ಜಾನಪದ ಮಹಿಳಾ ಪ್ರಧಾನವಾದದ್ದು-ಡಾ ಜಾನಪದ ಎಸ್ ಬಾಲಾಜಿ

Spread the love

ಚಿಕ್ಕಮಗಳೂರು: ಜಾನಪದ ಮಹಿಳಾ ಪ್ರಧಾನವಾದದ್ದು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಎಸ್ ಬಾಲಾಜಿ ಅಭಿಪ್ರಾಯಪಟ್ಟರು.

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ಅಜ್ಜಂಪುರ ತಾಲೂಕು ಮಹಿಳಾ ಘಟಕ ಹಮ್ಮಿಕೊಂಡಿದ್ದ ಪದವಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದದ ಎಲ್ಲಾ ಆಯಾಮಗಳಲ್ಲಿ ಮಹಿಳೆಯರಿಗೆ ಮುಖ್ಯ ಪಾತ್ರ ಲಭಿಸಿದೆ, ಭೌತಿಕ ಪರಂಪರೆ ಗೀತೆಗಳು ಹುಟ್ಟಿದ್ದೇ ಮಹಿಳೆಯರಿಂದ ಅದನ್ನು ಪೋಷಿಸುತಿರುವುದು ಮಹಿಳೆಯರೆ, ಜಾನಪದ ಆಯಾಮಗಳಲ್ಲಿ ಕೊಂಡೊಯ್ಯುವ ಕಾರ್ಯವು ಸಹ ಮಹಿಳೆಯಿಂದಲೇ ಆಗುತ್ತಿದೆ ಎಂದು ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜ್ಯಮಟ್ಟದ ಮಹಿಳಾ ಸಮ್ಮೇಳನಾಗುತ್ತಿರುವುದು ಕನ್ನಡ ಜಾನಪದ ಪರಿಷತ್ತಿಗೆ ಗೌರವ ಎಂದು ತಿಳಿಸಿದರು.

ಶಿಶು ಪ್ರಾಸ ಗೀತೆಗಳು ದೂರಿ ಪದಗಳು , ತೊಟ್ಟಿಲು ಪದಗಳು ಇಂದು ಅಳಿವಿನಂಚಿನಲ್ಲಿವೆ ಅದನ್ನು ತರಬೇತಿಯ ಮೂಲಕ ಮುಂದಿನ ಪೀಳಿಗೆಗೆ ಕೊಂಡಯುವ ಕೆಲಸವಾಗಬೇಕು ಎಂದು ಡಾ ಜಾನಪದ ಎಸ್ ಬಾಲಾಜಿ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷೆ ವಿಶಾಲಾಕ್ಷಮ್ಮ ಅವರು ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮಹಿಳಾ ಘಟಕಗಳು ಸ್ಥಾಪನೆಯಾಗಿದ್ದು ಹೋಬಳಿ ಹಾಗೂ ಗ್ರಾಮ ಘಟಕಗಳನ್ನು ಅತಿ ಶೀಘ್ರದಲ್ಲಿ ಸ್ಥಾಪಿಸಿ ಜಾನಪದದ ಮೂಲಕ ಮಹಿಳಾ ಜಾಗೃತಿ ಮೂಡಿಸಲಾಗುವುದು ತಿಳಿಸಿದರು.

ತಾಲೂಕ್ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿಜಯ್ ಕುಮಾರ್ ಮಾತನಾಡಿ ಜಾನಪದ ಸಾಹಿತ್ಯವನ್ನು ದಾಖಲೀಕರಣದ ಮೂಲಕ ಉಳಿಸುವ ಅಗತ್ಯತೆ ಬಂದಿದೆ, ಗ್ರಂಥ ರೂಪದಲ್ಲಿ ಇದನ್ನು ತರುವುದು ಬಹಳಷ್ಟು ಮುಖ್ಯವಾಗಿದೆ ಎಂದು ಹೇಳಿದರು.

ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ ಜಿಲ್ಲಾ ಗೌರವಾಧ್ಯಕ್ಷೆ ಸವಿತಾ ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪುಷ್ಪ ಅವರಿಗೆ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಪದವಿ ಪ್ರಧಾನ ಮಾಡಲಾಯಿತು, ನಿಕಟಪೂರ್ವ ಅಧ್ಯಕ್ಷೆ ವಿಜಯಕುಮಾರಿ ಅವರಿಗೆ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು, ಮಹೇಶ್ ಅವರಿಗೆ ಜಾನಪದ ಯುವ ಬ್ರಿಗೇಡ್ ಸಂಚಾಲಕ ಪದಪತ್ರ ನೀಡಲಾಯಿತು.ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದೆ ಲಕ್ಷ್ಮೀದೇವಮ್ಮ ಮಾತನಾಡಿದರು,

ಕನ್ನಡ ಜಾನಪದ ಪರಿಷತ್
ರಾಮನಗರ ಜಿಲ್ಲಾಧ್ಯಕ್ಷ
ಕೆ ಸಿ ಕಾಂತಪ್ಪ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ರತಿಮ ಸೋಮಶೇಖರ್, ಜಿಲ್ಲಾ ಸಂಚಾಲಕಿ ಆಶಾ ನವೀನ್, ರಂಜಿತಾ, ಉಪಸ್ಥಿತರಿದ್ದರು.