ಮೈಸೂರು: ಕಾಲೇಜುಗಳಲ್ಲಿ ಉತ್ತಮ ಶೈಕ್ಷಣಿಕ ವ್ಯವಸ್ಥೆ ಮತ್ತು ವಿದ್ಯಾರ್ಥಿ ಸ್ನೇಹಿ ವಾತಾವರಣ ನಿರ್ಮಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ) ಉಪ ನಿರ್ದೇಶಕರಾದ ಎಂ.ಪಿ ನಾಗಮ್ಮ ಅವರು ಸಲಹೆ ನೀಡಿದರು.
ಸರ್ಕಾರಿ ಮಹಾರಾಜ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಮೈಸೂರು ಜಿಲ್ಲೆಯ ಪದವಿ ಪೂರ್ವ ಕಾಲೇಜಿನ ಸರ್ಕಾರಿ ,ಅನುದಾನಿತ ,ಅನುದಾನ ರಹಿತ ಕಾಲೇಜುಗಳ ಪ್ರಾಂಶುಪಾಲರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಲೇಜುಗಳ ಪ್ರಾಂಶುಪಾಲರು ಇಲಾಖಾ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆಶಿಸಿದ ಅವರು, ಸ್ಯಾಟ್ಸ,ಪರೀಕ್ಷೆಗಳು, ಅಂಕಗಳ ಇಂದೀಕರಣ,ಸಾಂಸ್ಕ್ರತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ವರ್ಷ ನಮ್ಮ ಜಿಲ್ಲೆಗೆ ರಾಜ್ಯಮಟ್ಟದ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ ನೀಡಲಾಗಿದ್ದು ಈ ಕ್ರೀಡಾಕೂಟದ ಯಶಸ್ವಿಗೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ಎಂ.ಪಿ ನಾಗಮ್ಮ ಮನವಿ ಮಾಡಿದರು.
ಮೈಸೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಡಾ. ಶಿವರಾಜ‌್ ಅವರು ಮಾತನಾಡಿ ಸೆಪ್ಟೆಂಬರ್ ೬ರಂದು ನಡೆಯುವ ಬೃಹತ್ ಉದ್ಯೋಗ ಮೇಳದಲ್ಲಿ ಜಿಲ್ಲೆಯ ಎಲ್ಲಾ ಪ್ರಾಂಶುಪಾಲರು ತಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳನ್ನು ನೊಂದಾಯಿಸಿಕೊಳ್ಳುವ ಮೂಲಕ ಅರ್ಹ ನಿರುದ್ಯೊಗಿ ವ್ಯಕ್ತಿಗಳಿಗೆ ಹಾಗು ವಿದ್ಯಾರ್ಥಿಗಳಿಗೆ ಉದ್ಯೋಗ ಲಭಿಸುವಂತಹ ಅಮೂಲ್ಯವಾದ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯ ಸರ್ಕಾರಿ ವಿಜ್ಞಾನ ಕಾಲೇಜುಗಳಲ್ಲಿ ಸಿಇಟಿ ಆನ್ಲೈನ್ ತರಗತಿಗಳು ಯಾವ ರೀತಿಯಲಿ ನಿಯಮಗಳನ್ನು ಪಾಲಿಸಬೇಕು ಎಂಬುದರ ಬಗ್ಗೆ ನೋಡಲ್ ಅಧಿಕಾರಿ ಎನ್. ಎಂ ವಿಜಯೇಂದ್ರ ಕುಮಾರ್ ಅವರು ಮಾಹಿತಿ ನೀಡಿದರು .
ಇನ್ ಸ್ಪೈರ್ ಮಾನಕ್ ನ ನೋಡಲ್ ಅಧಿಕಾರಿ ರವಿಶಂಕರ್ ಅವರು ಯುಡೈಸ್ ಮೂಲಕ ಹೇಗೆ ನೋಂದಣಿ ಮಾಡಬೇಕು ಎಂಬುದರ ಬಗ್ಗೆ ತಿಳಿಸಿದರು.
ಆಂಗ್ಲ ಭಾಷೆಯ ಕೈಪಿಡಿಯ ಬಗ್ಗೆ ಶಿವಶಂಕರ್ ಅವರು ಮಾತನಾಡಿದರು
.
ಕ್ರೀಡಾ ಸಂಚಾಲಕರಾದ ಮುರಳೀಧರ್ ಮಾತನಾಡಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕ್ರೀಡೆಗಳ ಅಯೋಜನೆಯ ಬಗ್ಗೆ ಯಾವ ರೀತಿಯಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂಬುದರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸಂಘದ ಅಧ್ಯಕ್ಷರಾದ ಹನುಮಂತ ರಾವ್, ಉಪಾಧ್ಯಕ್ಷರಾದ ಸತ್ಯಪ್ರಸಾದ್ ಚಂದ್ರಶೇಖರ್ ಅವರು ಉಪಸ್ಥಿತರಿದ್ದರು.
ಉದಯಶಂಕರ್,ವಿಷಕಂಠ ಮೂರ್ತಿ, ರಾಮೇಗೌಡ ಮಾತನಾಡಿದರು .
ಕಾರ್ಯಕ್ರಮದಲ್ಲಿ ನಂಜನಗೂಡು ತಾಲೂಕಿನ ನೋಡಲ ಕಾಲೇಜಿನ ಪ್ರಾಂಶುಪಾಲರಾದ ಸಿ ಆರ್ ದಿನೇಶ್ ಹಾಗೂ ಜಿಲ್ಲೆಯ ಎಲ್ಲಾ ನೋಡಲ್ ಕಾಲೇಜಿನ ಪ್ರಾಂಶುಪಾಲರು ಹಾಜರಿದ್ದರು.