಮಾತನಾಡಿದಂತೆ ವಂಚಕರು ಪ್ಲ್ಯಾನ್ ಮಾಡಿ ಮಾಹಿತಿ ಪಡೆಯಲು ಯತ್ನಿಸಿದ್ದಾರೆ.
ಇದೊಂದು ಫ್ರಾಡ್ ಕಾಲ್ ಎಂದು ನಿರ್ಧರಿಸಿದ ಚಂದ್ರಶೇಖರ್ ಕರೆ ಸ್ಥಗಿತಗೊಳಿಸಿದ್ದಾರೆ.
ನಂತರ 26 ಸಾವಿರ ಕ್ರೆಡಿಟ್ ಆಗಿರುವುದಾಗಿ ಮೆಸೇಜ್ ಬಂದಿದೆ.ಮೆಸೇಜ್ ಓಪನ್ ಮಾಡಿದ ಕೇವಲ 21 ನಿಮಿಷದಲ್ಲಿ ವಂಚಕರು ಹಂತಹಂತವಾಗಿ 1.98,880ರೂ ಲಪಟಾಯುಸಿದ್ದಾರೆ.
ಕೆಲವೇ ನಿಮಿಷಗಳಲ್ಲಿ ಹಲವು ಓಟಿಪಿ ಗಳು ಬಂದ ಹಿನ್ನಲೆ ಕೂಡಲೇ ಚಂದ್ರಶೇಖರ್ ತಮ್ಮ ಖಾತೆ ಬ್ಲಾಕ್ ಮಾಡಿಸಿ 1930 ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾರೆ.
ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
