ಛಲವಾದಿ ನಾರಾಯಣಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿಗೆ ಆಪ್ ಆಗ್ರಹ

Spread the love

ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಧಾನಪರಿಷತ್ ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಬಳಸಿದ ಅವಹೇಳನಾತ್ಮಕ ಭಾಷೆ ಸಂಬಂಧ ಪ್ರಾಸಿಕ್ಯೂಷನ್ ಅನುಮತಿ‌ ನೀಡುವಂತೆ
ಆಪ್ ರಾಜ್ಯಪಾಲರಿಗೆ ಮನವಿ ಮಾಡಿದೆ.

ಈ ಬಗ್ಗೆ ಆಮ್ ಆದ್ಮಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಲೋಹಿತ್ ಹನುಮಾಪುರ ಸುದ್ದಿಗಾರರೊಂದಿಗೆ ಮಾತನಾಡಿ, ಛಲವಾದಿ ನಾರಾಯಣ ಸ್ವಾಮಿ ಅವರ ನಾಯಿ ಪದ ಬಳಕೆ ಅತ್ಯಂತ ಅಪಮಾನಕಾರಕ ಹಾಗೂ ಅತ್ಯಂತ ಆವಹೇಳನಕಾರಿಯಾಗಿದೆ ಎಂದು ತಿಳಿಸಿದರು.

ಒಬ್ಬ ಜನಪ್ರತಿನಿದಿ ಈ ರೀತಿ ಮಾತಾಡುವುದು ಕೇವಲ ಮಾನನಷ್ಟಕರ, ಜತೆಗೆ ನಮ್ಮ ರಾಜ್ಯದ ರಾಜಕೀಯ ಸಂಸ್ಕೃತಿಗೆ ತುಂಬಾ ಹಾನಿಯಾಗಿದೆ. ಈ ರೀತಿಯ ನಡವಳಿಕೆ, ರಾಜಕೀಯದತ್ತ ಸೆಳೆಯುತ್ತಿರುವ ಯುವಜನತೆಗೆ ನಕಾರಾತ್ಮಕ ಸಂದೇಶ ನೀಡುತ್ತದೆ. ಸರ್ಕಾರದಲ್ಲಿ ಸೇವೆ ಸಲ್ಲಿಸಲು ಉತ್ಸುಕರಾಗಿರುವವರಿಗೆ ಇದು ಅತ್ಯಂತ ನಿಂದನಾತ್ಮಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಘಟನೆಯಿಂದ ಕೇವಲ ವ್ಯಕ್ತಿಯ ಇಮೇಜ್ ಹಾನಿಗೊಂಡಿಲ್ಲ, ಆದರೆ ಕರ್ನಾಟಕವನ್ನು ಸಂವಿಧಾನ ಬದ್ಧವಾಗಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ರಾಜ್ಯವೆಂದು ಗುರುತಿಸುವ ದೇಶದ ಇಮೇಜ್‌ಗೆ ಸಹ ತೊಂದರೆಯಾಗಿದೆ ಹಾಗಾಗಿ ರಾಜ್ಯಪಾಲರು ಕೂಡಲೇ ಈ ಶಾಸಕರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿಯನ್ನು ನೀಡಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಲೋಹಿತ್ ಹನುಮಾನಾಪುರ ಆಗ್ರಹಿಸಿದರು.