The newest RTP is restricted at the 95.13%, that is just like the norm for the majority of slots. Dolphin’s Pearl is the place all of the gaming step goes, that have jackpots totalling, certain incentives, and free spins. It sea-themed slot is considered the most our very own faves; keep reading to determine why. CasinoHEX.org also offers an array of free online gambling games out of one alternatives. (more…)
ಮೈಸೂರು,ಏ.2: ಸೇವೆಯಿಂದ ನಿವೃತ್ತಿ ಗೊಳ್ಳುವ ಅಧಿಕಾರಿಗಳು, ಸಿಬ್ಬಂದಿಗೆ ಬೀಳ್ಕೊಡುಗೆ ನೀಡುವುದು ಸರ್ವೇಸಾಮಾನ್ಯ, ಆದರೆ ಮೈಸೂರಿನ ಪೊಲೀಸರು ತಮಗೆ ಸೇವೆ ನೀಡಿದ ವಾಹನವನ್ನು ಮನುಷ್ಯರಂತೆ ನಡೆಸಿಕೊಂಡು ಮಾದರಿಯಾಗಿದ್ದಾರೆ.
ಮೈಸೂರಿನ ದೇವರಾಜ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳು ಗರುಡಾ ವಾಹನವನ್ನ ಹೂವಿನ ಹಾರದಿಂದ ಅಲಂಕರಿಸಿ ಅದರ ಸೇವೆಯ ದಿನಗಳನ್ನ ಸ್ಮರಿಸಿದ್ದಾರೆ.
15 ವರ್ಷಗಳ ಕಾಲ ಸೇವೆ ಸಲ್ಲಿಸಿದ ವಾಹನಕ್ಕೆ ಪೊಲೀಸ್ ನಿರೀಕ್ಷಕರಾದ ಕೆ.ಆರ್. ರಘು , ಪಿಎಸ್ಐ ಗಳಾದ ಜೈಕೀರ್ತಿ, ಪ್ರಭು ಮತ್ತು ಇತರೆ ಸಿಬ್ಬಂದಿ ಆತ್ಮೀಯವಾಗಿ ಬೀಳ್ಕೊಟ್ಟರು.ನಿಜಕ್ಕೂ ಇದು ಹೃದಯತುಂಬಿ ಬಂದ ಕ್ಷಣವಾಗಿತ್ತು.
ವಿವಿದ ಠಾಣೆಗಳಲ್ಲಿ ಸೇವೆ ಸಲ್ಲಿಸಿದ 39 ಗರುಡಾ ವಾಹನಗಳು ಸೇವೆಯಿಂದ ನಿವೃತ್ತಿಯಾಗಲಿವೆ.
ಕೊಳ್ಳೇಗಾಲ: ಡಾ.ರಾಜ್ ಕುಮಾರ್ ಹಾಗೂ ಡಾ. ಅಂಬೇಡ್ಕರ್ ರಸ್ತೆ ಅಗಲೀಕರಣ ಪ್ರಕ್ರಿಯೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನ ಕರೆಸಿ ಪರಿಶೀಲನೆ ಮಾಡಿ ತೀರ್ಮಾನ ಕೈಗೊಂಡು 15 ದಿನದೊಳಗೆ ವರದಿ ನೀಡಿ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಈ ಎರಡು ರಸ್ತೆ ಅಗಲೀಕರಣ ಪ್ರಕ್ರಿಯೆ ಕೆಲಸ ಸಮರೋ ಪಾಧಿಯಲ್ಲಿ ನಡೆಯಬೇಕು ಎಂದು ತಾಕೀತು ಮಾಡಿದರು.
