ರಾಮಕೃಷ್ಣನಗರದಲ್ಲಿ ಎರಡು ದಿನಗಳ ಉದ್ಯಾನವನ ಸ್ವಚ್ಛತಾ ಅಭಿಯಾನ

Spread the love

ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ವತಿಯಿಂದ ದೇಶದಾದ್ಯಂತ ಸೇವಾ ಪಾಕ್ಷಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅದೇ ರೀತಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ವತಿಯಿಂದ ರಾಮಕೃಷ್ಣನಗರದ ಹೆಚ್ ಬ್ಲಾಕ್ ನಲ್ಲಿ ಉದ್ಯಾನವನವನ್ನು ಸ್ವಚ್ಛಗೊಳಿಸುವ ಎರಡು ದಿನದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಬುಧವಾರ ಮುಂಜಾನೆ ಒಟ್ಟಾಗಿ ಸೇರಿ ಬಿಜೆಪಿ ಕಾರ್ಯಕರ್ತರು ಉದ್ಯಾನವನದಲ್ಲಿ ಬೆಳೆದಿದ್ದ ಗಿಡ-ಗಂಟಿಗಳು, ನಡೆದಾಡುವ ಪಥದಲ್ಲಿ ಬೆಳೆದಿದ್ದ ಕಳೆ ಸೇರಿದಂತೆ ಕಸ,ಕಡ್ಡಿ ತೆಗೆದು ಸ್ವಚ್ಛ ಮಾಡಿ ಶ್ರಮದಾನ ಮಾಡಿದರು.

ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಅಧ್ಯಕ್ಷರಾದ ರಾಕೇಶ್ ಭಟ್, ಸ್ವಚ್ಛತಾ ಕಾರ್ಯಕ್ರಮದ ಸಂಚಾಲಕರಾದ ಚಂದ್ರಶೇಖರ ಸ್ವಾಮಿ, ಸಹ-ಸಂಚಾಲಕರಾದ ವಿಜಯ ಮಂಜುನಾಥ್, ಮಂಡಲದ ಉಪಾಧ್ಯಕ್ಷರಾದ ಬಿ.ಸಿ. ಶಶಿಕಾಂತ್, ಶಿವು ಪಟೇಲ್, ಎಸ್. ಟಿ ಮೋರ್ಚಾ ನಗರ ಉಪಾಧ್ಯಕ್ಷರಾದ ಎಸ್. ತ್ಯಾಗರಾಜ್, ಮುಖಂಡರಾದ ರವಿ ನಾಯಕಂಡ, ದೇವರಾಜ್, ರಾಘವೇಂದ್ರ, ಸೋಮಣ್ಣ, ರಾಮಕೃಷ್ಣಪ್ಪ, ಚಂದನ್ ಗೌಡ, ಸೂರ್ಯ, ಪ್ರಜ್ವಲ್ ಗೌಡ, ಪುಟ್ಟಮಣ್ಣಿ, ಮಂಜುಳಾ, ವಸುಮತಿ, ರಾಜನಾಯಕ್, ಲೋಕೇಶ್ ನಾಯಕ್, ಲೋಕೇಶ್ ರೆಡ್ಡಿ ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು.