ಸ್ಮಶಾನದಲ್ಲಿ ಮರಣ ನೊಂದಣಿ ಗಣಕೀಕೃತ ಮಾಡಲು ಆಗ್ರಹ

Spread the love

ಮೈಸೂರು: ಜನನ, ಮರಣ ಪತ್ರ ಪಡೆಯಲು ಸಾರ್ವಜನಿಕರು ಅಲೆಯುವುದನ್ನು ತಪ್ಪಿಸಲು
ಸ್ಮಶಾನಗಳಲ್ಲಿ ಮರಣ ನೊಂದಣಿ ವಿವರವನ್ನ ಗಣಕೀಕೃತ ಮಾಡುವಂತೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಆಗ್ರಹಿಸಿದೆ.

ಪ್ರತಿದಿನ ದುಬಾರಿ ಶುಲ್ಕ ಪಾವತಿ ಮಾಡಿ ಜನನ, ಮರಣ ಪತ್ರ ಪಡೆಯಲು ಸಾರ್ವಜನಿಕರು ಅಲೆಯುತ್ತಿದ್ದಾರೆ ಹಾಗಾಗಿ ಇದನ್ನು ತಪ್ಪಿಸಲು ಮೈಸೂರಿನ ಸ್ಮಶಾನಗಳಲ್ಲಿ ಮರಣ ನೊಂದಣಿ ವಿವರವನ್ನ ಗಣಕೀಕೃತ ಮಾಡುವಂತೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ಮೈಸೂರು ಮಹಾನಗರಪಾಲಿಕೆ ಹೆಚ್ಚುವರಿ ಆಯುಕ್ತರಾದ ಎಸ್. ಕುಸುಮ ಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮೈಸೂರು ನಗರದಲ್ಲಿ ಸ್ಮಾಶನ‌ ಅಭಿವೃದ್ದಿ ಪಡಿಸಿ ಸರಿಯಾದ ಮೂಲಭೂತ ವ್ಯವಸ್ಥೆಯನ್ನ ನಾಗರೀಕರಿಗೆ ಕಲ್ಪಿಸುವುದು ಪ್ರತಿ ಮನೆಯಿಂದ ವಾರ್ಷಿಕ ತೆರಿಗೆ ಸಂಗ್ರಹ ಮಾಡುವ ಮೈಸೂರು ಮಹಾ ನಗರಪಾಲಿಕೆ ಆಗ್ರ ಕರ್ತವ್ಯವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಜನನ, ಮರಣ ಪತ್ರ ಪಡೆಯುವ ಪ್ರತಿಯ ಶುಲ್ಕವನ್ನ 5ರೂಗಳಿಂದ 50ರೂಗಳಿಗೆ ಏಕಾಏಕಿ ಹೆಚ್ಚಿಸಿದ್ದು ಆರ್ಥಿಕ ನೀತಿಗೆ ವಿರೋಧ ಹಾಗೂ ಅವೈಜ್ಞಾನಿಕ ಕ್ರಮವಾಗಿದೆ ಇದರಿಂದ ಮೈಸೂರಿನ ನಾಗರೀಕರು ಪರದಾಡುವಂತಾಗಿದೆ ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ದರವನ್ನ ಎಂದಿನಂತೆ ಮಾರ್ಪಾಡುಗೊಳಿಸಬೇಕೆಂದು ಕೋರಲಾಗಿದೆ.

ಮೈಸೂರಿನ ಸ್ಮಶಾನಗಳಲ್ಲಿ ಅಂತ್ಯಕ್ರಿಯೆ ನಡೆಯುವ ಸಂಧರ್ಭದಲ್ಲಿ ಸತ್ತ ವ್ಯಕ್ತಿಗಳ ಮಾಹಿತಿಯನ್ನ ನಮೂದಿಸುವ ಬಿಜಿಆರ್ ರಿಪೋರ್ಟ್ ಹೆಸರು, ಆಧಾರ್ ಕಾರ್ಡ್ ಸಂಖ್ಯೆ, ಮನೆ ವಿಳಾಸ, ಅಂತ್ಯಸಂಸ್ಕಾರ ಮಾಡುವ ವ್ಯಕ್ತಿಯ ಮಾಹಿತಿ ಸಮಯ ಜಿಪಿಎಸ್ ಫೋಟೊ ಏಕಕಾಲದಲ್ಲೆ ನಮೂದಿಸುವಂತೆ ಗಣಕೀಕೃತ ಮಾಡಿದರೆ ಪ್ರತಿದಿನ ಮೈಸೂರಿನ ಸ್ಮಶಾನದ ಅಂತ್ಯಸಂಸ್ಕಾರಗಳ ಮಾಹಿತಿ‌ ಸ್ಥಳೀಯ ಸ್ಮಶಾನಗಳಲ್ಲಿ, ನಗರಪಾಲಿಕೆಯ ಸಂಭಂಧಪಟ್ಟ ಜನನಮರಣ ವಿಭಾಗ ಅಧಿಕಾರಿಯ ಬಳಿ ಸಕಾಲಕ್ಕೆ ಮಾಹಿತಿ ರವಾನೆಯಾಗುತ್ತದೆ ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.

