ಪತ್ರಗಳಿಗೆ ಸೀಮಿತವಾದ ನೀತಿನಿಯಮಗಳ ಆದೇಶ ಪತ್ರಗಳು..!

(ವರದಿ: ರಾಮಸಮುದ್ರ ಎಸ್‌.ವೀರಭದ್ರಸ್ವಾಮಿ)

ಚಾಮರಾಜನಗರ: ಯಾವುದೇ ರಸ್ತೆ ಸಂಚಾರ ಅವ್ಯವಸ್ಥೆ ಉಂಟಾಗದಂತೆ ಪಾರ್ಕಿಂಗ್ ಹಾಗೂ ದ್ಚನಿವರ್ದಕಗಳ ನಿಯಮಗಳನ್ನೊಳಗೊಂಡ ನಂತರ ಕಾರ್ಯಕ್ರಮ ಆಯೋಜನೆಗಳಿಗೆ ಅನುಮತಿ ನೀಡಬೇಕು ಎಂಬ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

ಇತ್ತೀಚೆಗೆ ಚಾಮರಾಜನಗರ ಪಟ್ಟಣದೊಳಗೆ ಅನುಮತಿಸತಕ್ಕ ಕಾರ್ಯಕ್ರಮಗಳಿಗೆ ಅತಿಥಿಗಳನ್ನ ಕರೆಯೋದು ಸಹಜ..ಕೆಲವರಂತು ಅವರವರ ಅನುಕೂಲಕ್ಕೆ ತಕ್ಕಂತೆ ಅತಿಥಿಗಳನ್ನ ಕರೆಯುವುದು,ಉದ್ಘಾಟಸುವುದು, ಸನ್ಮಾನ ಸ್ವೀಕರಿಸುವುದು ಸಾಮಾನ್ಯವಾಗಿದೆ.

ಕಾರ್ಯಕ್ರಮಗಳಿಗೆ ಪೊಲೀಸ್ ವರಿಷ್ಟಾದಿಕಾರಿಗಳನ್ನ ಕರೆದರೆ ಪಾರ್ಕಿಂಗ್ ವ್ಯವಸ್ಥೆ ಸುಗಮವಾಗಿ ಉಚಿತವಾಗಿ ನೋಡಿಕೊಳ್ತಾರೆ
ಅಂತ ಗಣ್ಯರಾಗಿ ಪರಿಗಣಿಸೋದು ಸಹಜವಾಗಿದೆ.
ಅಂತಹ ಕಾರ್ಯಕ್ರಮಗಳಿಗೆ ಇಂತಿಷ್ಟು ಸಿಬ್ಬಂದಿಗಳನ್ನ ನಿಯೋಜನೆ ಮಾಡಿಕೊಳ್ಳಲು ನಿರ್ದಿಷ್ಟ ಹಣ ಪಾವತಿಸಬೇಕು..ಆದರೆ ಬಹುತೇಕವಾಗಿ ಹಣ ಪಾವತಿಸಿಕೊಳ್ಳದೆ ಬಂದೂಬಸ್ತ್ ಗೆ ನಿಯೋಜಿಸ್ತಾರೆ ಎಂಬ ಆರೋಪಗಳು ಕೇಳಿಬರುತ್ತಿದೆ.
ಕಾರ್ಯಕ್ರಮ ನಡೆದರೆ ಅಲ್ಲಿಗೆ ಒಬ್ಬ ಇನ್ಸ್ ಪೆಕ್ಟರ್ ಮೂರ್ನಾಲ್ಕು ಎಎಸ್ಐ, ಎಂಟು ಹತ್ತು ಪೇದೆಗಳನ್ನ ನಿಯೋಜನೆ ಮಾಡುವುದು ಎಷ್ಟು ಸೂಕ್ತ ಎಂಬುದು ಕೆಲವರ ವಾದ.
ಹಾಗಿಯೆ ಅಂಗಡಿ ಮಳಿಗೆ ತೆರೆದಾಗ ಕಸದ ನಿರ್ವಹಣೆ, ಶುಲ್ಕದ ಬಗ್ಗೆ ನಗರಸಭಾ ಅದಿಕಾರಿಗಳು ಕೇಳಬಾರದೆಂದರೆ ಅಂತಹಾ ಅದಿಕಾರಿಗಳು ಸೇರಿದಂತೆ ಇನ್ನಿತರ ಹಿರಿಯ ಅದಿಕಾರಿಗಳನ್ನು ಕರೆದರೆ ಉಚಿತವಾಗಿ ಕಸವಿಲೇವಾರಿ, ಆಹಾರ ಗುಣಮಟ್ಟ ತಪಾಸಣಾ ಅದಿಕಾರಿಗಳನ್ನ ಕಟ್ಟಿಹಾಕುವ ಸುಲಭ ಮಾರ್ಗಕ್ಕೆ ಅದಿಕಾರಿಗಳು ಪರೋಕ್ಷ ಸಾಥ್ ನೀಡಿದಂತಾಗುತ್ತದೆ ಎಂಬುದು ನಿಜವೇ ಅಲ್ಲವೆ.

