ಮೈಸೂರು: ಮೈಸೂರಿನ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರ ಹುಟ್ಟು ಹಬ್ಬವನ್ನು 47ನೇ ವಾರ್ಡ್ ಕಾಂಗ್ರೆಸ್ ಮುಖಂಡ ರಮೇಶ್ ರಾಮಪ್ಪ ಅವರು ಛಾಯಾದೇವಿ ಅನಾಥಾಶ್ರಮದ ಮಕ್ಕಳಿಗೆ ಉಪಹಾರ ವ್ಯವಸ್ಥೆ ಕಲ್ಪಿಸಿ ವಿಶೇಷವಾಗಿ ಆಚರಿಸಿದರು
.
ಕಾರ್ಯಕ್ರಮಕ್ಕೆ ಆಗಮಿಸಿದ ಎಂ. ಕೆ ಸೋಮಶೇಖರ್ ಅವರು ಮಕ್ಕಳಿಗೆ ಉಪಹಾರ ಬಡಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಮಕ್ಕಳೊಂದಿಗೆ ಆಚರಿಸಿದರು
ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ಹೊಗುಚ್ಛ ನೀಡುವ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದರು.
ನಮ್ಮೆಲ್ಲರ ಪ್ರೀತಿಯ ಸೋಮಣ್ಣನವರು ಮೈಸೂರಿನ ಶಾಸಕರಾಗಿ,ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸಾಕಷ್ಟು ಸೇವೆಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ ಎಂದು ನಜರ್ ಬಾದ್ ನಟರಾಜ್ ಹೇಳಿದರು.
ಕೆ ಆರ್ ಕ್ಷೇತ್ರದ ಜನತೆಗೆ ದಿನನಿತ್ಯವೂ ಅವರವರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಎಲ್ಲಾ ವರ್ಗದ ಜನರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಇವರ ಈ ಕಾರ್ಯ ನಮ್ಮೆಲ್ಲರಿಗೂ ಮಾದರಿ ಎಂದು ಹೇಳಿದರು.
ಈ ವೇಳೆ ಅಖಿಲ ಕರ್ನಾಟಕ ರಾಕೇಶ್ ಸಿದ್ದರಾಮಯ್ಯ ಅಭಿಮಾನಿ ಬಳಗದ ಅಧ್ಯಕ್ಷ ವಿಶ್ವನಾಥ್ ವಿಶ್ವ, ಕೆಆರ್ ಬ್ಲಾಕ್ ಅಧ್ಯಕ್ಷ ಇಂದ್ರ, ಚಾಮುಂಡೇಶ್ವರಿ ಬಳಗದ ಮಂಜುನಾಥ್ ಮಾರಟಿಕ್ಯಾತನಹಳ್ಳಿ ಮತ್ತು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.