ತೇಜೇಶ್ ಲೋಕೇಶ್ ಗೌಡರಿಗೆ ಸಿ ಜಿ ಗಂಗಾಧರ್ ಸನ್ಮಾನ

Spread the love

ಮೈಸೂರು: ಈ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೆ ಕನ್ನಡ ಹೋರಾಟ ಕ್ಷೇತ್ರದಿಂದ ಭಾಜನರಾಗಿರುವ‌ ಕಾರ್ನಾಟಕ‌
ಸೇನಾಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಅವರಿಗೆ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ ಜಿ ಗಂಗಾಧರ್ ಮತ್ತಿತರರು ಗೌರವಿಸಿ ಅಭಿನಂದಿಸಿದ್ದಾರೆ.

ತೇಜೇಶ್‌ ಲೋಕೇಶ್‌ ಗೌಡರು ಕಳೆದ 15 ವರ್ಷಗಳಿಂದ ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷರಾಗಿ, ಕನ್ನಡ ನಾಡಿನ ನೆಲ ಜಲ ಭಾಷೆ ಗಳ ವಿಚಾರವಾಗಿ ಸತತವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ.

ಸಕ್ರಿಯವಾಗಿ ಸುಮಾರು 300 ಕ್ಕೂ ಹೆಚ್ಚು ಹೋರಾಟಗಳನ್ನು ನಡೆಸಿದ್ದಾರೆ. ಮೈಸೂರಿನ ಕಾವೇರಿ ಕ್ರಿಯಾ ಸಮಿತಿಯ ಕಾರ್ಯದರ್ಶಿಯಾಗಿ ಕಾವೇರಿ ನೀರಿನ ವಿಚಾರವಾಗಿ ಸತತವಾಗಿ 120 ಕ್ಕೂ ಹೆಚ್ಚು ದಿನಗಳ ಕಾಲ ಮೈಸೂರು ಟೌನ್ ಹಾಲ್ ಮುಂಬಾಗ ಧರಣಿ ಸತ್ಯಾಗ್ರಹ ನಡೆಸಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಈ ವೇಳೆ ಗಂಗಾಧರ್ ಮತ್ತಿತರರು ಕೊಂಡಾಡಿದರು.

ಈ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೆ ಕನ್ನಡ ಹೋರಾಟ ಕ್ಷೇತ್ರದಿಂದ ಭಾಜನರಾಗಿರುವುದು‌ ಸಂಸದ ವಿಚಾರ ಎಂದು ಹೇಳಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ ಜಿ ಗಂಗಾಧರ್ ಅವರು ಲೋಕೇಶ್ ಅವರನ್ನು ಗೌರವಿಸಿ ಸನ್ಮಾನಿಸಿದರು.ಈ ವೇಳೆ ಸುಬ್ಬೇಗೌಡ, ಕೇದಾರ್ ವಂದಿತ್ ಉಪಸ್ಥಿತರಿದ್ದರು.