ಮೈಸೂರು: ಚಾಮುಂಡಿ ಬೆಟ್ಟದ ಮಹಿಷ ವೃತ್ತದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಮಹಿಷ ವಿಗ್ರಹದ ಸುತ್ತ 200 ಮೀಟರ್ ವರೆಗರ ನಿಷೇದಾಜ್ಞೆ ಜಾರಿ ಮಾಡಲಾಗಿದ್ದು,
ನಿನ್ನೆ ಮಧ್ಯರಾತ್ರಿಯಿಂದ ನಾಳೆ ಬೆಳಿಗ್ಗೆ 6 ಗಂಟೆ ತನಕ ಸೆಕ್ಷನ್ 144 ಜಾರಿ ಇರುತ್ತದೆ.
ಮಹಿಷ ಆಚರಣೆ ಸಮಿತಿ ಪುಷ್ಪಾರ್ಚನೆ ಅನುಮತಿ ಕೇಳಿದ್ದರ ಹಿನ್ನಲೆಯಲ್ಲಿ
ಚಾಮುಂಡಿ ಬೆಟ್ಟದ ಮಹಿಷ ವಿಗ್ರಹದ ಸುತ್ತ 200 ಮೀಟರ್ 144 ಜಾರಿ ಮಾಡಲಾಗಿದ್ದು,
ಮಹಿಷ ವಿಗ್ರಹ ಪೂಜೆಗೆ ಪೊಲೀಸರು ತಡೆ ನೀಡಿದ್ದಾರೆ.
ಆದರೆ ಭಕ್ತರು ಎಂದಿನಂತೆ ಚಾಮುಂಡಿ ಬೆಟ್ಟಕ್ಕೆ ಹೋಗಬಹುದಾಗಿದೆ.
ಭಕ್ತರಿಗೆ ಎಂದಿನಂತೆ ತಾಯಿ ದರ್ಶನಕ್ಕೆ ಅವಕಾಶ ಮಾಡಲಾಗಿದ್ದು,ಬೆಟ್ಟಕ್ಕೆ ಯಾವುದೇ ಆತಂಕವಿಲ್ಲದೆ ಬರಬಹುದಾಗಿದೆ.