ಮೈಸೂರು: ಪ್ರತಿವರ್ಷ ಮಕ್ಕಳ ದಿನಾಚರಣೆಯನ್ನು ನೆಹರು ಅವರ ಹುಟ್ಟುಹಬ್ಬದ ದಿನವಾಗಿ ಆಚರಿಸುತ್ತೇವೆ ಇದು ನೆಹರು ಅವರಿಗಿದ್ದ ಮಕ್ಕಳ ಮೇಲಿನ ಪ್ರೀತಿಯನ್ನು ತೋರಿಸುತ್ತದೆ ಎಂದು ಮುಡಾ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್ ಹೇಳಿದರು

ಮೈಸೂರಿನ ಕುವೆಂಪು ನಗರದ ಸರ್ಕಾರಿ ಶಾಲೆಯಲ್ಲಿ ಗಿಡ ನೆಡುವ ಮೂಲಕ ಎಚ್ ವಿ ರಾಜೀವ್ ಸ್ನೇಹ ಬಳಗ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ ವೇಳೆ ಅವರು ಮಾತನಾಡಿದರು.
ಪ್ರತಿ ವರ್ಷ ಮಕ್ಕಳ ದಿನಾಚರಣೆ ಬಂದಾಗ ನೆಹರೂರವರನ್ನ ಸ್ಮರಿಸಲೇಬೇಕು, ಅದರೊಟ್ಟಿಗೆ ಅವರು ಮಾಡಿದಂತಹ ಒಳ್ಳೆಯ ಕಾರ್ಯಗಳನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡಬೇಕಾಗಿರುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.
ಪರಿಸರ ಪ್ರೀತಿಯನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಗಿಡವನ್ನು ನೆಟ್ಟು ಅದನ್ನು ಪೋಷಿಸುವ ಜವಾಬ್ದಾರಿಯನ್ನು ಮಕ್ಕಳಿಗೆ ತಿಳಿಸಿಕೊಡಬೇಕೆಂಬ ಕಾರಣದಿಂದ ಒಂದು ಹಣ್ಣಿನ ಗಿಡವನ್ನು ಹಾಕಿದ್ದೇವೆ ನೀವು ಕುಡಿಯಲು ತರುವ ನೀರು ಉಳಿದರೆ ಅದನ್ನು ಗಿಡಕ್ಕೆ ಹಾಕಿ ಪರಿಸರ ಪ್ರೀತಿಯನ್ನು ತೋರಿಸಬೇಕು ಎಂದು ಮಕ್ಕಳಿಗೆ ರಾಜೀವ್ ತಿಳಿಹೇಳಿದರು.
ಈ ಸಂದರ್ಭದಲ್ಲಿ ಸ್ನೇಹ ಬಳಗದ ಆರ್ ಕುಮಾರ್, ಶಿಕ್ಷಕ ವೃಂದ ಮತ್ತು ಮಕ್ಕಳು ಉಪಸ್ಥಿತರಿದ್ದರು.