ಮೈಸೂರು: ಕೃಷ್ಣರಾಜ ಕ್ಷೇತ್ರದ 54ನೇ ವಾರ್ಡಿನ ಪೌರಕಾರ್ಮಿಕರ ಸ್ಯಾನಿಟೈಸರ್ ಮೇಲ್ವಿಚಾರಕರಾದ ಎಂ ಮಲ್ಲೇಶ್ ಅವರು ಕೆಲಸದಿಂದ ನಿವೃತ್ತರಾಗಿದ್ದು ಅವರಿಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಕಳೆದ 10 ವರ್ಷದಿಂದ ಕನಕಗಿರಿಯ ಸುತ್ತಮುತ್ತ ಉತ್ತಮ ಸೇವೆ ಸಲ್ಲಿಸಿ ಕೆಲಸದಿಂದ ನಿವೃತ್ತಗೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಆರೋಗ್ಯ ಅಧಿಕಾರಿಗಳು ಹಾಗೂ
ಕನ್ನಡ ಕಾರ್ಮಿಕರ ವೇದಿಕೆ ಮತ್ತು ವಾರ್ಡಿನ ಮುಖಂಡರು ಮತ್ತು ಪೌರಕಾರ್ಮಿಕರು ಅವರಿಗೆ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.
ಈ ವೇಳೆ ಮಾತನಾಡಿದ ಹಿರಿಯ ಆರೋಗ್ಯ ಪರಿವೀಕ್ಷಕರಾದ ಶಿವಪ್ರಸಾದ್ ಅವರು,
ಸಮಾಜದಲ್ಲಿ ಪ್ರತಿ ವ್ಯಕ್ತಿ, ಪ್ರತಿ ವೃತ್ತಿ ಕೂಡ ಗೌರವಯುತವಾದದ್ದು ಎಂದು ಹೇಳಿದರು.
ಪೌರ ಕಾರ್ಮಿಕರು ಸಮಾಜದ ಸ್ವಚ್ಛತೆ ಕಾಪಾಡುವ ವೈದ್ಯರಾಗಿದ್ದಾರೆ. ನಿರಂತರ ಶ್ರಮಿಕರಾದ ಪೌರಕಾರ್ಮಿಕರ ಸ್ವಚ್ಛತಾ ಕಾರ್ಯದಲ್ಲಿ ಸಮಾಜವೂ ಕೈ ಜೋಡಿಸಬೇಕು. ಅನಗತ್ಯವಾಗಿ ಕಸ ಎಸೆಯುವ ಪ್ರವೃತ್ತಿ ನಿಂತರೆ ನಗರ ಸ್ವಚ್ಛವಾಗಿರುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಆರೋಗ್ಯ ಪರಿವೀಕ್ಷಕರಾದ ಪ್ರೀತಿ, ವಾರ್ಡಿನ ಅಧ್ಯಕ್ಷ ಮಹದೇವ್, ಕನ್ನಡ ಕಾರ್ಮಿಕರ ವೇದಿಕೆಯ ಜಿಲ್ಲಾಧ್ಯಕ್ಷ ಪಳನಿ, ಉಪಾಧ್ಯಕ್ಷರಾದ ಗೌರಿಶಂಕರನಗರದ ಶಿವಕುಮಾರ್, ಕುಮಾರ್, ವಾಸು, ದೊಡ್ಡಿ ಶಿವು ನಿವಾಸಿಗಳು ಮತ್ತು ಪೌರಕಾರ್ಮಿಕರು ಹಾಜರಿದ್ದರು.