ಮೈಸೂರು: ಚಾಮುಂಡೇಶ್ವರಿ ತಾಯಿ ದೊಡ್ಡ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ಜರುಗಿತು.
ಸೋಮವಾರ ಬೆ.9.32 ರಿಂದ 9.42 ರ ಶುಭ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಿದ ರಾಜಮಾತೆ ಪ್ರಮೋದಾ ದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.
ನಂತರ ದೇವಾಲಯದ ಸುತ್ತ ಒಂದು ಸುತ್ತು ಬಂದ ರಥೋತ್ಸವ ಸಾಗಿ ಬಂದಿತು.
ಚಾಮುಂಡಿ ತಾಯಿ ಉತ್ಸವ ಮೂರ್ತಿಯನ್ನ ರಥೋತ್ಸದಲ್ಲಿಟ್ಟು ಮೆರವಣಿಗೆ ಮಾಡಲಾಯಿತು.
ವಜ್ರಾಭರಣದಿಂದ ಕಂಗೊಳಿಸಿದ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯನ್ನು ಸಾಗರೋಪಾದಿಯಲ್ಲಿ ಬಂದಿದ್ದ ಜನ ಕಣ್ತುಂಬಿಕೊಂಡರು.
ರಥೋತ್ಸವದಲ್ಲಿ ಪ್ರಮೋದಾದೇವಿ ಒಡೆಯರ್, ಯದುವೀರ್, ಪತ್ನಿ ತ್ರಿಷಿಕಾಕುಮಾರಿ ಭಾಗಿಯಾಗಿ
ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.
ಭಕ್ತರು ತಾಯಿಗೆ ಹಣ್ಣು ಜವನ ಎಸೆದು ದೇವಿ ಕೃಪೆಗೆ ಪಾತ್ರರಾದರು.ಎಲ್ಲೆಲ್ಲೂ ತಾಯಿ ಚಾಮುಂಡಮ್ಮ ಕಾಪಾಡು ಎಂಬ ಮೊರೆ ಕೇಳಿ ಬಂದಿತು.
ರಥೋತ್ಸವ ಪ್ರಯುಯ ಸಾಕಷ್ಟು ಬಸ್ ಗಳನ್ನು ಬೆಟ್ಟಕ್ಕೆ ಹಾಕಲಾಗಿತ್ತು.ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು.