(ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ)
ಚಾಮರಾಜನಗರ: ನನ್ನ ಸಾವಿಗೆ ಸೆನ್ ಡಿವೈಎಸ್ ಪಿ ಪವನ್ ಕುಮಾರ್ ಕಾರಣ ಎಂದು ಆರೋಪಿಸಿ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದು,ಇದು ಚರ್ಚೆಗೆ ಗ್ರಾಸ ಒದಗಿಸಿದೆ.
ಬೆಂಗಳೂರು ಮೂಲದ ಬ್ಯಾಡ್ಮಿಂಟನ್ ಕೋಚ್ ಆಗಿರುವ ಚಂದನ್ ಗಂಭೀರ ಆರೋಪ ಮಾಡಿ ವಿಡಿಯೊ ಹರಿಯಬಿಟ್ಟಿದ್ದು ಇದು ಮಾನವೀಯತೆಗೆ ಬೆಂಕಿ ಇಟ್ಟ ಕಥೆಯಾಗಿದೆ.
ಕೋಚರ್ ಚಂದನ್ ಹೇಳುವಂತೆ,
ನಾನು ಅವರಿಗೆ ಫ್ರೀ ಕೋಚಿಂಗ್ ಕೊಟ್ಟಿದ್ದೇನೆ, ಅವರ ಬಳಿ ಹಣ ಕೂಡ ಪಡೆದಿದ್ದೇನೆ. ನನಗೆ ತುಂಬಾ ಕಿರುಕುಳ ಕೊಡ್ತಿದ್ದಾರೆ, ನಾನು ಸತ್ತ ಮೇಲೆ ನಮ್ಮ ತಾಯಿನಾ ನೀವೆ ನೊಡ್ಕೊಳ್ಳಿ. ನನ್ನ ಬಿಟ್ಟರೆ ಯಾರೂ ನೋಡಿಕೊಳ್ಳುವವರು ಇಲ್ಲ, ಮುಂದಿನ ಜನ್ಮದಲ್ಲಿ ನಾನು ನಿಮ್ಮ ಸಾಲ ತಿರೀಸ್ತೀನಿ ಎಂದು ಹೇಳಿದ್ದಾನೆ.
ನಮ್ಮ ಅತ್ತೆ ಮನೆಗೆ ಹೇಳ್ತೀನಿ ಅಂತೀರಾ, ಇದೆಲ್ಲಾ ಬೇಡ ಸರ್. ನಾನು ಸತ್ತರೆ ಹೆಂಡ್ತಿ ಮಕ್ಕಳನ್ನು ನೀವು ಸಾಕುತ್ತಿರಾ, 23 ಜನ ಪೊಲೀಸರಿಗೆ ಒಂದು ರೂಪಾಯಿ ಪಡೆಯದೆ ಕೋಚಿಂಗ್ ಕೊಟ್ಟಿದ್ದೇನೆ ಎಂದು ಬೆಂಗಳೂರು ಮೂಲದ ಬ್ಯಾಡ್ಮಿಂಟನ್ ಕೋಚ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾನೆ.
ನಿಗದಿತ ಅವಧಿ ಯೊಳಗೆ ಕೊಡುತ್ತೇನೆಂದು ಹಣ ಪಡೆದು ಕೊಡದೆ ಸತಾಯಿಸುತ್ತಿರೋದು ನೋಡಿದರೆ ಕೊಟ್ಟ ಹಣ ವಾಪಸ್ ಕೇಳೊದ್ ತಪ್ಪಾ ಎಂಬಂತೆ ಈಗ ಅದಿಕಾರಿಗೆ ತಲೆ ನೋವಾಗಿ ಪರಿಣಮಿಸಿದ್ದು ಎಷ್ಟರ ಮಟ್ಟಿಗೆ ಪ್ರಕರಣ ಸುಖಾಂತ್ಯಗೊಳ್ಳಲಿದೆ ಎಂಬುದು ಕಾದು ನೋಡಬೇಕಾಗಿದೆ.