ಮೈಸೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಎಂ ನರಸಿಂಹಲು ಅವರಿಗೆ
ಪಾತಿ ಫೌಂಡೇಶನ್ ವತಿಯಿಂದ ಅಭಿನಂದಿಸಲಾಯಿತು.
ಬೆಂಗಳೂರಿನ ಫಿಲಂ ಚೇಂಬರ್ ನಲ್ಲಿ ಎಂ ನರಸಿಂಹಲು ಅವರನ್ನು ಮಾಜಿ ನಗರ ಪಾಲಿಕೆ ಸದಸ್ಯ ಹಾಗೂ ಪಾತಿ ಫೌಂಡೇಶನ್ ಅಧ್ಯಕ್ಷರಾದ ಎಂ ಡಿ ಪಾರ್ಥಸಾರಥಿ ಅವರ ನೇತೃತ್ವದಲ್ಲಿ ಭೇಟಿ ಮಾಡಿ ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಗೋಪಾಲ್ ರಾವ್, ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಹರೀಶ್ ನಾಯ್ಡು, ಬಸವರಾಜ್, ಮಹಾದೇವ್, ಸಂತೋಷ್, ದೀಪಕ್ ಮತ್ತಿತರರು ಹಾಜರಿದ್ದರು.

