ಮೈಸೂರು: ಸೈನಿಕ ಅಕಾಡೆಮಿಯಲ್ಲಿ ಸಂವಿಧಾನ ದಿನದ ಆಚರಣೆ ಜೊತೆಗೆ ಮುಂಬೈ ಅಟ್ಯಾಕ್ ನಲ್ಲಿ ಮಡಿದ ಯೋಧರನ್ನು ಸ್ಮರಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಮೈಸೂರಿನ ಬೆಳವಾಡಿಯಲ್ಲಿ ರಕ್ಷಣಾ ಇಲಾಖೆಗೆ ಸೇರಲು ಬಯಸುವ ಯುವಜನತೆಗೆ ತರಬೇತಿ ನೀಡುತ್ತಿರುವ ಸೈನಿಕ ಅಕಾಡೆಮಿ, ತರಬೇತಿ ಕೇಂದ್ರದಿಂದ ಯೋದರನ್ನು ಸ್ಮರಿಸಲಾಯಿತು.
ಹಲವಾರು ಬಾಷೆ, ಸಂಸ್ಕೃತಿ, ಸಂಪ್ರದಾಯ, ಬಡವ ಶ್ರೀಮಂತರನ್ನೊಳಗೊಂಡಿರುವ ನಮ್ಮ ದೇಶದಲ್ಲಿ ಎಲ್ಲರಿಗೂ ಸಮಾನತೆಯಿಂದ ಜೀವಸಲು ಹಕ್ಕನ್ನು ನೀಡಿರುವ ಭಾರತ್ನ ರತ್ನ ಬಾಬಾ ಸಾಹೇಬ್ ಡಾಕ್ಟರ್ ಬಿ ಆರ್ ಅಂಬೇಡ್ಕರವರನ್ನು ನೆನೆಸಿ ಸಂವಿಧಾನ ದಿನಾಚರಣೆನ್ನೂ ಆಚರಿಸಲಾಯಿತು.
ಜೊತೆಗೆ ಸಾವಿರಾರು ಜನರ ಪ್ರಾಣ ಕಾಪಾಡಲು ತಮ್ಮ ಜೀವ ಕಳೆದುಕೊಂಡ ಎನ್ ಎಸ್ ಜಿ ಕಮಾಂಡೋ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಸಹಪಾಠಿ ಕಮಾಂಡೋ ಗಜೇಂದ್ರ ಸಿಂಗ್, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಜೀವ ಕಳೆದುಕೊಂಡ ಅಮಾಯಕರನ್ನು ನೆನೆಸಿ ಶ್ರದ್ದಾನಂಜಲಿ ಸಲ್ಲಿಸಲಾಯಿತು.
ಸೇನೆಗೆ ಸೇರಲು ತಯಾರಾಗುತ್ತಿರುವ ಯುವ ಸೈನಿಕರಿಗೆ ಸತ್ಯ ಘಟನೆಗಳನ್ನು ವಿವರಿಸಿದ
ಮಾಜಿ ಕಮಾಂಡೋ ಮತ್ತು ಸೈನಿಕ ಅಕಾಡೆಮಿಯ ಸಂಸ್ಥಾಪಕರು ಶ್ರೀಧರ ಸಿ ಎಂ ಅವರು,ನಾನು ಕೂಡ ಎನ್ ಎಸ್ ಜಿ ಕಮಾಂಡೋನಲ್ಲಿ ಇದ್ದು ಪುಣ್ಯವಂತ ಹುತಾತ್ಮ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರಿಂದ ತರಬೇತಿ ಪಡೆದುಕೊಂಡಿದ್ದು ನನಗೆ ಹೆಮ್ಮೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಸಂತೋಷ ಮತ್ತು ಸೇನೆಗೆ ಸೇರಲು ತಯಾರಾಗುತಿರುವ ಯುವ ಸೈನಿಕರು ಉಪಸ್ಥಿತರಿದ್ದರು.
