ಕಾಂಗ್ರೆಸ್ ನವರು ಹತ್ತು ಜನ್ಮ ಎತ್ತಿ ಬಂದರೂ ಜೆಡಿಎಸ್ ನ ಏನು ಮಾಡಲಾಗಲ್ಲ:ಹೆಚ್ ಡಿ ಕೆ

Spread the love

ರಾಮನಗರ: ಕಾಂಗ್ರೆಸ್ ನವರು ಹತ್ತು ಜನ್ಮ ಎತ್ತಿ ಬಂದರೂ ಜೆಡಿಎಸ್ ಪಕ್ಷವನ್ನ ಏನೂ ಮಾಡೋದಕ್ಕಾಗಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ ‌

ನಾನು ಶಪಥ ಮಾಡ್ತೇನೆ‌, ರಾಮನಗರದಿಂದ ಜೆಡಿಎಸ್ ಖಾಲಿ ಮಾಡಿಸಿದ್ದೇನೆ ಅಂದವರಿಗೆ ಉತ್ತರ ಕೊಟ್ಟೇ ಕೊಡುತ್ತೇನೆ. ಮುಂದಿನ ಚುನಾವಣೆಯಲ್ಲಿ ನಾಲ್ಕಕ್ಕೆ ನಾಲ್ಕೂ ಸ್ಥಾನವನ್ನು ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಗೆಲ್ಲುತ್ತೆ‌ ಎಂದು ಕಡಕ್ಕಾಗಿ ಹೇಳಿದರು.

ಮಾಧ್ಯಮಗಳ ಜತೆ ಮಾತನಾಡಿದ ಹೆಚ್ ಡಿ ಕೆ,ನಮ್ಮನ್ನ ಅಷ್ಟು ಸುಲಭವಾಗಿ ಜಿಲ್ಲೆಯಿಂದ ಖಾಲಿ ಮಾಡಿಸಲು ಸಾಧ್ಯವಿಲ್ಲ. ನನ್ನ, ನಿಖಿಲ್ ರಾಜಕೀಯ ಇಲ್ಲಿಂದಲೇ ಆರಂಭ, ಇಲ್ಲಿಯೇ ಅಂತ್ಯ. ಮುಂದಿನ ಚುನಾವಣೆಯಲ್ಲಿ ಇದೇ ಚನ್ನಪಟ್ಟಣದಲ್ಲಿ 25 ಸಾವಿರ ಲೀಡ್ ಬರುತ್ತೆ ಎಂದು ಟಾಂಗ್ ನೀಡಿದರು.

ಸಿಎಂ ಸಿದ್ದರಾಮಯ್ಯ ಹಾಸನದಲ್ಲಿ ಅಹಿಂದ ಸಮಾವೇಶ ವಿಚಾರಕ್ಕೆ ಮಾತನಾಡಿದ ಅವರು, ಯಾವ ಪುರುಷಾರ್ಥಕ್ಕೆ ಅಹಿಂದ ಸಮಾವೇಶ ಮಾಡ್ತಾ ಇದಾರೊ. 17 ತಿಂಗಳಿನಿಂದ ಆ ಸಮುದಾಯಕ್ಕೆ ಏನು ರಕ್ಷಣೆ ಕೊಟ್ಟಿದ್ದಾರೆ,ಅವರ ಸ್ವಾಭಿಮಾನ ಉಳಿಸುವ ಕೆಲಸ ಮಾಡಿದ್ದೀರಾ,ಅವರ ಹಣವನ್ನ ಲೂಟಿ ಮಾಡಿರೋದೇ ಕೊಡುಗೆಯೇನು ಎಂದು ಕಾರವಾಗಿ ಪ್ರಶ್ನಿಸಿದರು.

ಎರಡನೇ ಬಾರಿ ಸಿಎಂ ಆಗಿದ್ದೀರಿ, ಆ ಸಮುದಾಯಕ್ಕೆ ಏನು ಕೊಡುಗೆ ಕೊಟ್ಟಿದ್ದೀರಿ, ಇದನ್ನ ಭಾಷಣದಲ್ಲಿ ಹೇಳಿ ಎಂದು ಸಿಎಂ ಸಿದ್ದರಾಮಯ್ಯ ಅವರನ್ನ ಕುಮಾರಸ್ವಾಮಿ ಪ್ರಶ್ನಿಸಿದರು.

ಒಕ್ಕಲಿಗ ಸ್ವಾಮೀಜಿಗೆ ನೋಟಿಸ್ ನೀಡಿರೋ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಸ್ವಾಮೀಜಿಗೆ ನೋಟಿಸ್ ಕೊಟ್ಟಿರುವವರು ನನ್ನ ಮೇಲೆ ವರ್ಣನಿಂದನೆ ಮಾಡಿದ್ರಲ್ಲ ಅವರ ಮೇಲೆ ಎನು ಕ್ರಮ ಕೈಗೊಂಡರು ಒಂದು ಕೇಸ್ ಹಾಕಲಿಲ್ಲ, ಯಾಕೆ ನೋಟಿಸ್ ಕೊಟ್ಟಿಲ್ಲ ಎಂದು ಗುಡುಗಿದರು.

