ಮೈಸೂರು: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣರವರಿಗೆ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಸಂತಾಪ ಸಲ್ಲಿಸಲಾಯಿತು.
ನಗರದ ಡಿ ಸುಬ್ಬಯ್ಯ ರಸ್ತೆಯಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಎಸ್ ಎಂ ಕೃಷ್ಣ ರವರ ಭಾವಚಿತ್ರ ಹಿಡಿದು ಮೌನಾಚರಣೆ ಮಾಡುವ ಮೂಲಕ ಸಂತಾಪ ಸಲ್ಲಿಸಲಾಯಿತು.
ಅಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಯುವ ಮುಖಂಡರಾದ ಸಂದೀಪ್, ನಿರೂಪಕ ಅಜಯ್ ಶಾಸ್ತ್ರಿ,ಎಸ್ ಎನ್ ರಾಜೇಶ್, ರವಿಚಂದ್ರ,ಆಲನಹಳ್ಳಿ
ಎಂ ಎನ್ ಚೇತನ್ ಗೌಡ, ಸುಚಿಂದ್ರ, ಮಹಾನ್ ಶ್ರೇಯಸ್, ರಾಕೇಶ್ ಮತ್ತಿತರರು ಸಂತಾಪ ಸಭೆಯಲ್ಲಿ ಭಾಗವಹಿಸಿದ್ದರು.
