ಶ್ರೀ ಗೋವಿಂದಾನಂದ ಸರಸ್ವತಿ ಮಹಾಸ್ವಾಮಿಗಳವರ 17ನೇ ಚಾತುರ್ಮಾಸ್ಯ: ಪೋಸ್ಟರ್ ಬಿಡುಗಡೆ

Spread the love

ಮೈಸೂರು: ಜುಲೈ 10ರಿಂದ ತಲಕಾಡು ಶ್ರೀ ಗೋವಿಂದಾನಂದ ಸರಸ್ವತಿ ಮಹಾಸ್ವಾಮಿಗಳವರ 17ನೇ ಚಾತುರ್ಮಾಸ್ಯ ಹಮ್ಮಿಕೊಳ್ಳಲಾಗಿದ್ದು ಇಂದು ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಮೈಸೂರಿನ ಜಯನಗರ ರಾಮಮಂದಿರದಲ್ಲಿ ಭಾಗವತೀಯ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಗೋವಿಂದಾನಂದ ಸರಸ್ವತಿ ಮಹಾಸ್ವಾಮಿಗಳವರ 17ನೇ ಚಾತುರ್ಮಾಸ್ಯದ ಧರ್ಮ ಪ್ರಚಾರ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ತಲಕಾಡು ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮಿಗಳು ಭಕ್ತವೃಂದದಿಂದ ಆಯೋಜಿಸಿರುವ ಚಾತುರ್ಮಾಸ್ಯದ ಧಾರ್ಮಿಕ ಕಾರ್ಯಕ್ರಮಗಳ ಮಾಹಿತಿಯುಳ್ಳ ಪೋಸ್ಟರ್ ಬಿಡುಗಡೆ ಮಾಡಿದರು.

ಈ‌ ವೇಳೆ ಮಾತನಾಡಿದ ಶ್ರೀಗಳು,‌ಶಂಕರಾಚಾರ್ಯರ ಗುರುಗಳಾದ ಶುಕಮಹರ್ಷಿಗಳು ಸ್ಥಾಪಿಸಿದಂತಹ‌ ಪೀಠ ಕೊಪ್ಪಾಳು ಮಠವು ತಲಕಾಡಿನಲ್ಲಿ ಗಂಗರ ವಂಶಸ್ಥರಿಗೆ ರಾಜಪೀಠವಾಗಿತ್ತು, ಶಂಕರಾಚಾರ್ಯರು ಕೂಡ ತಲಕಾಡಿನಲ್ಲಿ ಚಾತುರ್ಮಾಸ್ಯ ಮಾಡಿದ್ದರು ಎನ್ನುವ ಪ್ರತೀತಿಯಿದೆ ಆ ಸಂಧರ್ಭದಲ್ಲಿ ಕೊಪ್ಪಾಳು (ಕಾಳಿಹುಂಡಿ) ಮಠವು ಶುಕಶಂಕರಪೀಠವಾಗಿ ಪುನಶ್ಚೇತನವಾಗಿ ಪ್ರಚಲಿತವಾಯಿತು ಎಂದು ತಿಳಿಸಿದರು.

ನೂರಾರು ವರುಷಗಳ ಹಿಂದೆ ಕೃಷ್ಣಪರಮಾತ್ಮನ ಚಿನ್ನದಮೂರ್ತಿ ಮತ್ತು ನಮ್ಮ ಪೂರ್ವ ಗುರುಗಳನ್ನ ಚಿನ್ನದ ಪಲ್ಲಕ್ಕಿಯಲ್ಲಿ ಮಠಬೀದಿಯಲ್ಲಿ ತಲಕಾಡಿನ ಕಾವೇರಿ ನದಿಯಲ್ಲಿ ಭಕ್ತರು ಗತವೈಭವದಿಂದ ಮರೆವಣಿಗೆ ಮಾಡುತ್ತಿದ್ದ ಪರಂಪರೆಯಿತ್ತು, ಈ ಭಾರಿ ಚಾತುರ್ಮಾಸ್ಯದಲ್ಲಿ ಹಿಂದೂ ಸಮಾಜವನ್ನ ಭಕ್ತಿಭಾವದ ಸಂಕೇತವಾಗಿ ಒಗ್ಗೂಡಿಸುವ ಸಂಕಲ್ಪ ಮಾಡಿದ್ದು ಲೋಕಕ್ಷೇಮಾರ್ಥಕ್ಕಾಗಿ ಪ್ರತಿದಿನ ಕೋಟಿ ಲಲಿತಾ ಕುಂಕುಮಾರ್ಚನೆ ರುದ್ರಪಾರಾಯಣ, ವಿವಿಧ ಹೋಮ ಹವನ, ಧಾರ್ಮಿಕ ಕಾರ್ಯಕ್ರಮಗಳು, ಭಜನೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನದಾಸೋಹ, ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ವಿವರಿಸಿದರು.

ನಂತರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಿ.ಟಿ. ಪ್ರಕಾಶ್ ಅವರು ಮಾತನಾಡಿ ತಲಾಕಾಡಿನಲ್ಲಿ ಜುಲೈ 10ರಿಂದ ನಡೆಯುತ್ತಿರುವ 85ನೇ ಪೀಠಾಧಿಪತಿಗಳಾದ ಶ್ರೀ ಗೋವಿಂದಾನಂದ ಸರಸ್ವತಿ ಮಹಾಸ್ವಾಮಿಗಳವರ 17ನೇ ಚಾತುರ್ಮಾಸ್ಯ ಕಾರ್ಯಕ್ರಮಗಳಿಗೆ ಮೈಸೂರಿನಿಂದ ತೆರಳುವ ಭಕ್ತಾಧಿಗಳಿಗೆ ಸಾರಿಗೆ, ವಾಸ್ತವ್ಯ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು 6362328434 ನಂಬರ್ ನಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದರು.

ನಮ್ಮ ಹಿಂದೂ ಧರ್ಮದ ಸಂಸ್ಕೃತಿ ಆಚರಣೆ ಮಹತ್ವವನ್ನ ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಮೈಸೂರಿನವರು ಕುಟುಂಬ ಸಮೇತರಾಗಿ ತಲಕಾಡಿನ ಪುಣ್ಯಕ್ಷೇತ್ರದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದಲ್ಲಿ ಭಾಗವಹಿಸಬೇಕೆಂದು ಅವರು ಕರೆ ನೀಡಿದರು

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ಹೆಚ್.ವಿ ರಾಜೀವ್, ಅನಿಲ್ ಕುಮಾರ್, ಗ್ರಾಜ್ಯುಯೇಟ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎನ್. ಶ್ರೀನಿವಾಸ್, ಡಾ. ಚಂದ್ರಶೇಖರ್, ಎಂಐಟಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮುರಳಿ, ಗ್ರಾಮಾಂತರ ಬ್ರಾಹ್ಮಣ ಸಂಘದ ಅಧ್ಯಕ್ಷ ಗೋಪಾಲರಾವ್, ಸೌಭಾಗ್ಯಮೂರ್ತಿ, ಗಣೇಶ್, ಕಡಕೊಳ ಜಗದೀಶ್, ಸಂಘಟನಾ ಕಾರ್ಯದರ್ಶಿ ರಂಗನಾಥ ಸುಬ್ಬರಾವ್, ಮಠದ ವ್ಯವಸ್ಥಾಪಕ ಸುಹಾಸ್ ಶಾಸ್ತ್ರಿ, ಜಯನಗರ ರಾಮಮಂದಿರದ ಅರುಣ್ ಶರ್ಮ, ಪ್ರದೀಪ್ ಪ್ರಸಾದ್, ವಕೀಲ ಕೆ.ವಿ ರವಿಚಂದ್ರನ್, ಭೂಮಿಕ ಸುರೇಶ್, ವಿಪ್ರ ಪ್ರೊಫೆಷನಲ್ ಪೋರಂ ಕಾರ್ಯದರ್ಶಿ ಸುಧೀಂದ್ರ, ಲೆಕ್ಕಪರಿಶೋಧಕ ಸತ್ಯಪ್ರಕಾಶ್, ಬ್ರಾಹ್ಮಣ ಯುವ ವೇದಿಕೆ ಕಾರ್ಯದರ್ಶಿ ಸುಚೀಂದ್ರ, ವಿಪ್ರ ಜಾಗೃತಿ ವೇದಿಕೆ ಮಂಜುನಾಥ್, ನಾಗರಾಜ್, ವಿಶ್ವನಾಥ್, ಪ್ರಶಾಂತ್, ಮಿರ್ಲೆ ಪಣೀಶ್, ಚಕ್ರಪಾಣಿ, ಸುಜಾತ ಪ್ರಸಾದ್, ಲತಾ ಬಾಲಕೃಷ್ಣ, ಪ್ರಭಾ, ಸುಮ, ಅಂಬಿಕಾ, ಸುಧಾ, ರೂಪ ಮತ್ತಿತರರು ಭಾಗವಹಿಸಿದ್ದರು.