ಬಸವೇಶ್ವರರ ಪುತ್ಥಳಿಗೆ ಕಾಂಗ್ರೆಸ್ ನಾಯಕರ ಮಾಲಾರ್ಪಣೆ

ಮೈಸೂರು: ಬಸವೇಶ್ವರ 892ನೇ ಜಯಂತಿಯ ಅಂಗವಾಗಿ ಕಾಂಗ್ರೆಸ್ ನಾಯಕರು ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮಿಸಿ ದರು.

ಇಂದು ಸಾಂಸ್ಕೃತಿಕ ನಾಯಕ ಜಗಜ್ಯೋತಿ 12ನೇ ಶತಮಾನದ ಮಹಾನ್ ನಾಯಕ ಶ್ರೀ ಬಸವೇಶ್ವರ ಜಯಂತಿ.

ಹಾಗಾಗಿ ಮೈಸೂರಿನ ಗನ್ ಹೌಸ್ ಬಳಿ ಇರುವ ಬಸವೇಶ್ವರರ ಪುತ್ತಳಿಗೆ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾಕ್ಟರ್ ಬಿ ಜೆ ವಿಜಯ್ ಕುಮಾರ್ ಮತ್ತು ಚಾಮುಂಡೇಶ್ವರಿ ಕ್ಷೇತ್ರ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ಮಾಲಾರ್ಪಣೆ ಮಾಡಿದರು.

12ನೇ ಶತಮಾನದ ಮಹಾನ್ ನಾಯಕ
ಬಸವೇಶ್ವರರು.ಅವರ ಆದರ್ಶಗಳನ್ನು ಎಲ್ಲರೂ ಪಾಲಿಸೋಣ ಎಂದು ನಾಯಕರು ಕರೆ ನೀಡಿದರು.

ಈ ವೇಳೆ ಕೆಪಿಸಿಸಿಯ ಭಾಸ್ಕರ್, ಪಂಚಾಯತ್ ರಾಜ್ ಕಾರ್ಯದರ್ಶಿ ಲೋಕೇಶ್, ಮೈಸೂರು ಜಿಲ್ಲಾ ಗ್ರಾಮಂತರ ಎಸ್ ಟಿ ಘಟಕದ ಅಧ್ಯಕ್ಷ ಮಹೇಶ್, ರಾಜ್ಯ ಕಾಂಗ್ರೆಸ್ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಫ್ರಾನ್ಸಿಸ್, ಸೇವಾದಳ ಕಾರ್ಯಧ್ಯಕ್ಷ ಮೋಹನ್ ಕುಮಾರ್, ಡಿಸಿಸಿ ಸದಸ್ಯ ಕೃಷ್ಣಪ್ಪ ಗಂಟಯ್ಯ, ಕಾಂಗ್ರೆಸ್ ಮೀಡಿಯಾ ವ್ಯವಸ್ಥಾಪಕರ ರಾಹುಲ್ ಮತ್ತು ನಿತೀಶ್ ಗೌಡ ಹಾಜರಿದ್ದರು.