ಚನ್ನಪಟ್ಟಣ ಕ್ಷೇತ್ರಕ್ಕೆ ದೇವೇಗೌಡರು ಏನ್ ಮಾಡಿದ್ದಾರೆ ಅಂತ ಕೇಳ್ತಾರಲ್ಲ. ಚನ್ನಪಟ್ಟಣ ಕನಕಪುರಕ್ಕೆ ವಿದ್ಯುತ್ ಕೊಟ್ಟವರು ಯಾರು, ನಂಜುಡಪ್ಪ ವರದಿಯಲ್ಲಿ 173 ಸ್ಥಾನದಲ್ಲಿತ್ತು. ಈ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ. ನೀವು ನಮ್ಮ ಪಕ್ಷದ ಬಗ್ಗೆ ಚರ್ಚೆ ಮಾಡ್ತೀರಲ್ಲಾ, 2008 ರ ಬಳಿಕ 2013 ಕ್ಕೆ ಏನಾಯ್ತು. 2018ಕ್ಕೆ ನಮ್ಮ ಹತ್ರ ಬಂದಿದ್ರಲ್ಲ ಇವತ್ತು 136 ಅಂತ ಹೇಳ್ತೀರಲ್ಲ, ಬಳಿಕ 36 ಸೀಟು ಗೆಲ್ಲಿ ನೋಡೋಣ ಸಿಎಂ ಸಿದ್ರಾಮಯ್ಯ ನವರೇ ನಿಮಗೆ ನಾಚಿಕೆ ಇದೇಯ ಎಂದು ಕಿಡಿಕಾರಿದರು.

ಟಾಸ್ಕ್ ಕೊಟ್ಟರೆ ಜೆಡಿಎಸ್ ಶಾಸಕರ ಆಪರೇಷನ್ ಎಂಬ ಸಿಪಿವೈ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿ ಕೆ,ಅದರ ಬಗ್ಗೆ ನಾನು ಈಗ ಚರ್ಚೆ ಮಾಡಲ್ಲ ಪಾಪ ಕಾಂಗ್ರೆಸ್ ನಿಂದ 30‌ ಮಂದಿಯನ್ನ ಬಿಜೆಪಿಗೆ ಕರೆತಂದಿದ್ದು ನೋಡಿದ್ದೇನೆ.ಕಳೆದ 17 ತಿಂಗಳಲ್ಲಿ 30 ರಿಂದ 35 ಜನರ ಹಿಡಿದುಕೊಂಡು ಓಡಾಡ್ತಿದ್ರು. ಅಂತವರ ಬಗ್ಗೆ ಚರ್ಚೆ ಅನಾವಶ್ಯಕ ಎಂದು ತಿಳಿಸಿದರು.

ನಮ್ಮ ಪಕ್ಷದ ಶಾಸಕರು, ಮಾಜಿ ಶಾಸಕರು ಮೊನ್ನೆ ಅಚ್ಚುಕಟ್ಟಾಗಿ ಚುನಾವಣೆ ಮಾಡಿದ್ದಾರೆ. ಮುಂದೆ ಈ ಪಕ್ಷ ಅಧಿಕಾರಕ್ಕೆ ತರಲು ಅವರಿಗೆ ವಿಶ್ವಾಸ ಮೂಡಿದೆ. ನಿಖಿಲ್ ನೇತೃತ್ವದಲ್ಲಿ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುತ್ತೇವೆ, ಸಂಕ್ರಾಂತಿಯಿಂದ ಪಕ್ಷ ಸಂಘಟನೆ ಕಾರ್ಯಕ್ರಮ ಆರಂಭಿಸುತ್ತೇವೆ. ಚುನಾವಣೆ ಸೋತಂತ ಸನ್ನಿವೇಶದಲ್ಲಿ ಕಾರ್ಯಕರ್ತರಲ್ಲಿ ಆಘಾತ ಇರುವ ಕಾರಣ ಬಹಳಷ್ಟು ಜನ‌ ಬರುತ್ತಾರೆ ಅಂತ ನಿರೀಕ್ಷೆ ಇರಲಿಲ್ಲ ಅಂತ ನಿಖಿಲ್ ಕುಮಾರಸ್ವಾಮಿ ಅಂದಿದ್ದಾರೆ.

ಮಂಡ್ಯ ಲೋಕಸಭೆಗೆ ನಿಖಿಲ್ ರನ್ನು ನಿಲ್ಲಿಸಬೇಕು ಅಂತ ಸಾ ರಾ ಮಹೇಶ್ ಸಾವಿರ ಸಲ ಹೇಳಿದ್ರು ಆದರೆ‌ ನಿಖಿಲ್ ನಾನು ಮಂಡ್ಯಕ್ಕೆ ಬರೊದು ಸೂಕ್ತ ಅಲ್ಲ ಅಂತ ಕಠಿಣ ನಿರ್ಧಾರ ಮಾಡಿದ್ರು. ನಿಖಿಲ್ ಅಧಿಕಾರಕ್ಕೆ ಹಪಹಪಿಸಿದ್ರೆ ಆಗಲೇ ಮಂಡ್ಯದಿಂದ ಚುನಾವಣೆಗೆ ನಿಲ್ಲಬಹುದಿತ್ತು ಎಂದು ಕುಮಾರಸ್ವಾಮಿ ಹೇಳಿದರು.