ಅರಕಲಗೂಡು: ಸುವರ್ಣ ಕರ್ನಾಟಕ ರಕ್ಷಣಾ ಸೇನೆಯವರು ಕನ್ನಡ ಸೇವೆ ಜೊತೆ,ಜೊತೆಗೆ ಶಾಲಾ,ಕಾಲೇಜುಗಳಿಗೂ ಭೇಟಿ ನೀಡಿ ಪ್ರತಿಭಾವಂತರು,ಕ್ರೀಡಾಪಟುಗಳನ್ನು ಅಭಿನಂದಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

ಅರಕಲಗೂಡು ತಾಲೂಕಿನ ಕೊಣನೂರು ಹೋಬಳಿಯ ಸಿದ್ದಾಪುರ ಗ್ರಾಮದ ಬಡ ಕುಟುಂಬದ ರೈತ ಸ್ವಾಮಿ ಗೌಡರ ಮಗ ಸುದರ್ಶನ್ ಎಸ್ ಎಂಬ ಯುವಕ ಸೇರಿದಂತೆ ಹಕವಾರು ಪ್ರತಿಭೆಗಳನ್ನು ಸುವರ್ಣ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ಅಭಿನಂದಿಸಲಾಯಿತು.

ಸುದರ್ಶನ್ ಅವರು ಅರಕಲಗೂಡು ತಾಲೂಕು ಮಟ್ಟದಲ್ಲಿ 800 ಮೀಟರ್ ರನ್ನಿಂಗ್ ನಲ್ಲಿ ಪ್ರಥಮ ಸ್ಥಾನ, ದಸರಾ ಕ್ರೀಡೆ ರನ್ನಿಂಗ್ ನಲ್ಲಿ ಪ್ರಥಮ ಸ್ಥಾನ ಹಾಗೂ ಹಾಸನ ಜಿಲ್ಲಾ ಮಟ್ಟದಲ್ಲಿ 800 ಮೀಟರ್ ರನ್ನಿಂಗ್ ನಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಅರಕಲಗೂಡು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.
ಸಿದ್ದಾಪುರ ಗೇಟ್ ನ ಸರ್ಕಾರಿ ಕಾಲೇಜಿನಲ್ಲಿ ಓದುತ್ತಿರುವ ಈ ಯುವಕ ಇಡೀ ಕಾಲೇಜು ಹಾಗೂ ಸಿದ್ದಾಪುರ ಗ್ರಾಮ ಹಾಗೂ ಅರಕಲಗೂಡು ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಈ ಯುವಕ ಮುಂದೆ ರಾಜ್ಯಮಟ್ಟದಲ್ಲೂ ಜಯಶೀಲರಾಗಿ ಬರಬೇಕು ಎಂದು ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಸಂಸ್ಥಾಪಕ ಅಧ್ಯಕ್ಷ ಡಾ.ಎಸ್.ರಾಘವೇಂದ್ರ ಗೌಡರು ಮತ್ತು ಪದಾಧಿಕಾರಿಗಳು ಹಾರೈಸಿದ್ದಾರೆ.