ಸದನದಲ್ಲಿ ಕ್ಷೇತ್ರದ ಅಭಿವೃದ್ಧಿ ಸಂಬಂಧ ಹಲವು ವಿಚಾರವನ್ನು ಪ್ರಸ್ತಾಪಿಸಿದ್ದೇನೆ. ಅದರಲ್ಲಿ ರಸ್ತೆ ಅಗಲೀ ಕರಣವು ಒಂದು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬಳಿ ರಸ್ತೆ ಅಗಲೀಕರಣಕ್ಕೆ ಅನುದಾನ ಕೇಳಿದ್ದೇನೆ. ಅವರು ಭರವಸೆ ನೀಡಿದ್ದಾರೆ.ಹಾಗಾಗಿ ನಗರಸಭೆ ಹಾಗೂ ಲೋಕೋಪಯೋಗಿ ಅಧಿಕಾರಿಗಳು ತಕ್ಷಣ ರಸ್ತೆ ಒತ್ತುವರಿ ವರದಿ ಸಲ್ಲಿಸಬೇಕು ಎಂದು ಹೇಳಿದರು
ಪೌರಾಯುಕ್ತ ರಮೇಶ್ ಮಾತನಾಡಿ ಮೊದಲು ಸರ್ವೆ ಮಾಡೋಣ, ಮೂಲ ರಸ್ತೆ ಎಷ್ಟು ಅಡಿ ಇದೆ, ಅದರಲ್ಲಿ ಒತ್ತುವರಿಯಾಗಿರುವುದು ಎಷ್ಟು? ಸಾರ್ವಜನಿಕರ ಆಸ್ತಿಯನ್ನು ಎಷ್ಟು ಸ್ವಾಧೀನ ಪಡಿಸಿಕೊಳ್ಳಬೇಕು ಅದಕ್ಕೆ ಪರಿಹಾರ ಏನು ಕೊಡಬೇಕು ಎಂಬ ಬಗ್ಗೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳೋಣ ಸುಮ್ಮನೆ ಎಲ್ಲರಿಗೂ ಪರಿಹಾರ ಕೊಡಲು ನಗರಸಭೆಯಲ್ಲಿ ಹಣ ಇರಲಾರದು ಎಂದು ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಶಾಸಕರು ಈ ಹಿಂದೆ ಚಾಮರಾಜನಗರದಲ್ಲಿ ರಸ್ತೆ ಅಗಲೀಕರಣ ಮಾಡುವ ವೇಳೆ ಯಾರಿಗೂ ಪರಿಹಾರ ನೀಡಿಲ್ಲ. ಇಲ್ಲೂ ಹಾಗೇ ಮಾಡೋಣ. ಆದ್ದರಿಂದ ರಸ್ತೆ ಅಗಲೀಕರಣ ಪ್ರಕ್ರಿಯೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಕರೆಸಿಕೊಂಡು ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಿ 15 ದಿನದೊಳಗೆ ವರದಿ ನೀಡಿ ಎಂದು ಸೂಚಿಸಿದರು.
ಕೊಳ್ಳೇಗಾಲ ಸುತ್ತ ಬೈಪಾಸ್ ಆಗಿದೆ. ಇದ್ದರಿಂದ ಪಟ್ಟಣದಲ್ಲಿ ನಡೆಯುವ ವ್ಯಾಪಾರ-ವಹಿವಾಟಿಗೆ ತೊಂದರೆ ಆಗುತ್ತದೆ. ಹಸಗಾಗಿ ಪಟ್ಟಣದ ಅಭಿವೃದ್ಧಿಯ ಕೆಲಸ ಶೀಘ್ರ ಆಗಬೇಕು ಎಂದು ತಿಳಿಸಿದರು.
ನಂಜಯ್ಯನ ಕಟ್ಟಿ ಕೆರೆ ಸ್ವರೂಪವೇ ಇಲ್ಲ ಎಲ್ಲವನ್ನು ಕಾನೂನು ಪ್ರಕಾರ ಮಾಡಲು ಹೋದರೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ, ಸತ್ತೇಗಾಲ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಆಗಲಿದೆ ಈಗಾಗಲೇ ಸರ್ಕಾರಕ್ಕೆ ಪ್ರಸ್ಥಾವನೆ ಹೋಗಿದೆ ಅನುಮೋದನೆ ಬಾಕಿ ಇದೆ. ಅಲ್ಲಿ ಪಟ್ಟಣ ಪಂಚಾಯಿತಿ ರಚನೆ ಮಾಡಲು ಬೇಕಾದಂತಹ 31ಮಂದಿ ಸದಸ್ಯರಿದ್ದಾರೆ ಎಂದು ಹೇಳಿದರು.
