ಮೈಸೂರು: ಸ್ಮಶಾನದಲ್ಲಿ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ
ಅಖಿಲ ಭಾರತೀಯ ಗ್ರಾಹಕ ಪಂಚಾಯತ್
ಸದಸ್ಯರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಗಳಿಗೆ ಮನವಿ ಸಲ್ಲಿಸಿದರು.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ಮೈಸೂರು ಮಹಾನಗರ ಪಾಲಿಕೆಗೆ ಭೇಟಿ ನೀಡಿ
ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಲಾಯಿತು.
ಮೈಸೂರು ಬಡಾವಣೆಯ ನಾಗರೀಕರಿಗೆ ಮೂಲಭೂತ ಸೌಲಭ್ಯ ಜೊತೆಯಲ್ಲೆ ಜನನ ಮತ್ತು ಮರಣ ಸಂಧರ್ಭದಲ್ಲಿ ಅವಶ್ಯಕ ವ್ಯವಸ್ಥೆಯನ್ನ ಒದಗಿಸುವುದು ತೆರಿಗೆ ಸಂಗ್ರಹಿಸಿಸುವ ಮೈಸೂರು ಮಹಾನಗರಪಾಲಿಕೆ ಕರ್ತವ್ಯವಾಗಿದೆ.
ಈಗಾಗಲೇ ಪ್ರತಿ ಮನೆಯಿಂದ ವಾರ್ಷಿಕ ತೆರಿಗೆಯಲ್ಲಿ 150ರೂ ಸೆಸ್ ಸ್ಮಶಾನ ನಿರ್ವಹಣೆಗೆಂದು ಸಂದಾಯ ಮಾಡಿಕೊಳ್ಳಲಾಗುತ್ತಿದೆ,ಆದರೆ ಸ್ಮಶಾನದಲ್ಲಿ ನೀರಿನ ವ್ಯವಸ್ಥೆ, ವಿದ್ಯುತ್ ದೀಪ ಮತ್ತು ಸ್ವಚ್ಛತೆ ಇಲ್ಲ ಎಂದು ಮನವಿಪತ್ರದಲ್ಲಿ ಗಮನ ಸೆಳೆಯಲಾಗಿದೆ.
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿ ಪಡೆದು ಅಭಿವೃದ್ಧಿ ಕೆಲಸಗಳು ಮಾಡುತ್ತಿಲ್ಲ ಎಂದು ಜನಸಾಮನ್ಯರು ಶಾಪ ಹಾಕುತ್ತಿದ್ದಾರೆ.
ಸ್ಮಶಾನ ಅಭಿವೃದ್ಧಿ ಬಗ್ಗೆ ಚಿಂತಿಸದ ನಗರಪಾಲಿಕೆ ಜನನ ಮರಣ ವಿಭಾಗ ಚಿತೆಯಲ್ಲಿ ಕಂತೆ ಕಂತೆ ಹಣ ಹೇಗೆ ಕಿತ್ತುಕೊಳ್ಳಬಹುದು ಎಂದು ಪ್ರಶ್ನಿಸಿದ್ದಾರೆ.
ಸುಡುವ ಸ್ಮಶಾನಗಳಲ್ಲಿ ಮಾತ್ರವೇ ಅಂತ್ಯ ಸಂಸ್ಕಾರ ಮಾಡಲು 500 ರೂಗಳನ್ನ ನಿಗಧಿಪಡಿಸಿರುವುದು ಮೈಸೂರಿಗರಿಗೆ ಆಗುತ್ತಿರುವ ಅನ್ಯಾಯ, ಜನಪ್ರತಿನಿಧಿಗಳು ಇಲ್ಲದ ನಗರಪಾಲಿಕೆಯಲ್ಲಿ ಅಧಿಕಾರಿಗಳ ದರ್ಬಾರು ಹೆಚ್ಚಾಗಿದೆ ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

500 ರೂ ವಿಧಿಸಿರುವುದು ಬಡ ಸಾಮಾನ್ಯ ಕುಟುಂಬದ ಮೇಲೆ ಬರೆ ಹಾಕುವಂತಾಗಿದೆ, ಸಾವಿನಲ್ಲೂ ಸಂಪನ್ಮೂಲ ತೆಗೆದುಕೊಳ್ಳುತ್ತಿರುವುದು ನಗರಪಾಲಿಕೆಯ ಹೀನ ಮತ್ತು ದುರಾಡಳಿತ ಭ್ರಷ್ಟಾಚಾರಕ್ಕೆ ಕೈಗನ್ನಡಿಯಾಗಿದೆ.
ಕೂಡಲೇ ಮೈಸೂರು ಮಹಾನಗರಪಾಲಿಕೆಯ ಆಯುಕ್ತರು, ಜನನ ಮರಣ ವಿಭಾಗದ ಅಧಿಕಾರಿಗಳು ಇದರ ಬಗ್ಗೆ ಪರಿಶೀಲಿಸಿ ಜನರ ಹಿತಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತೀಯ ಪಂಚಾಯತ್ ಮೈಸೂರು ಘಟಕದ ಪದಾಧಿಕಾರಿಗಳು ಒತ್ತಾಯಿಸಿದರು
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಚಂದ್ರಶೇಖರ್,ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ನಗರ ಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ, ನಿರೂಪಕ ಅಜಯ್ ಶಾಸ್ತ್ರಿ, ಎಸ್ ಎನ್ ರಾಜೇಶ್, ರವಿಚಂದ್ರ, ಶ್ರೀಧರ್ ಮತ್ತಿತರರು ಹಾಜರಿದ್ದರು.