ಸುದರ್ಶನ್ ಮುಂದಿನ ವಿದ್ಯಾಭ್ಯಾಸ ಹಾಗೂ ಭವಿಷ್ಯ ಉಜ್ವಲವಾಗಿರಲಿ.ಕಡು ಬಡವನಾದರೂ ಸಾಧನೆ ಎಂಬುದು ಇತಿಹಾಸ ಬರೆಯುವಂತ ಶಿಖರವಾಗಿರಬೇಕು ಎಂದು ಹೇಳಿದ್ದಾರೆ.
ಇಂತಹ ಬಡತನದಲ್ಲಿ ಹುಟ್ಟಿರುವ ಮಕ್ಕಳಿಗೆ ಸರ್ಕಾರ, ಜನಪ್ರತಿನಿಧಿಗಳು,ಶಾಲಾ ಶಿಕ್ಷಕರು ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು ಹೆಚ್ಚು ಪ್ರೋತ್ಸಾಹ ನೀಡಬೇಕು ಮತ್ತು ಪ್ರೋತ್ಸಾಹ ಧನ ಕೊಡುವುದರ ಮೂಲಕ ಇವರ ಮುಂದಿನ ಭವಿಷ್ಯ ಹಾಗೂ ಸಾಧನೆ ಮಾಡಲು ನಾವೆಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಿದ್ದಾಪುರ ಗ್ರಾಮದ ಬಡ ಕುಟುಂಬದ ರೈತ ರಾಜಾ ಚಾರಿ ಮಗ ಕಿರಣ್ ಎಸ್ ಆರ್ ಕೂಡಾ ಸಿದ್ದಾಪುರ ಗೇಟ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದಾರೆ.
ಈ ಯುವಕ ಕೂಡಾ ಅರಕಲಗೂಡು ತಾಲೂಕಿನ 3000 ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಯಶೀಲರಾಗಿ ಕೀರ್ತಿ ತಂದಿದ್ದಾರೆ.
ಜತೆಗೆ ಹಾಸನ ಜಿಲ್ಲಾ 3000 ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅರಕಲಗೂಡು ತಾಲ್ಲೂಕಿಗೆ ಹಾಗೂ ಹಾಸನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಈ ಯುವಕನ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಆಶಿಸಿದೆ.

ಇದೇ ತಾಲೂಕಿನ ಕೊಣನೂರು ಹೋಬಳಿ ಮರಿಯ ನಗರದ ದಿವ್ಯ ಜ್ಯೋತಿ ಶಾಲೆಯ ಹೆಣ್ಣು ಮಕ್ಕಳು ಕೂಡ ಹಾಸನ ಜಿಲ್ಲಾ ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅರಕಲಗೂಡು ತಾಲೂಕಿಗೆ ಹಾಗೂ ಹಾಸನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಈ ಮಕ್ಕಳಿಗೂ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಅಭಿನಂದನೆಗಳನ್ನು ಸಲ್ಲಿಸಿದೆ.
ಈ ಶಾಲೆ ಮಕ್ಕಳು ಕೂಡ ರಾಜ್ಯಮಟ್ಟದಲ್ಲಿ ಜಯಶೀಲರಾಗಿ ಬರಬೇಕೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಈ ಎಲ್ಲಾ ಮಕ್ಕಳಿಗಾಗಿಯೇ ಅಭಿನಂದನ ಕಾರ್ಯಕ್ರಮ ಹಮ್ಮಿಕೊಂಡು ಗೌರವ ಪೂರ್ವಕವಾಗಿ ಅಭಿನಂದಿಸಲಾಯಿತು.
ಜತೆಗೆ ಎಲ್ಲಾ ಮಕ್ಕಳಿಗೂ ಆಯಾ ಶಾಲೆಯ ದೈಹಿಕ ಶಿಕ್ಷಕರಿಗೂ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಹೇಶ್, ಅಶೋಕ್ ಹಾಗೂ ಕಾಲೇಜಿನ ಮಕ್ಕಳು ಹಾಗೂ ಸೇನೆಯ ಪದಾಧಿಕಾರಿಗಳಾದ ರಾಜ್ಯ ಮಹಿಳಾ ಅಧ್ಯಕ್ಷೆ ಮಧುಶ್ರೀ ಗೌಡ, ದನಪಾಲ್ ಗೌಡ,ತಾಲೂಕು ಅಧ್ಯಕ್ಷರಾದ ಗಿರೀಶ್, ರಮೇಶ್ ಗೌಡ,ಪ್ರಕಾಶ್ ಗೌಡ, ವೆಂಕಟೇಶ್ವರ, ಯೋಗೇಶ್,ಜಗದೀಶ್ ಗೌಡ, ಆನಂದಾಚಾರ್, ಅನಿತಾಚಾರ್, ಬೇಕ್ರಿ ರಮೇಶ್, ನಂಜೇಗೌಡ,ದಿವಾಕರ್ ಗೌಡ, ಮಣಿ, ಮಲ್ಲೇಶ್, ಒಡೆನೂರು ಮಂಜು, ಶಾಮಿಯಾನ ಕೃಷ್ಣೇಗೌಡ, ಸುನಿಲ್ ಮತ್ತಿತರರು ಕ್ರೀಡಾಪಟುಗಳ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದರು.