ಮೈಸೂರು: ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಹತ್ತನೇ ಚಾಮರಾಜ ಒಡೆಯರ್ ಅವರು ಮೈಸೂರಿಗರ ಮನದಲ್ಲಿ ಸದಾ ಜೀವಂತವಾಗಿದ್ದಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್ ಹೇಳಿದರು.
ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಹತ್ತನೇ ಚಾಮರಾಜ ಒಡೆಯರ್ ಅವರ
156ನೇ ಜಯಂತಿ ಪ್ರಯುಕ್ತ ಚಾಮುಂಡೇಶ್ವರಿ ಬಳಗದ ವತಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಇರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ವೇಳೆ ಅವರು ಮಾತನಾಡಿದರು.
ಮೈಸೂರು ಇಂದು ಸಾಂಸ್ಕೃತಿಕ ನಗರಿ, ಮಲ್ಲಿಗೆ ನಗರಿ ಎಂದು ನಾನಾ ಹೆಸರುಗಳನ್ನು ಪಡೆಯಲು ಚಾಮರಾಜ ಒಡೆಯರ್ ಕೊಡುಗೆ ಅಪಾರವಾದದ್ದು ಹಾಗಾಗಿ ಮೈಸೂರಿನ ಜನತೆ ಮನದಲ್ಲಿ ಇಂದಿಗೂ ಅವರು ಜೀವಂತವಾಗಿದ್ದಾರೆ ಎಂದು ಹೇಳಿದರು.
ಅವರ ಕೊಟ್ಟಂತಹ ದಕ್ಷ ಆಡಳಿತದಿಂದ ವ್ಯಾಪಾರ, ಉದ್ಯಮ, ಕಲೆ ಸಾಹಿತ್ಯ ವಾಸ್ತು ಶಿಲ್ಪ, ವ್ಯವಸಾಯ,ಕೆರೆ,ಕಟ್ಟೆ ಕಾಲುವೆ ಆಸ್ಪತ್ರೆ ಮತ್ತು ಶಾಲಾ-ಕಾಲೇಜುಗಳ ಕಟ್ಟಡಗಳನ್ನು ಪ್ರೋತ್ಸಾಹಿಸಿ ಕಟ್ಟಿ ಬೆಳೆಸಿದ ರೀತಿ ವಿಶ್ವಕ್ಕೆ ಮಾದರಿ ಎಂದು ಹೇಳಿದರು.
ಹಿಂದುಳಿದ ವರ್ಗದ ಉಪಾಧ್ಯಕ್ಷ ರಾಮಪ್ಪ ರಮೇಶ್ ಮಾತನಾಡಿ,ಚಾಮರಾಜ ಒಡೆಯರ್ ಅವರ ದೂರದೃಷ್ಟಿಯ ಫಲವಾಗಿ ಇಂದು ನಮ್ಮ ಕರ್ನಾಟಕದಲ್ಲಿ ಅರಮನೆಗಳು ಮೃಗಾಲಯಗಳನ್ನು ನಿರ್ಮಿಸಿ ಇಡೀ ವಿಶ್ವವೇ ಮೈಸೂರಿನತ್ತ ತಿರುಗಿ ನೋಡುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ನುಡಿದರು.
ಈ ವೇಳೆ ರಾಜೀವ್ ಗಾಂಧಿ ಪಂಚಾಯತ್ ಕಾಂಗ್ರೆಸ್ ನ ಕಾರ್ಯದರ್ಶಿ ಲೋಕೇಶ್, ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಫ್ರಾನ್ಸಿಸ್, ಚಾಮುಂಡೇಶ್ವರಿ ಬಳಗದ ಮಂಜುನಾಥ್,ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡೈರಿ ವೆಂಕಟೇಶ್, ಸೇವಾದಾಳ ಮೋಹನ್, ಕಡಕೋಳ ಶಿವಲಿಂಗ,ರಾಮಚಂದ್ರು, ರಾಕೇಹ್, ನವೀನ್ ಉಪಸ್ಥಿತರಿದ್ದರು.