ಭೂ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡದಪಾಲಿಕೆ: ಪೀಠೋಪಕರಣ ಜಪ್ತಿ

ಮೈಸೂರು: ಕುಡಿಯುವ ನೀರಿನ ಘಟಕ ಸ್ಥಾಪಿಸಲು ಭೂ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಪೀಠೋಪಕರಣಗಳನ್ನ ಜಪ್ತಿ ಮಾಡಲಾಗಿದೆ.

ಕೋರ್ಟ್ ಆದೇಶದಂತೆ ಮಹಾನಗರ ಪಾಲಿಕೆಯ ಪೀಠೋಪಕರಣಗಳನ್ನ ಜಪ್ತಿ ಮಾಡಲಾಯಿತು.

1994 ರಲ್ಲಿ ರಮ್ಮನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ಘಟಕ ಸ್ಥಾಪಿಸಲು ವಿವಿಧ ಸರ್ವೆ ನಂಬರ್ ನ ಸುಮಾರು 45 ಎಕರೆ ಜಮೀನುಗಳನ್ನು ಪಾಲಿಕೆ ಭೂ ಸ್ವಾಧೀನಪಡಿಸಿಕೊಂಡಿತ್ತು.

ಒಂದು ಎಕರೆಗೆ 45 ಸಾವಿರದಂತೆ ಪರಿಹಾರ ಕೊಡಲು ಮಹಾ ನಗರ ಪಾಲಿಕೆ ಒಪ್ಪಿತ್ತು.ಈ ಮಧ್ಯೆ ಹೆಚ್ಚಿನ‌ ಪರಿಹಾರಕ್ಕಾಗಿ ಗ್ರಾಮಸ್ಥರು ಕೋರ್ಟ್ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ್ದ ನ್ಯಾಯಾಲಯ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡುವಂತೆ 2021 ರಲ್ಲೇ ಆದೇಶ ಹೊರಡಿಸಿತ್ತು. ಆದರೆ ಪರಿಹಾರ ನೀಡಲು ಮಹಾನಗರ ಪಾಲಿಕೆ ವಿಳಂಬ ಮಾಡಿತು.ಇದರಿಂದ ಸಂತ್ರಸ್ತ ರೈತರಿಗೆ ತೊಂದರೆಯಾಯಿತು.
ಈ ಹಿನ್ನೆಲೆಯಲ್ಲಿ ಪಾಲಿಕೆಯ ಚರ ಮಾಲುಗಳ ಜಪ್ತಿ ಮಾಡಲು ಕೋರ್ಟ್ ಆದೇಶ ಹೊರಡಿಸಿತ್ತು.

ಕೋರ್ಟ್ ಅಮೀನರು, ವಕೀಲರ ಸಮ್ಮುಖದಲ್ಲಿ ಪಾಲಿಕೆ ಪಿಠೋಪಕರಣಗಳನ್ನ ಜಪ್ತಿ ಮಾಡಲಾಗಿದೆ.ಇದೀಗ ನಗರ ಪಾಲಿಕೆ ನಡೆಗೆ ಜನ ಶಾಪ ಹಾಕುತ್ತಿದ್ದಾರೆ ಪೀಠೋಪಕರಣ ಜಪ್ತಿ ಮಾಡಿರುವುದು ಅವಮಾನ ಎಂದು ಹೇಳುತ್ತಿದ್ದಾರೆ.