ರಾಮಕೃಷ್ಣ ಪರಮಹಂಸರು ಭಾರತ ಕಂಡ ಶ್ರೇಷ್ಠ ಯೋಗಿ-ನಜರ್ ಬಾದ್ ನಟರಾಜ್

Spread the love

ಮೈಸೂರು: ರಾಮಕೃಷ್ಣ ಪರಮಹಂಸರು ಭಾರತ ದೇಶ ಕಂಡ ಯೋಗಿಯೂ ಹೌದು ಸಂತರು ಕೂಡ ಹೌದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ಬಣ್ಣಿಸಿದ್ದಾರೆ.

ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಆಂದೋಲನ ಸರ್ಕಲ್ ಬಳಿ ಚಾಮುಂಡೇಶ್ವರಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ
ರಾಮಕೃಷ್ಣ ಪರಮಹಂಸರ 187ನೇ ಜಯಂತಿ ವೇಳೆ ಪರಮಹಂಸರ ಪ್ರತಿಮೆಗೆ ಮಾಲರ್ಪಣೆ ಮಾಡಿದ ವೇಳೆ ಅವರು ಮಾತನಾಡಿದರು.

ಸರ್ವ ಧರ್ಮ ಸಮಾನತೆಗೆ ಹೆಚ್ಚು ಒತ್ತು ನೀಡಿದ್ದ ಪರಮಹಂಸರು ಎಲ್ಲಾ ಧರ್ಮಗಳು ಒಂದೇ ಎಂಬ ಸಾರವನ್ನು ಸಮಾಜಕ್ಕೆ ತಿಳಿಸಲು ಮುಂದಾದರು. ಇಂತಹ ಮಹಾನ್‌ ವ್ಯಕ್ತಿಯನ್ನು ಅವರ ಜನ್ಮದಿನದಂದು ನೆನೆಯುತ್ತಿರುವುದು ನಮ್ಮೆಲ್ಲರ ಹೆಮ್ಮೆ ಮತ್ತು ಕರ್ತವ್ಯ ಎಂದು ಹೇಳಿದರು.

ಕಾಳಿ ದೇವಿಯ ಮಹಾನ್ ಆರಾಧಕರಾಗಿದ್ದ ರಾಮಕೃಷ್ಣ ಪರಮಹಂಸರು ನಮ್ಮಲ್ಲಿರುವ ಭ್ರಮೆಯನ್ನು ನಾವು ಮೊದಲು ತೊಡೆದು ಹಾಕಬೇಕು ಆಗ ಮಾತ್ರ ನಾವು ಜ್ಞಾನವನ್ನು ಪಡೆಯಬಹುದು ಎಂದು ಜ್ಞಾನೋದಯದ ಮಾರ್ಗವನ್ನು ನೀಡಿದ ಮಹಾನ್ ಚೇತನ ಎಂದು ನಜರ್ ಬಾದ್ ನಟರಾಜ್ ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಹೊಯ್ಸಳ ಟ್ರಸ್ಟ್ ಅಧ್ಯಕ್ಷ ರಾಜೇಶ್ ಪಳನಿ, ಚಾಮುಂಡೇಶ್ವರಿ ಬಳಗದ ಮಂಜುನಾಥ್ ಮಾರಾಟಿ ಖ್ಯಾತನಹಳ್ಳಿ,ಲೋಕೇಶ್,ಹಿಂದುಳಿದ ವರ್ಗದ ಉಪಾಧ್ಯಕ್ಷ ರಮೇಶ ರಾಮಪ್ಪ, ಕಾಂಗ್ರೆಸ್ ಮುಖಂಡರಾದ ಕಡಕೋಳ ಶಿವಲಿಂಗ, ಡೈರಿ ವೆಂಕಟೇಶ್, ರಾಕೇಶ್, ಮತ್ತು ಮಹಿಳಾ ಮುಖಂಡರಾದ ಲಕ್ಷ್ಮಿ ಕಿರಣ ಮಾದೇಗೌಡ,ರಶ್ಮಿ, ರಾಧಿಕಾ ಮತ್ತಿತರರು ಪಾಲ್ಗೊಂಡಿದ್ದರು.