ಸ್ಥಳೀಯ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿದರೂ ಸಹ ಪುಸ್ತಕದಲ್ಲಿ ನೊಂದಣಿ ಮಾಡಲು ಎರಡು ಮೂರು ದಿನಗಳು ಕಾಯಬೇಕಾದ ಪರಿಸ್ಥಿತಿಯಿದೆ, ಅದಲ್ಲದೇ ಆ ಪುಸ್ತಕ ನಗರಪಾಲಿಕೆಗೆ ತಲುಪಿ ಸರಿಯಾಗಿ ನಮೂದಿಸಿದ್ದರೂ ಸಹ ಅದನ್ನ ಕಂಪ್ಯೂಟರ್ ಆಪರೇಟರ್ ಗಳು ಒಂದು ವೇಳೆ ತಪ್ಪಾಗಿ ಹೆಸರು ನಮೂದಿಸಿದರೆ ಅದನ್ನ ಕೋರ್ಟ್ನಲ್ಲಿ ದಾಖಲೆ ನೀಡಿ ಪಡೆಯಬೇಕಾದ ಪರಿಸ್ಥಿತಿಯಿದೆ.

ಸತ್ತ ವ್ಯಕ್ತಿಯ ವಿಳಾಸ ನಗರಸಭೆ,ಪಟ್ಟಣ ಪಂಚಾಯತಿಗೆ ಒಳಪಟ್ಟಿದರೆ ಅದನ್ನ ಬಿಜಿಆರ್ ಎಕ್ಸ್ಟ್ರಕ್ಟ್ ಕಾಪಿ ಪಡೆದು ಅದನ್ನ ಒಂದು ಕಚೇರಿಯಿಂದ ಒನ್ನೊಂದು ಕಚೇರಿಗೆ ಸ್ವತಃ ಸಾರ್ವಜನಿಕರೇ ಕೈಯಲ್ಲಿ ಹಿಡಿದು ಅಲೆಯಬೇಕಾಗುತ್ತದೆ, ಪಡಿತರ ಚೀಟಿ ಇಲ್ಲದಿದ್ದರೆ ಅದಕ್ಕೂ ಸಹ ಮತ್ತೊಮ್ಮೆ ತಾಲ್ಲೂಕು ಕಚೇರಿ ಆಹಾರ ವಿಭಾಗದಿಂದ ಎನ್ ಒ ಸಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ.

ಹಾಗಾಗಿ ಇವೆಲ್ಲವನ್ನು ಗಣಕೀಕೃತ ಮಾಡಿ ಆಧಾರ್ ಕಾರ್ಡ್ ಆಧಾರದ ಮೇರೆಗೆ ಗಣಕೀಕೃತ ಜಿಪಿಎಸ್ ಎಂಟ್ರಿ ನೋಂದಣಿ ಮಾಡಿದರೆ ಅಧಿಕಾರಿಗಳ ಕೆಲಸದ ಒತ್ತಡವು ಸುಲಲಿತವಾಗುತ್ತದೆ ಸಾರ್ವಜನಿಕರ ಅಲೆದಾಟವು ನಿಲ್ಲುತ್ತದೆ, ಇದರ ಬಗ್ಗೆ ಮೈಸೂರು ಮಹಾನಗರ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು ಎಂದು
ಹೆಚ್ಚುವರಿ ಆಯುಕ್ತರಿಗೆ ಮನವಿ ಮೂಲಕ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ನಿರೂಪಕ ಅಜಯ್ ಶಾಸ್ತ್ರಿ, ಮಹಾನ್ ಶ್ರೇಯಸ್ ಮುಂತಾದವರು ಹಾಜರಿದ್ದರು.