ಪಟ್ಟಣದೊಳಗಿವೆ ನೂರಾರು ಅನಾಮದೇಯ ವಾಹನಗಳು!

Spread the love

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಜಿಲ್ಲೆಯ ಹಲವು ತಾಲ್ಲೊಕುಗಳಲ್ಲಿ ಮೂಲ ವಾರಸುದಾರರಿಲ್ಲದ ನೂರಾರು ವಾಹನಗಳಿವೆ.

ಅವದಿಮೀರಿದ ,ವಿಮಾರಹಿತ ಹೊರ ಜಿಲ್ಲೆಯ ವಾಹನಗಳು ಪೊಲೀಸರ ತಪಾಸಣೆ ಕಣ್ಣಿನಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದು ಅಪಘಾತ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಕೆಯಾದರೆ ಹೊಣೆ ಯಾರು ಎಂಬ ಪ್ರಶ್ನೆ ಆರಂಭವಾಗಿದೆ.

ಜಿಲ್ಲೆಯ ಐದು ತಾಲ್ಲೋಕುಗಳ ಪೈಕಿ ಚಾಮರಾಜನಗರ ಪಟ್ಟಣದೊಳಗೆ ಹೊರಜಿಲ್ಲೆಯ ವಾಹನಗಳು ಪೊಲೀಸರ ತಪಾಸಣೆಯ ಕಣ್ತಿಪ್ಪಿಸಿ ಓಡಾಡುತ್ತಿದ್ದರೆ ಅಪಘಾತವಾದಾಗ ಜವಬ್ದಾರಿ ಯಾರದ್ದು ಎಂಬ ಪ್ರಶ್ನೆ ಕಾಡುತ್ತಿದೆ.

ಕೆಲವು ಹೊರಜಿಲ್ಲೆಯ ವಾಹನಗಳು ಅಡಮಾನ ಇಟ್ಟುಕೊಂಡೊ ಅಥವಾ ಕದ್ದ ವಾಹನಗಳೊ ಚಾಮರಾಜನಗರ ಪಟ್ಟಣದಲ್ಲಿ ರಾಜಾರೋಷವಾಗಿ ಓಡಾಡುತ್ತಿದೆ. ಓಡಾಡಲು ಪರೋಕ್ಷವಾಗಿ ಕೆಲ ಪೊಲೀಸರ ಸಹಕಾರ ಕೂಡ ಇದೆ ಎಂದರೆ ತಪ್ಪಾಗಲಾರದು.

ಕೆಲವೊಮ್ಮೆ ತಪಾಸಣೆ ಮಾಡಿ ಜಪ್ತಿ ಮಾಡಿ ಠಾಣೆಗೆ ಕರೆತಂದಾಗ ಪರಿಚಯದ ಪೊಲೀಸರಿಂದ ಹೇಳಿಸಿಕೊಂಡು ಬಿಡಿಸಿಕೊಂಡು ಹೋದ ಉದಾಹರಣೆಗಳೂ ಸಾಕಷ್ಟಿದೆ.

ಇಂತಹ ಕದ್ದ ಅಥವಾ ಅಡಮಾನ ಇಟ್ಟುಕೊಂಡ ಹೊರಜಿಲ್ಲೆಯ ವಾಹನಗಳನ್ನ ಪತ್ತೆ ಹಚ್ಚಲು ಪೊಲೀಸರು ವಿಫಲರಾಗಿದ್ದಾರೆ. ಕಳ್ಳತನ ದರೋಡೆ, ವ್ಹೀಲಿಂಗ್ ಇನ್ನಿತರ ದುಶ್ಜೃತ್ಯಕ್ಕೆ ವಾಹನಗಳನ್ನ ಬಳಸಿಕೊಂಡು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿದರೆ ಮೂಲ‌ಮಾಲೀಕರ ತಲೆದಂಡವಾಗುವ ಸಾದ್ಯತೆ ಇದೆ.

ಅನಾಮಧೇಯ ವಾಹನಗಳಿಗೆ ಯಾವುದೇ ಎಫ್ ಸಿ.ಇನ್ಸುರೆನ್ಸ್ ಇರುವುದಿಲ್ಲ..ಕೆಲವೊಮ್ಮೆ ಇಂತಹ ವಾಹನಗಳನ್ನು ಅಪ್ರಾಪ್ತರು ಚಾಲನೆ ಮಾಡಿ ಅಪಘಾತ ಮಾಡಿದಾಗ ಹೊರಜಿಲ್ಲೆ ವಾಹನ ಮಾರಾಟ ಮಾಡಿದ ಮೂಲ ಮಾಲೀಕನೆ ಸತ್ತು ಹೋಗಿರುವ ಉದಾಹರಣೆಗಳಿದೆ.

ಸಂಚಾರ ಠಾಣಾ ಪೊಲೀಸರು ಹಾಗೂ ಇತರ ಪೊಲೀಸರು ಸದಾ ಹೆಲ್ಮೆಟ್ ಗೆ ದಂಡ ಹಾಕುತ್ತಾರೆ,ಆದರೆ ಯಾವುದೇ ತರಹದ ಇತರ ದಾಖಲೆ ತಪಾಸಣೆ ಮಾಡದಿದ್ದರಿಂದ ವಿಮಾರಹಿರ ವಾಹನವೆ ಹೆಚ್ಚಾಗಿ ಓಡಾಡುತ್ತಿದೆ.

ಇತ್ತ ಹೊರಜಿಲ್ಲೆಯ ವಾಹನಗಳನ್ನ ತಪಾಸಣೆ ಮಾಡಬೇಕಾದ ಕೆಲ ಆರಕ್ಷಕ ವರ್ಗದವರೆ ಅಂತ ವಾಹನಗಳನ್ನ ಬಿಟ್ಟು ಕಳಿಸುತ್ತಿರುವುದು ವಿಪರ್ಯಾಸ.