ಚನ್ನೇನಹಳ್ಳಿ ಶಾಲೆ ಮಕ್ಕಳ ಬಹುಮುಖ ಪ್ರತಿಭೆ, ಸಾಧನೆಗೆ ಬಹುಮಾನಗಳ ಸುರಿಮಳೆ

ಚನ್ನರಾಯಪಟ್ಟಣ: ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬ ಗಾದೆ ಮಾತಿಗೆ ಚೆನ್ನೇನಹಳ್ಳಿ ಶಾಲೆಯ ಪುಟಾಣಿಗಳು ಉದಾಹರಣೆಯಾಗಿದ್ದಾರೆ.

ತಮ್ಮ ಬಹುಮುಖ ಪ್ರತಿಭೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಡೆಸಿದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಚೆನ್ನೆನಹಳ್ಳಿ ಶಾಲೆಯ ಪುಟಾಣಿ ಪೋರರು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳ ಸುರಿಮಳೆ ಗೈದಿದ್ದಾರೆ.

ಇದಕ್ಕೆ ಬಹುಮುಖ್ಯ ಕಾರಣಕರ್ತರು ಎಂದರೆ ಶಾಲೆಯ ಇಬ್ಬರು ಶಿಕ್ಷಕರು ಸಹ ಶಿಕ್ಷಕರಾದ ವಾಣಿಯವರು.

ಪ್ರತಿನಿತ್ಯ ಮಕ್ಕಳಿಗೆ ತಮ್ಮ ತನುಮನ ಧನ ಅರ್ಪಿಸಿ ಪ್ರೀತಿಯಿಂದ ಎಲ್ಲಾ ಸ್ಪರ್ಧೆಯಲ್ಲೂ ಗೆಲ್ಲುವಂತೆ ಮಾಡಿದ್ದಾರೆ, ಇವರ ಬೆನ್ನೆಲುಬಿಗೆ ಮುಖ್ಯ ಶಿಕ್ಷಕರಾದ ಮಂಜೇಗೌಡರು ಸ್ಪೂರ್ತಿ ಯಾಗಿ ನಿಂತು ಮಕ್ಕಳು ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿ ನೆರವಾಗಿದ್ದಾರೆ.

ಗುರುಗಳ ಮಾರ್ಗದರ್ಶನದಲ್ಲಿ ಪ್ರತಿದಿನ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿರುವ ಚನ್ನೇನಹಳ್ಳಿ ಶಾಲೆ ಮಕ್ಕಳ ಪ್ರತಿಭೆಗೆ ಪೋಷಕರು ಗ್ರಾಮಸ್ಥರು ಹಾಗೂ ಶಿಕ್ಷಣ ಇಲಾಖೆ ಅಭಿನಂದನೆ ವ್ಯಕ್ತಪಡಿಸಿದ್ದಾರೆ.