ಮೈಸೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 15ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಮೈಸೂರಿನ ಚಾಮುಂಡಿ ಪುರಂ ವೃತ್ತದಲ್ಲಿ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ವಿಷ್ಣುವರ್ಧನ್ ರವರ ಭಾವಚಿತ್ರ ಹಿಡಿದು ಮೊಂಬತ್ತಿ ಬೆಳಗಿ ಗೌರವ ಸಲ್ಲಿಸಲಾಯಿತು.
ನಂತರ ವಿಷ್ಣುವರ್ಧನ್ ಅವರ ಚಿತ್ರಗೀತೆಗಳನ್ನು ಕಾರ್ಯಕ್ರಮದಲ್ಲಿ ಕೇಳಿಸಲಾಯಿತು

ಈ ವೇಳೆ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಸಂದೀಪ್ ಅವರು ಮಾತನಾಡಿ ಸಾಹಸಸಿಂಹ ವಿಷ್ಣುವರ್ಧನ್ ರವರ ಚಿತ್ರಗಳು ಕೌಟುಂಬಿಕ ಪ್ರಧಾನವಾದುದು ಸಾಮಾಜಿಕ ಸಂದೇಶ ನೀಡುತ್ತಿದ್ದವು ಎಂದು ತಿಳಿಸಿದರು.

ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಗರಡಿಯಿಂದ ಗುರುತಿಸಿಕೊಂಡ ಸಾಹಸಸಿಂಹ ವಿಷ್ಣುವರ್ಧನ್ ರೆಬಲ್ ಸ್ಟಾರ್ ಅಂಬರೀಶ್, ಜೈಜಗದೀಶ್ ಅವರಿಗೆ ಚಾಮುಂಡಿಪುರಂ ಅಚ್ಚುಮೆಚ್ಚಿನ ವೃತ್ತವಾಗಿತ್ತು, ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗಲೆಲ್ಲಾ ಒಮ್ಮೆ ಚಾಮುಂಡಿಪುರಂ ವೃತ್ತಕ್ಕೆ ಬಂದು ತಮ್ಮ ಬಾಲ್ಯದ ದಿನಗಳು ನೆನೆದು ಅಭಿಮಾನಿಗಳನ್ನ ಭೇಟಿ ಮಾಡಿ ಹೋಗುತ್ತಿದ್ದರು ಎಂದು ಅವರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಪಾರ್ಥಸಾರಥಿ, ನಿರೂಪಕ ಅಜಯ್ ಶಾಸ್ತ್ರಿ ಮುಖಂಡರಾದ ಅಂಬಳೆ ಶಿವಣ್ಣ, ಧರ್ಮೇಂದ್ರ, ಪುರುಷೋತ್ತಮ್, ವಿಕ್ರಮ ಅಯ್ಯಂಗಾರ್, ಪ್ರಭು, ಅರವಿಂದ, ಅಭಿನಂದನ್ ಅರಸ್, ಲೋಕೇಶ್, ಅರ್ಜುನ್ ಅರಸ್, ಸುಬ್ರಹ್ಮಣ್ಯ, ಗುರು, ರಾಜೇಶ್, ಮಹೇಶ್ ಅರಸ್, ಶೇಖರ್, ಸುರೇಶ್, ತೀರ್ಥ, ಸಂತೋಷ್, ಲತಾ, ಸುಶೀಲ, ಭುವನಾಕ್ಷಿ, ಕುಮಾರ್ ಸ್ವಾಮಿ, ವೀಣಾ, ಬಸವರಾಜು, ಕಿರಣ್, ಸೂರಜ್, ಲಿಖಿತ್, ಪವನ್, ಶಿವರಾಜು ಮುಂತಾದವರು ಹಾಜರಿದ್ದರು.