(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ,ಮಾ.9 : ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ‘ಕರ್ನಾಟಕ ಪೊಲೀಸ್ ರನ್’ ಶೀರ್ಷಿಕೆಯಡಿ 5 ಕಿ.ಮೀ ಮ್ಯಾರಥಾನ್ ಗೆ ಜಿಲ್ಲಾದಿಕಾರಿ ಶಿಲ್ಪ ನಾಗ್ ಚಾಲನೆ ನೀಡಿದರು.
ಪೊಲೀಸ್ ಕವಾಯತು ಮೈದಾನದಿಂದ ಪ್ರಾರಂಭವಾದ ಮ್ಯಾರಾಥಾನ್ ರಾಮಸಮುದ್ರದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ತಲುಪಿ ಅಲ್ಲಿಂದ ಯೂಟರ್ನ್ ಪಡೆದು ಭುವನೇಶ್ವರಿ ವೃತ್ತ ತಲುಪಿ, ವಾಪಸ್ ಪೊಲೀಸ್ ಕವಾಯತು ಮೈದಾನದಲ್ಲಿ ಅಂತ್ಯವಾಯಿತು.
ವ್ಯಸನ ಮುಕ್ತ ರಾಜ್ಯ ಹಾಗೂ ಜನಸ್ನೇಹಿ ಪೋಲೀಸ್ ಶೀಷಿಕೆ ಉದ್ದೇಶಿತ ಕಾರ್ಯಕ್ರಮದಲ್ಲಿ ಎಸ್ಪಿ ಕವಿತಾ, ವೈದ್ಯಾದಿಕಾರಿ ಮಹೇಶ್, ರೇಣುಕಾ ಜಿ.ಪಂ.ಉಪಕಾರ್ಯದರ್ಶಿ ಲಕ್ಷ್ಮಿ ಭಾಗವಹಿಸಿ, ಬಳಿಕ ಮ್ಯಾರಥಾನ್‍ನಲ್ಲಿ ಭಾಗವಹಿಸಿದ ಮೊದಲು ಬಂದ 50 ಜನರಿಗೆ ಪದಕಗಳನ್ನು ವಿತರಿಸಿದರು.