ಮೈಸೂರು: ಸಿಇಟಿ ಪರೀಕ್ಷೆ ವೇಳೆ ಜನಿವಾರ ಧರಿಸಿದ್ದ ವಿದ್ಯಾರ್ಥಿಗಳಿಗೆ ಅಪಮಾನ ಮಾಡಿದ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜ್ಯದ ಜನರ ಕ್ಷಮೆ ಕೇಳಬೇಕೆಂದು ಯುವ ಭಾರತ್ ಸಂಘಟನೆ ಆಗ್ರಹಿಸಿದೆ.
ಸಿದ್ದಾರ್ಥ ಲೇಔಟ್ ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ತಹಶೀಲ್ದಾರ್ ಶಿವಪ್ರಸಾದ್ ಅವರಿಗೆ ಮೈಸೂರು ನಗರದ ಯುವ ಭಾರತ್ ಸಂಘಟನೆಯ ಸಂಚಾಲಕರು ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಯುವ ಭಾರತ್ ಸಂಘಟನೆಯ ಸಂಚಾಲಕ ಜೋಗಿ ಮಂಜು,
ಜನಿವಾರ ವಿಪ್ರ ಸಮಾಜ ಸೇರಿದಂತೆ ಇನ್ನೂ ಹಲವು ಸಮಾಜದ ಪ್ರಾಥಮಿಕ ಸಂಕೇತವಾಗಿದೆ ಅದನ್ನು ಪವಿತ್ರ ಭಾವದಿಂದ ಕಾಣಲಾಗುತ್ತಿದೆ ಆದರೆ ಪರೀಕ್ಷೆ ನೇಪವೇಳಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಕ್ರಮ ನಿಜಕ್ಕೂ ಸರಿಯಲ್ಲ ಎಂದು ಖಂಡಿಸಿದರು.
ಬೀದರ್, ಧಾರವಾಡ, ಶಿವಮೊಗ್ಗದ ಜಿಲ್ಲಾಧಿಕಾರಿಗಳು ಪೊಲೀಸ್ ವರಷ್ಠಾಧಿಕಾರಿಗಳ ನಿರ್ಲಕ್ಷ ಇದಕ್ಕೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು.
ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದು ಧರ್ಮೀಯರ ಆಚರಣೆ ಸಂಸ್ಕೃತಿ, ಸಂಪ್ರದಾಯವನ್ನು ಅವಮಾನಿಸುತ್ತಿದೆ ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿಯಲು ಯತ್ನಿಸುತ್ತಿದೆ ಎಂದು ಜೋಗಿ ಮಂಜು ದೂರಿದರು.
ಕೂಡಲೇ ಜನಿವಾರ ತೆಗೆದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗಹಿಸಿದರು.
ಯುವ ಭಾರತ್ ಸಂಘಟನೆಯ ಸಂಚಲಕ ಜೋಗಿ ಮಂಜು ನೇತೃತ್ವದಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕರಾದ ರವಿ, ಮುಖಂಡರಾದ, ಕೇಬಲ್ ಮಹೇಶ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಆನಂದ್, ವಿನಯ್ ಪಾಂಚಜನ್ಯ ಮತ್ತಿತರರು ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.