ಮೈಸೂರು: ಎಲ್ಲರ ಪ್ರೀತಿಯ ವಿಷ್ಣು ದಾದಾ ದೈಹಿಕವಾಗಿ ನಮ್ಮೊಂದಿಗಿಲ್ಲ ಆದರೂ ನಮ್ಮಂತ ನೂರಾರು ಅಭಿಮಾನಿಗಳ ಮನದಲ್ಲಿ ಸದಾ ಜೀವಂತವಾಗಿದ್ದಾರೆ ಎಂದು ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ತಿಳಿಸಿದರು.
ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ15ನೇ ಪುಣ್ಯಸ್ಮರಣೆಯ ಅಂಗವಾಗಿ ಉದ್ಭೂರಿನಲ್ಲಿರುವ ಅವರ ಸ್ಮಾರಕಕ್ಕೆ ಚಾಮುಂಡೇಶ್ವರಿ ಬಳಗ ಭೇಟಿ ನೀಡಿ ವಿಷ್ಣು ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ವೇಳೆ ಅವರು ಮಾತನಾಡಿದರು.
ವಿಷ್ಣುವರ್ಧನ್ ಅವರ ಜನಪ್ರಿಯ ಚಿತ್ರಗಳು ಮತ್ತು ಅವರ ವ್ಯಕ್ತಿತ್ವ ಬದುಕಿನ ಹಾದಿ, ಜೀವನಶೈಲಿ ಇಂದಿನ ಯುವ ಪೀಳಿಗೆಗೆ ಮಾದರಿ ಎಂದು ನುಡಿದರು.
ಈ ವೇಳೆ ಮೈಸೂರು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷರಾದ ರಮೇಶ್ ರಾಮಪ್ಪ, ಚಾಮುಂಡೇಶ್ವರಿ ಬಳಗದ ಮಂಜುನಾಥ್ ಮರಾಟಿಕ್ಯಾತನಹಳ್ಳಿ, ಪುರುಷೋತ್ತಮ್, ಯೋಗೇಶ್,ಮಮತಾ ಚಂದ್ರಕಲಾ ಉಪಸ್ಥಿತರಿದ್ದರು.