ಚಾಮರಾಜನಗರ: ಕರ್ತವ್ಯದ ಅವದಿಯಲ್ಲೊ ಅಥವಾ ಊಟದ ಅವದಿಯಲ್ಲೊ ಕಚೇರಿಯನೇ ನೌಕರರು ಊಟದ ಹಾಲ್ ಮಾಡಿಕೊಂಡಿದ್ದರಿಂದ ಗ್ರಾಹಕರು ಪೊಸ್ಟ್ ಮಾಡಲು ಬಂದಿದ್ದವರು ಹೊರಗೆ ನಿಂತು ಪರಿತಪಿಸುವಂತಾಯಿತು.
ಶನಿವಾರ ಮಧ್ಯಾಹ್ನ ಎರಡು ಗಂಟೆ ಸಮಯದಲ್ಲಿ ಚಾಮರಾಜನಗರದ ಸಂತೆಮರಳ್ಳಿ ರಸ್ತೆಯಲ್ಲಿರುವ ಅಂಚೆ ಕಚೇರಿಯ ನೌಕರರೊಬ್ಬರ ನಿವೃತ್ತಿ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಸಮಾರಂಭದ ಪ್ರಯುಕ್ತ ಕಚೇರಿಯೊಳಗೆ ಟೇಬಲ್ ಹಾಕಿ ಊಟ ಹಾಲ್ ಮಾಡಿಕೊಂಡಿದ್ದು ಎಷ್ಟರ ಮಟ್ಟಿಗೆ ಸಮಂಜಸ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ಕರ್ತವ್ಯದ ವೇಳೆಯಲ್ಲಿ ಅಂಚೆ ಕಚೇರಿ ಬಾಗಿಲು ಹಾಕಿಕೊಂಡು ಕಚೇರಿಯ ಒಳಗೆ ಊಟದ ಟೇಬಲ್ ಹಾಕಿಕೊಂಡು ನೌಕರರು ಊಟ ಮಾಡುತ್ತಿದ್ದು, ಅಂಚೆ ಕಚೇರಿಗೆ ಬಂದ ಸಾರ್ವಜನಿಕರು ಹೊರಗಡೆ ಕಾದು ನಿಲ್ಲಬೇಕಾಯಿತು.
ಕರ್ತವ್ಯದ ಅವಧಿ ಮುಗಿದ ನಂತರ ಸಮಾರಂಭ ಮಾಡಬಹುದಿತ್ತು,ಆದರೆ ಕಚೇರಿ ವೇಳೆಯಲ್ಲೇ ಬೀಳ್ಕೊಡುಗೆ ಸಮಾರಂಭ ಮಾಡಿ ಊಟದ ವ್ಯವಸ್ಥೆಯನ್ನೂ ಕಚೇರಿಯೊಳಗೆ ಮಾಡುವ ಮೂಲಕ ಸಾರ್ವಜನಿಕರಿಗೆ ಅಸಮಾಧಾನ ಉಂಟು ಮಾಡುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಜನತೆ ಆರೋಪಿಸಿದ್ದಾರೆ.