ಈ ವೇಳೆ ಟೌನ್ ಪ್ಲಾನಿಂಗ್ ಸಹಾಯಕ ನಿರ್ದೇಶಕ ಲಕ್ಷ್ಮೀಶ್ ಈ ಎರಡು ರಸ್ತೆಯ ನಕ್ಷೆಯನ್ನು ಶಾಸಕರಿಗೆ ನೀಡಿ ಮಾಹಿತಿ ನೀಡಿದರು.
ನಗರಸಭೆ ಸದಸ್ಯ ಶಾಂತರಾಜು ಮಾತ ನಾಡಿ, ಹಿಂದೆಯು 80 ಅಡಿ ರಸ್ತೆ ಅಗಲೀಕರಣಕ್ಕೆ ಪ್ರಸ್ತಾವನೆ ಸಲ್ಲಿಕೆ ಆಗಿತ್ತು. ಅದನ್ನು ಬಳಿಸಿಕೊಂಡರೆ ಕೆಲಸ ಸಲೀಸಾಗುತ್ತದೆ ಎಂದರು. ಸದಸ್ಯ ಪ್ರಶಾಂತ್ 100 ಅಡಿ ರಸ್ತೆ ಮಾಡುವಂತೆ ಸಲಹೆ ನೀಡಿದರು. ನಗರಸಭೆ ಪೌರಾಯುಕ್ತ ರಮೇಶ್ ಮಾತನಾಡಿ, ಟೋಟಲ್ ಸ್ಟೇಷನ್ ಸರ್ವೆ ಆಗಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ನೌಕರ ರಾಘವೇಂದ್ರ ಮಾತನಾಡಿ 1961ರಲ್ಲಿ ಈ ರಸ್ತೆಯನ್ನು 60 ಅಡಿ ರಸ್ತೆ ನಿರ್ಮಿಸಲು ಪ್ರಸ್ತಾವನೆಯಾಗಿತ್ತು ಈಗ 80 ಅಡಿ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಿಬ್ಬಂದಿ ರಾಘವೇಂದ್ರ ಮಾಹಿತಿಗೆ ಪ್ರಶಂಸೆ ವ್ಯಕ್ತಪಡಿಸಿದ ಶಾಸಕರು,ನಗರಸಭೆ ಆಸ್ತಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ವ್ಯಾಜ್ಯಗಳನ್ನು ಆಯುಕ್ತರ ಜತೆ ಸೇರಿ ಬಗೆಹರಿಸುವಂತೆ ಸಲಹೆ ನೀಡಿದರು.
ನಗರದ ಬಹುತೇಕ ಬಡಾವಣೆಗಳಿಗೆ ಪ್ಲಾನ್ ಕರಡು ತಯಾರಿಸಿರುವ ಅಂದಿನ ಅಧಿಕಾರಿಗಳು ಅನುಮೋದನೆ ಮಾಡಿಸಿಲ್ಲ ಈ ಬಡಾವಣೆಯ ನಿವಾಸಿಗಳು ಅದನ್ನೇ ಪ್ಲಾನ್ ಎಂದು ತಿಳಿದುಕೊಂಡು ಇಟ್ಟುಕೊಂಡಿದ್ದಾರೆ ಆದರೆ ಈಗ ಕಟ್ಟಡ ಪರವಾನಗಿ ಕೊಡುವ ವೇಳೆ ಟೌನ್ ಪ್ಲಾನ್ ನವರು ಅನಧಿಕೃತ ಎಂದು ಪರವಾನಗಿ ನೀಡುತ್ತಿಲ್ಲ.
ಈ ವಿಚಾರದಲ್ಲಿ ಯಾವ ಯಾವ ಅಧಿಕಾರಿಗಳು ಲೋಪವೆಸಗಿದ್ದಾರೆ, ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಹಾಗೆಯೇ ಯಾರು ಗುತ್ತಿಗೆದಾರರು ಈ ಬಡಾವಣೆಗಳ ಕಾಮಗಾರಿ ನಡೆಸಿ ಪರಿಪೂರ್ಣಗೊಳಿಸಿಲ್ಲವೋ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಅವರ ಪರವಾಗಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಕಾನೂನು ಬದ್ಧವಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಕೃಷ್ಣಮೂರ್ತಿ ಸೂಚಿಸಿದರು.
ಆಯುಕ್ತರ ಮೇಲೆ ಗರಂ, ಎಇಇ ಸುರೇಶ್‌ಗೆ ತರಾಟೆ: ಸಾಮಾನ್ಯ ಸಭೆ ಆಜೆಂಡವನ್ನು ಶಾಸಕರಿಗೆ ತಲುಪಿಸದ ಹಿನ್ನಲೆ ನಗರಸಭೆ ಆಯುಕ್ತ ಎ.ರಮೇಶ್ ಮೇಲೆ ಶಾಸಕರು ಅಸಮಾಧನ ಹೊರಹಾಕಿದರು.
ಬಳಿಕ ಎಂಜಿನಿಯರ್ ಸುರೇಶ್ ಅವರ ಜವಬ್ದಾರಿ ಕುರಿತು ಸಭೆಯಲ್ಲಿ ಪ್ರಶ್ನಿಸುತ್ತಿದ್ದ ಶಾಸಕರು ನಿಮಗೆ ಇಲ್ಲಿ ಕೆಲಸ ಮಾಡಬೇಕು ಎಂಬ ಇಚ್ಛಾಶಕ್ತಿ ಇದ್ದರೆ ಇಲ್ಲಿ ಕೆಲಸ ಮಾಡಿ ಇಲ್ಲದಿದ್ದರೆ ನನಗೆ ಇಲ್ಲಿ ಕೆಲಸ ಮಾಡಲು ಆಗಲ್ಲ ಎಂದು ಪತ್ರ ನೀಡಿ ಹೊರಟುಹೋಗಿ, ಬೇರೆೆಯವರನ್ನು ಹಾಕಿಸಿಕೊಳ್ಳುವೆ ಎಂದು ತರಾಟೆಗೆ ತೆಗೆದುಕೊಂಡರು.
ಬಿ-ಖಾತೆ ಹೆಲ್ಪ್ ಡೆಸ್ಕ್ ತೆರೆಯಿರಿ: ಬಿ-ಖಾತೆ ವಿತರಣೆಗೆ ಕಂದಾಯ ಪಾವತಿಸುವ ಬಗೆಗಿನ ಗೊಂದಲ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ಈ ಬಗ್ಗೆ ನಗರಸಭೆ ಸದಸ್ಯರೊಬ್ಬರು ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಕೆಲವು ಸದಸ್ಯರು ಅಸಮಾಧನ ಹೊರಹಾಕಿದರು.
ಸದಸ್ಯ ಧರಣೇಶ್ ಅಧಿಕಾರಿಗಳಿಂದ ಗೊಂದಲ ಉಂಟಾಗಿದೆ ಎಂದರು.
ಈ ವೇಳೆ ಕಂದಾಯ ಅಧಿಕಾರಿ ನಂಜುಂಡಸ್ವಾಮಿ ಮಾತನಾಡಿ, 2024- 25 ನೇ ಸಾಲಿನ ಹಿಂದಿನ 6 ವರ್ಷಕ್ಕೆ ಡಬಲ್ ಟ್ಯಾಕ್ಸ್ ಹಾಗೂ ಪ್ರಸಕ್ತ 1 ವರ್ಷಕ್ಕೆ ಸಿಂಗಲ್ ಟ್ಯಾಕ್ಸ್ ಕಟ್ಟಬೇಕೆಂದರು.
ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಎ ಖಾತಾ ಬಿ ಖಾತಾಗಳಿಗೆ ರಾಜ್ಯಾದ್ಯಂತ ಒಂದೇ ನಿಯಮ, ಕೊಳ್ಳೇಗಾಲಕ್ಕೆ ಮಾತ್ರ ಅಲ್ಲ ಆದರೆ ರಾಜ್ಯದ ಯಾವ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಸೃಷ್ಟಿಯಾಗದ ಗೊಂದಲ ಇಲ್ಲಿ ಹೇಗೆ ಸೃಷ್ಟಿಯಾಯಿತು. ಜಿಲ್ಲಾಧಿಕಾರಿಗಳು ಈ ಕುರಿತು ಕಾರ್ಯಗಾರ ನಡೆಸಿದ್ದಾರೆ ಈ ವೇಳೆ ಪ್ರಸ್ತಾಪ ಮಾಡಬಹುದಿತ್ತಲ್ಲ ಎಂದು ಪ್ರಶ್ನಿಸಿದರು.
