ಯಳಂದೂರು ಠಾಣೆಯ ಮೂವರು ಅಮಾನತು

Spread the love

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ,ಮಾ.4: ಹಿಂದೆ ಚಾ.ನಗರ ಪಟ್ಟಣ ಠಾಣೆಯ ಮೂವರು ಸಿಬ್ಬಂದಿಗಳು ಅಮಾನತಾದಂತೆಯೆ ಇದೀಗ ಕೊಳ್ಳೇಗಾಲ ವಿಭಾಗದ ಯಳಂದೂರು ಠಾಣೆಯ ಮೂವರು ಸಿಬ್ಬಂದಿಗಳನ್ನ ಎಸ್ಪಿ ಬಿ.ಟಿ.ಕವಿತಾ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಯಳಂದೂರು ಠಾಣೆಯ ಸಬ್ ಇನ್ಸ್ ಪೆಕ್ಟರ್ ಹನುಮಂತ್ ಉಪ್ಪಾರ್, ಎಎಸ್ಐ ಪೂವಯ್ಯ, ಹಾಗೂ ಮುಖ್ಯಪೇದೆ ಇಲಿಯಾಸ್ ಪಾಷ ಎಂಬುವವರನ್ನು ಅಮಾನತು ಮಾಡಲಾಗಿದೆ.

ಕರ್ತವ್ಯ ಲೋಪ ಪ್ರಕರಣವೊಂದರಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನಲೆಯಲ್ಲಿ ಈ ಅಮಾನತು ಆದೇಶ ಹೊರಡಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.