ಮೈಕಾಸುರ ಅಬ್ಬರಕ್ಕೆ ಬರೋದೆ ಆದರೆ ಜೋಢಿರಸ್ತೆಯ ದಾರ್ಮಿಕ ಕೇಂದ್ರವೊಂದರ ಆವರಣದೊಳಗೆ ನಡೆಯೊ ಅದೆಷ್ಟೊ ಕಾರ್ಯಕ್ರಮ ಸಮೀಪ
ಶಾಂತಿ ಪ್ರದೇಶಗಳು ಎನಿಸಿಕೊಂಡ
ಶಾಲೆಗಳು, ಆಸ್ಪತ್ರೆಗಳು, ನ್ಯಾಯಾಲಯಗಳು ಇತ್ಯಾದಿ ಪ್ರದೇಶಗಳು “silence zone” ಎಂದು ಕರೆದರೂ ಸಮೀಪ ನ್ಯಾಯಾದೀಶರುಗಳ ನಿವಾಸಗಳು ಇರಲಿದೆ, ಅವುಗಳ ಸುತ್ತಲೂ ಶಬ್ದ ನಿಯಮಗಳಿಗೆ ವಿಶೇಷ ಅನುಮತಿಗಳು, ಕಡಿಮೆ ಡಿಸೆಬಲ್ ಮಟ್ಟ,ಆಗಿದ್ದರೂ ಶಾಲೆ ಮುಗಿದಿದೆ..ಹಾಗೂ ಇತರ ಕಾರಣ ಇಟ್ಟುಕೊಂಡು ಮೈಕಾಸುರ ಆರ್ಭಟಕ್ಕೆ ಖಾಸಗಿ ಆಸ್ಪತ್ರೆ ರೋಗಿಗಳು ತತ್ತರಿಸಿದ್ದಾರೆ ಎಂದೆ ಹೇಳಬಹುದಾಗಿದೆ.

ಶಬ್ದ ಸೃಷ್ಟಿ ನಿಷೇಧ.( Decibel ಮಿತಿಗಳು (Noise Pollution Rules, 2000) ಪ್ರಕಾರ ರೆಸಿಡೆನ್ಸಿಯಲ್ ಪ್ರದೇಶ, ಹಗಲು (6 AM – 10 PM): 55 dB (A)ರಾತ್ರಿ (10 PM – 6 AM): 45 dB (A)ಕಮರ್ಷಿಯಲ್ ಪ್ರದೇಶ,ಹಗಲು: 65 dB,ರಾತ್ರಿ: 55 dB, ಕೈಗಾರಿಕಾ ಪ್ರದೇಶ, ಹಗಲು: 75 dB, ರಾತ್ರಿ: 70 dB. ನಿಶ್ಯಬ್ದಿತ ಪ್ರದೇಶ (ಶಾಲೆ, ಆಸ್ಪತ್ರೆ, ನ್ಯಾಯಾಲಯ, ಧಾರ್ಮಿಕ ಸ್ಥಳದ 100 ಮೀ. ವ್ಯಾಪ್ತಿ)ಹಗಲು: 50 dB, ರಾತ್ರಿ: 40 dB (Source: Noise Pollution (Regulation & Control) Rules, 2000, Rule 3) ಇರಬೇಕೆಂಬ ಹತ್ತು ಹಲವರು ನಿಯಮವಿದೆ.
ಅನುಮತಿ ನೀಡುವ ಮೊದಲು ಡಿಸೆಬಲ್ ಮಿತಿ ಮತ್ತು ಸಮಯ ಮಿತಿಯನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು.

