ಮೈಸೂರು: ಇಂಪೋರ್ಟ್ ಅಂಡ್ ಎಕ್ಸ್ಪೋರ್ಟ್ ಉದ್ಯಮಿಯೊಬ್ಬ ಮೈಸೂರಿನ ತೆಂಗಿನಕಾರಿ ಹೋಲ್ ಸೇಲ್ ವ್ಯಾಪಾರಿಗೆ 49,47,401ರೂ ವಂಚಿಸಿದ ಘಟನೆ ನಡೆದಿದೆ.
ಈ ಸಂಬಂಧ ತೆಂಗಿನಕಾಯಿ ವ್ಯಾಪಾರಿ ಸುಬೇದ್ ಅಗರವಾಲ್ ಎಂಬುವರು ಮಂಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಚೆನ್ನೈನ ಶ್ರೀವತ್ಸನ್ ಎಂಬಾತ ವಂಚಿಸಿದ ಉದ್ಯಮಿ.
ತಮಿಳುನಾಡಿನ ನಿವಾಸಿ ಶ್ರೀವತ್ಸನ್,
ಪುಟ್ಟಣ್ಣ ಇಂಪೋರ್ಟ್ಸ್ ಅಂಡ್ ಎಕ್ಸ್ಪೋರ್ಟ್ ಎಂಬ ಹೆಸರಲ್ಲಿ ಉದ್ಯಮ ನಡೆಸುತ್ತಿದ್ದಾನೆ.
ಸುಬೇದ್ ಅಗರವಾಲ್ ಅವರು ಮೈಸೂರಿನ ಮಂಡಿ ಮೊಹಲ್ಲಾದ ಅಕ್ಬರ್ ರಸ್ತೆಯಲ್ಲಿ ಸುನಿಲ್ ಕುಮಾರ್ ಅಗರವಾಲ್ ಹೆಸರಲ್ಲಿ 15 ವರ್ಷಗಳಿಂದ ತೆಂಗಿನ ಕಾಯಿ ವ್ಯಾಪಾರ ಮಾಡುತ್ತಿದ್ದಾರೆ.
ಮಾರ್ಚ್ ತಿಂಗಳಲ್ಲಿ ಸುಬೇದ್ ಅಗರವಾಲ್ ರನ್ನ ಶ್ರೀವತ್ಸನ್ ಸಂಪರ್ಕಿಸಿ ವ್ಯಾಪಾರ ಕುದುರಿಸಿ ಸುಮಾರು 15 ಲಕ್ಷ ಮೌಲ್ಯದ ತೆಂಗಿನಕಾಯಿ ಖರೀದಿಸಿ 10 ಲಕ್ಷ ನೀಡಿದ್ದಾರೆ.
ನಂತರ ಶ್ರೀವತ್ಸನ್ ಸೂಚನೆಯಂತೆ ವಿವಿದೆಡೆಗೆ ತೆಂಗಿನಕಾಯಿ ಲೋಡ್ ಕಳಿಸಿದ್ದಾರೆ.ತಿಂಗಳುಗಳು ಕಳೆದರೂ ತೆಂಗಿನಕಾಯಿ ಹಣ ಬಂದಿಲ್ಲ.ಶ್ರೀವತ್ಸನ್ ಅವರಿಗೆ ಸೇರಿದ ನಾಲ್ಕು ಮೊಬೈಲ್ ಗಳು ಸ್ವಿಚ್ ಆಫ್ ಆಗಿದೆ.
ಶ್ರೀವತ್ಸನ್ ರಿಂದ ಒಟ್ಟು 49,47,401ರೂ ಬಾಕಿ ಬರಬೇಕಿದೆ ಎಂದು ಸುಬೇದ್ ಅಗರವಾಲ್ ಮಂಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.