ಕುಮಾರಸ್ವಾಮಿ ಅವರಿಗೆ ನನ್ನ ಬಗ್ಗೆ ಮಾಹಿತಿ ಕಲೆ ಹಾಕೋದೆ ಕೆಲ್ಸ:ಚಲುವರಾಯಸ್ವಾಮಿ

Spread the love

ಮೈಸೂರು: ಮೈಸೂರು ಸಮೀಪ ಹೊಟೆಲಿಗೆ ಹೋಗಿದ್ದು ನಿಜ,ಆದರೆ ಯಾವುದೆ ಗಲಾಟೆ ನಡೆದೆ ಇಲ್ಲ ಅದರ‌ ಬಗ್ಗೆ ಕುಮಾರಸ್ವಾಮಿ ಅವರನ್ನೇ ಕೇಳಿ ಎಂದು ಸಚಿವ ಚಲುವರಾಯಸ್ವಾಮಿ ಟಾಂಗ್ ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಿನ್ನೆ ಗಲಾಟೇನೂ ಆಗಿಲ್ಲ,ವರ್ಗಾವಣೆ ವಿಷಯಾನೂ ನನಗೆ ಗೊತ್ತಿಲ್ಲ ಅದನ್ನೆಲ್ಲ ಕುಮಾರಸ್ವಾಮೀನೆ ಹೇಳಬೇಕು ಎಂದರು.

ಕಿಲಾರ ಜಯರಾಂ ನನಗೆ 40 ವರ್ಷಗಳಿಂದ ಗೊತ್ತು,ಸ್ನೇಹಿತರು.ನಿನ್ನೆ ರಮೇಶ್‌ ಬಂಡೀಸಿದ್ದೇಗೌಡರ ಮಗಳ ನಿಶ್ಚಿತಾರ್ಥಕ್ಕೆ ಹೋಗಿದ್ದೆವು ಅಲ್ಲಿ ಏನೂ ನಡೆದೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅಲ್ಲಿ ಏನೂ ಗಲಾಟೆ‌ ಆಗಿಲ್ಲ,ಏನೂ ಇಲ್ಲದ್ದನ್ನ ಏನು ಹೇಳಕ್ಕಾಗುತ್ತೆ,ಕುಮಾರಸ್ವಾಮಿ ಅವರಿಗೆ ನನ್ನ ಬಗ್ಗೆ ಮಾಹಿತಿ ಕಲೆಹಾಕೋದೆ ಕೆಲ್ಸ,ನಾನು ಎಲ್ಲಿದ್ದೆ,ಎಲ್ಲಿಗೆ ಹೋಗಿದ್ದೆ ಎಂದೆಲ್ಲ ತಿಳಿದುಕೊಳ್ಳುತ್ತಾರೆ ಎಂದು ವ್ಯಂಗ್ಯ ವಾಡಿದರು.

ಗಲಾಟೆ ಆಗಿದ್ದರೆ ಕಿಲಾರ ಜಯರಾಂ ಅವರನ್ನೂ ಕೇಳಿ, ಕುಮಾರಸ್ವಾಮೀನೂ ಕೇಳಿ ನಿಮಗೇ ಗೊತ್ತಾಗುತ್ತೆ ಎಂದು ಚಲುವರಾಯಸ್ವಾಮಿ ತಿಳಿಸಿದರು.