ಉಲ್ಲಂಘನೆ ಕಂಡುಬಂದರೆ ಕ್ರಮ ಜರುಗಿಸೊ ಅಧಿಕಾರ ಪೊಲೀಸರಿಗೆ ನೀಡಿದ್ದಾದರೂ ಅನತಿ ದೂರದಲ್ಲೆ ಇರುವ ಚಾಮರಾಜನಗರ ಪೊಲೀಸ್ ಉಪಾದೀಕ್ಷಕರ ಕಚೇರಿ ಸಮೀಪವೆ ಮೈಕಾಸುರ ಅಬ್ಬರ ಇದ್ದರೂ ಪೊಲೀಸರೆ ಅನುಮತಿಸಿರೋದು ದುರಂತ.
ಸಣ್ಣಪುಟ್ಟದೆಲ್ಲ ಪ್ರಶ್ನಿಸೊ ಹೋರಾಟಗಾರರ ಮೇಲೆ ಕರ್ತವ್ಯಕ್ಕೆ ಅಡ್ಡಿ ಎಂದು ದಾಖಲಿಸೊ ಆರಕ್ಷಕರು ಇವರ ಕರ್ತವ್ಯಕ್ಕೆ ಮೈಕಾಸುರ ಅಬ್ಬರ ಹಿತವಾಗಿ ಕೇಳುತ್ತಿರೊದು ವಿಪರ್ಯಾಸವಾಗಿದೆ.

ಶಬ್ದ ಮಾಲಿನ್ಯ ನಿಯಂತ್ರಣ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ (Noise Pollution Rules, 2000) ಸಮಯ ಮಿತಿ ರಾತ್ರಿ 10 ಗಂಟೆ- ಬೆಳಿಗ್ಗೆ 6 ಗಂಟೆ ದ್ವನಿವರ್ದಕ ನಿಷೇದವಿದ್ದರೂ ಅದರ ಅಬ್ಬರ ಅಲ್ಲಲ್ಲಿ ಕೇಳಿಬರಲಿದೆ.

ಅನುಮತಿ ಸಂಬಂದ ನಗರಸಬಾ ಅದಿಕಾರಿಗಳಾಗಲಿ,ಉಚಿತ ಬಂದೂಬಸ್ತ್ ಸಂಬಂದ ಪೊಲೀಸ್ ಅದಿಕಾರಿಗಳು
ಬೆಳಿಗ್ಗೆಯೆ 100 ಮೀಟರ್ ವ್ಯಾಪ್ತಿಯಲ್ಲಿ ಡಿವೈಸ್ಪಿ ಕಛೇರಿ, ೨೦೦ ಮೀ ಅಂತರದಲ್ಲಿ ಎಸ್ಪಿ ಕಚೇರಿ, ಸರ್ಕಾರಿ ಶಾಲೆ, ಕೂಗಳತೆಯಲ್ಲಿ ಖಾಸಗಿ ಆಸ್ಪತ್ರೆ, ನ್ಯಾಯಾಧೀಶರುಗಳ ನಿವಾಸ,ಒಗ್ರಾಹಕ ನ್ಯಾಯಾಲಯ, ಇದ್ದರೂ ಹಿರಿಯ ಅದಿಕಾರಿಗಳು ಜಾಣಕುರುಡು ಪ್ರದರ್ಶನ ಮಾಡುತ್ತಿರುವುದು ಸೋಜಿಗವಾಗಿದೆ.