ಮೈಸೂರು: ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಸಂವಿಧಾನ ಸಮರ್ಪಣೆ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಂವಿಧಾನ ಕರುಡು ಸಮಿತಿಯ ಕಾರ್ಯ ಮತ್ತು ಅದರ ಅಧ್ಯಕ್ಷರಾಗಿ ಮಹತ್ವದ ಜವಾಬ್ದಾರಿಯುತ ಕರ್ತವ್ಯ ನಿರ್ವಹಿಸಿದ ಡಾ. ಬಿ. ಆರ್. ಅಂಬೇಡ್ಕರ್ ಅವರ ಅವಿರತ ಶ್ರಮದ ಕುರಿತು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡಲಾಯಿತು.
ಸಂವಿಧಾನದ ಅಗತ್ಯ, ಮಹತ್ವ ಮತ್ತು ಪರಿಣಾಮಕಾರಿ ಜಾರಿ ಕುರಿತು ಕಾಲೇಜು ಸಾಂಸ್ಕೃತಿಕ ಸಮಿತಿಯ ಸಂಚಾಲಕರೂ, ಸಹ ಪ್ರಾಧ್ಯಾಪಕರಾದ ಗೋವಿಂದರಾಜು ಅವರು ಪ್ರಸ್ತಾವಿಕವಾಗಿ ಮಾತನಾಡಿದರು.
ಎನ್. ಎಸ್. ಎಸ್ ಅಧಿಕಾರಿ ಡಾ. ಲಕ್ಷ್ಮಣ ಎಂ ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಿದರು.
ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಥಮ ಬಹುಮಾನ ವಿಜೇತರಾದ ಸ್ನಾತಕೋತ್ತರ ವಿಭಾಗದ ಲತಾ ಎ. ಎಸ್. ದ್ವಿತೀಯ ಬಹುಮಾನ ಕವನ ಆರ್. ಎಲ್, ಹಾಗೂ ತೃತೀಯ ಬಹುಮಾನ ಪಡೆದ ಸ್ನಾತಕ ವಿಭಾಗದ ಪ್ರಕೃತಿ ವಿ ಅವರಿಗೆ ಪ್ರಾoಶುಪಾಲ ಡಾ. ಅಬ್ದುಲ್ ರಹಿಮಾನ್ ಎಂ, ಆಂತರಿಕ ಗುಣಮಟ್ಟ ಭರವಸೆ ಕೋಶದ ಡಾ. ನಂದಕುಮಾರ್. ವಿ ಹಾಗೂ ಅದೀಕ್ಷಕರಾದ ಬಸವರಾಜು ಅವರುಗಳು ಬಿ.ಆರ್ ಆವರುಗಳು ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಪಕರ ಸಂಘದ ಕಾರ್ಯದರ್ಶಿ ಡಾ. ರಮೇಶ ಕೆ. ಎಲ್,
ಸ್ನಾತಕೋತ್ತರ ವಿಭಾಗದ ಅಧ್ಯಪಕರು, ಅದ್ಯಾಪಾಕೇತರರು, ವಿದ್ಯಾರ್ಥಿಗಳು ಹಾಜರಿದ್ದರು.
