ಮೈಸೂರು: 2024ರ ದಸರಾ ಯಶಸ್ವಿಯಾದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್ ಸಿ ಮಾದೇವಪ್ಪ ಅವರಿಗೆ ಚಾಮುಂಡೇಶ್ವರಿ ಬಳಗದಿಂದ ಅಭಿನಂದನೆ ಸಲ್ಲಿಸಲಾಯಿತು.
ನಾಡ ಹಬ್ಬ ದಸರಾ ಮಹೋತ್ಸವ ಯಶಸ್ವಿಗೆ ಕಾರಣಕರ್ತರಾದ ಎಚ್ ಸಿ ಮಾದೇವಪ್ಪ ಅವರಿಗೆ ಶ್ರೀ ಚಾಮುಂಡೇಶ್ವರಿ ಬಳಗದವರು ಸನ್ಮಾನಿಸಿ ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ನಮ್ಮ ಮೈಸೂರು ದಸರಾ ಯಶಸ್ವಿಯಾಗಿ ನೆರವೇರಲು ಜಿಲ್ಲಾ ಮಂತ್ರಿ ಡಾ. ಹೆಚ್ ಸಿ ಮಹದೇವಪ್ಪ ಅವರು ಪೂರ್ವಭಾವಿಯಾಗಿ ಅಧಿಕಾರಿಗಳೊಂದಿಗೆ ಆಡಳಿತ ತಂತ್ರವನ್ನ ಅನುಭವದೊಂದಿಗೆ ಕಾರ್ಯರೂಪಿಸಿದ್ದು ಮುಖ್ಯ ಕಾರಣ ಎಂದು ಹೇಳಿದರು.
ಅಂಬಾರಿ ಹೊತ್ತ ಅಭಿಮನ್ಯ ನೇತೃತ್ವದ ಗಜಪಡೆ, ಮಾವುತ, ಕಾವಾಡಿಗರ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು, ಅರಮನೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವ ದಸರಾ ಏ.ಆರ್ ರೆಹಮಾನ್, ಇಳಿಯರಾಜ ಸಂಗೀತ ಸಂಜೆ ಹೀಗೆ ಎಲ್ಲ ಕಾರ್ಯಕ್ರಮ ಗಳು ಐತಿಹಾಸಿಕ ದಾಖಲೆ ಮಾಡಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಲಕ್ಷಾಂತರ ಪ್ರವಾಸಿಗರಿಗೆ ಪೋಲಿಸ್ ಇಲಾಖೆ ಸುರಕ್ಷತೆ ಕಲ್ಪಿಸಿತ್ತು, ಪೌರಕಾರ್ಮಿಕರು ಸ್ವಚ್ಛತಾ ಅಭಿಯಾನ ನಡೆಸಿ ಮೈಸೂರನ್ನ ಕಸಮುಕ್ತ ಮಾಡಿ ಶ್ರಮಿಸಿದರು, ಜಿಲ್ಲಾಡಳಿತ ಈ ಭಾರಿ ಯಶಸ್ವಿ ಅದ್ದೂರಿ ದಸರಾವನ್ನ ವಿಶೇಷವಾಗಿ ಆಯೋಜಿಸಿದ್ದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಿದೆ,ಇದೆಲ್ಲದರ ನೇತೃತ್ವ ವಹಿಸಿದ್ದ ಜಲ್ಲಾ ಮಂತ್ರಿ ಮಹದೇವಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಈ ವೇಳೆ ಮುಖಂಡರಾದ ವರುಣ ಮಹಾದೇವ್, ಕಡಕೋಳ ಶಿವು, ಶಫಿ, ಬನ್ನೂರು ಸ್ವಾಮಿ, ದಿನೇಶ್ ಮತ್ತಿತರರು ಹಾಜರಿದ್ದರು.