ಸರ್ಕಾರದ ಸುತ್ತೋಲೆಯಂತೆ ಕಾರ್ಯ ನಿರ್ವಹಿಸಿ, ಸಾರ್ವಜನಿಕರಿಗೆ ಹೆಲ್ಪ್ ಡೆಸ್ಕ್ ತೆರೆದು ಮಾಹಿತಿ ನೀಡಿ ಎಂದು ಕಂದಾಯ ಅಧಿಕಾರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ನಗರ ಸಭಾಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ. ಶಂಕರ್, ಸ್ತಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರುಗಳಾದ ಶಾಂತರಾಜು, ರಾಜೇಂದ್ರ, ಸುಮಾಸುಬ್ಬಣ್ಣ, ನಾಶೀರ್ ಶರೀಫ್, ರಾಮಕೃಷ್ಣ, ಧರಣೇಶ್, ಪ್ರಕಾಶ್, ಮಂಜುನಾಥ್, ಕವಿತಾ, ರಾಘವೇಂದ್ರ ನಗರಸಭೆಯ ಆಯುಕ್ತ ರಮೇಶ್, ಎ.ಇ. ಸುರೇಶ್, ಜೆ ಇ ನಾಗೇಂದ್ರ ಸಮುದಾಯ ಘಟಕಾಧಿಕಾರಿ ಪರಶಿವಮೂರ್ತಿ, ಕಂದಾಯ ಅಧಿಕಾರಿ ನಂಜುಂಡಸ್ವಾಮಿ, ರಾಘವೇಂದ್ರ, ಆರೋಗ್ಯ ನಿರೀಕ್ಷಕ ಚೇತನ್, ಲಕ್ಷ್ಮೀ ಮತ್ತಿತರರು ಹಾಜರಿದ್ದರು.
ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ವಯೋಮಿತಿಯನ್ನು ಸಡಿಲಿಸಬೇಕೆಂದು ಕನ್ನಡ ಜಾನಪದ ಪರಿಷತ್ ರಾಜ್ಯ ಅಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಸರ್ಕಾರವನ್ನು ಅಗ್ರಹಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ಅಂಬೇಡ್ಕರ್ ಭವನದಲ್ಲಿ ಮಾತೃಭೂಮಿ ಯುವಕ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆಯೋಜಿಸಿದ್ದ 2024 ನೇ ಸಾಲಿನ ಕರ್ನಾಟಕ ಜಾನಪದ ಅಕಾಡಮಿ ರಾಜ್ಯ ಪ್ರಶಸ್ತಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಆಯ್ಕೆಯಾದ ಸಿದ್ದಯ್ಯ ಸಿ ಹೆಚ್ ಅವರ ಅಭಿನಂದನಾ ಸಮಾರಂಭ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ವಯೋಮಿತಿ 60 ವರ್ಷಕ್ಕೆ ನಿಗದಿ ಮಾಡಿರುವುದನ್ನು ಸಡಿಲಿಸಿ 45 ವರ್ಷಕ್ಕೆ ನಿಗಧಿ ಮಾಡಬೇಕೆಂದು ಒತ್ತಾಯಿಸಿದರು.
ಪ್ರಶಸ್ತಿ ನೀಡಿ ಗೌರವಿಸುವುದರಿಂದ ಕಲಾವಿದರಿಗೆ ಪ್ಪ್ರೋತ್ಸಾಹ ನೀಡಿದಂತಾಗುತ್ತದೆ ಹಾಗೂ ಕಲೆಯನ್ನು ಗೌರವಿಸುವಂತಾಗುತ್ತದೆ ಎಂದು ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.
ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಆರ್ ಭಾಸ್ಕರ್ ಪ್ರಸಾದ್ ಮಾತನಾಡಿ, ಸಿದ್ದಯ್ಯ ಅವರ ಜನಪದ ಹಾಗೂ ರಂಗಭೂಮಿ ಸೇವೆಯನ್ನು ಪ್ರಶಂಸಿಸಿ, ಮುಂದಿನ ದಿನಗಳಲ್ಲಿ ಸಿದ್ದಯ್ಯ ಅವರಿಗೆ ಇನ್ನು ಅನೇಕ ಪ್ರಶಸ್ತಿಗಳು ಲಭಿಸಲಿ ಎಂದು ಹಾರೈಸಿದರು.
ಜಾನಪದ ಅಕಾಡೆಮಿ ಸದಸ್ಯರಾದ ಹುಲಿಕುಂಟೆ ಮೂರ್ತಿ ಅವರು ಮಾತನಾಡಿ ನಾಲ್ಕು ಪದಗಳು ಬಂದಂತವರೆಲ್ಲ ಕಲಾವಿದರು ಎಂದು ಬಿಂಬಿಸಿಕೊಳ್ಳುವ ಕಾಲಘಟ್ಟಕ್ಕೆ ಬಂದುಬಿಟ್ಟಿದ್ದೇವೆ, ನೈಜ ಕಲಾವಿದರನ್ನು ಹೆಕ್ಕಿ ತೆಗೆಯುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ಸಿದ್ದಯ್ಯ ಅವರು ಮಾತನಾಡಿ,ಈ ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಾಗಿದೆ, ಮುಂದಿನ ದಿನಗಳಲ್ಲಿ ಉಚಿತ ಜನಪದ ತರಬೇತಿ ಶಿಬಿರಗಳ ಮೂಲಕ ವಿದ್ಯಾರ್ಥಿಗಳು ಯುವಕರಿಗೆ ಜಾನಪದ ಜಾಗೃತಿ ಮೂಡಿಸಲಾಗುವುದು ತಿಳಿಸಿದರು.
ಕನ್ನಡ ಜಾನಪದ ಪರಿಷತ್ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ ಜಾನಪದ ಎಂದೂ ನಶಿಸುವುದಿಲ್ಲ ಅದಕ್ಕೆ ತನ್ನದೇ ಆದಂತಹ ಶಕ್ತಿ ಇದೆ ಎಂದು ತಿಳಿಸಿದರು.
ವೇದಿಕೆರಿ ಸಿದ್ದಯ್ಯ ಹಾಗೂ ಅವರ ಶ್ರೀಮತಿ ಅವರಿಗೆ ಮಾತೃಭೂಮಿ ಯುವಕ ಸಂಘ ಸಿಂಚನ ಕಲಾ ಕೇಂದ್ರದ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.
ಮಾತೃಭೂಮಿ ಯುವಕ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಧ್ಯಕ್ಷ ಪವನ್ ಕುಮಾರ್ ನಾಯಕ್,ವಕೀಲರಾದ ಬೈಲಪ್ಪ,ಕಾರ್ಮಿಕ ನಿರೀಕ್ಷಕರು ನೆಲಮಂಗಲ ನಾಗರತ್ನ, ಡಾ ಗಂಗಾರಾಜು, ರುದ್ರ ನಾಯಕ್,ರಾಮು ವಿ, ನವೀನ್ ಕುಮಾರ್, ಚೇತನ್ ಕುಮಾರ್ ಉಪಸ್ಥಿತರಿದ್ದರು.
ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಎಲ್ಲಾ ವರ್ಗಗಳಿಗೂ ಅನುಕೂಲವಾಗುವಂತೆ ಸಮತೋಲಿತ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಡಿ.ದೇವರಾಜ ಅರಸು ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಮಂಡಿಸಿದ ಬಜೆಟ್ ಅನ್ನು ಬಿಜೆಪಿ ನಾಯಕರು ಇದು ಹಲಾಲ್ ಬಜೆಟ್, ಮುಸ್ಲಿಂ ಬಜೆಟ್ ಎಂದು ಟೀಕಿಸುತ್ತಿದ್ದಾರೆ. ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಮರು ಮಾತ್ರವಲ್ಲ. ಜೈನ, ಸಿಖ್, ಬೌದ್ಧ ಸೇರಿದಂತೆ ಇನ್ನಿತರ ಅಲ್ಪಸಂಖ್ಯಾತ ಸಮುದಾಯಗಳು ಸೇರಿವೆ. ಆದರೂ ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಜನಪರ ಬಜೆಟ್ ಸಹಿಸಲಾರದೇ ಹೊಟ್ಟೆಕಿಚ್ಚಿನಿಂದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸಮಿತಿ ರಚಿಸಿರುವುದಕ್ಕೆ ವಿಪಕ್ಷಗಳ ಆಕ್ಷೇಪ, ಕೆಲವು ಶಾಸಕರಿಂದ ತೀವ್ರ ವಿರೋಧ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಾ.ಪುಷ್ಮಾಅವರು, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಕೇವಲ ಅಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ. ಹಾಗಾಗಿ ಸಮಿತಿಗಳ ಅವಶ್ಯಕತೆ ಇದೆ ಎಂದು ಹೇಳಿದರು.
ಇಡೀ ರಾಜ್ಯಕ್ಕೆ ಕೇವಲ ಹದಿನೈದು ಜನರ ಸಮಿತಿಯನ್ನು ಮಾತ್ರ ರಚನೆ ಮಾಡಲಾಗಿದೆ. ನಮಗೇನು ಸರ್ಕಾರ ಸಂಬಳ ಕೊಡುತ್ತಿಲ್ಲ. ಕೇವಲ ಗೌರವ ಧನ ಕೊಡುತ್ತಿದ್ದು, ಬೇರೆ ಯಾವುದೇ ಸವಲತ್ತುಗಳನ್ನು ಕೊಡುತ್ತಿಲ್ಲ. ಗ್ಯಾರಂಟಿ ಸಮಿತಿ ರಚನೆಯಿಂದ ಶಾಸಕರ ಅಧಿಕಾರ ಮೊಟಕಾಗಿಲ್ಲ ಎಂದು ಡಾ ಪುಷ್ಪ ಅಮರನಾಥ್ ತಿಳಿಸಿದರು.
ಮೈಸೂರು: ನಗರದ ಕನಕಗಿರಿ, ಸುಯೇಜ್ ಫಾರಂ ರಸ್ತೆಯಲ್ಲಿರುವ ಭಾರತಿ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು ವಿತರಿಸಲಾಯಿತು.
ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗ ಸದಾ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದು,ಇದು 220ನೇ ಸೇವಾ ಕಾರ್ಯಕ್ರಮವಾಗಿದೆ.
ಭಾರತಿ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಹಣ್ಣು, ಹಂಪಲು ವಿತರಿಸಿ ಕ್ಷೇಮವನ್ನು ಹಾರೈಸಲಾಯಿತು.
ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಭಾರತಿ ವೃದ್ಧಾಶ್ರಮದ ನಾಗೇಶ್, ಹಿರಿಯ ಕ್ರೀಡಾಪಟು ಮಹಾದೇವ,ಛಾಯಾ,ಗಾಯಕ ಯಶ್ವಂತ್ ಕುಮಾರ್, ಪುರುಷೋತ್ತಮ್ ರಾಜೇಶ್ ಕುಮಾರ್, ಮಹೇಶ್, ಶ್ರೀಧರ್, ದತ್ತ, ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿರರು ಹಾಜರಿದ್ದರು.
ಬೆಂಗಳೂರು: ಮುಡಾ ಕೇಸ್ ತನಿಖೆಯನ್ನ ಹೈಕೋರ್ಟ್, ಸಿಬಿಐಗೆ ಕೊಡೋದು ಬೇಡ ಅಂತ ಹೇಳಿದೆಯೇ ಹೊರತು ಸಿದ್ದರಾಮಯ್ಯ ಮತ್ತು ಅವರ ಕುಟುಂಬ ನಿರಪರಾಧಿ ಅಂತ ಹೇಳಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.
ಮುಡಾ ಕೇಸನ್ನು ಸಿಬಿಐ ತನಿಖೆಗೆ ಕೊಡಬೇಕು ಎಂಬ ಅರ್ಜಿಯನ್ನ ಹೈಕೋರ್ಟ್ ವಜಾ ಮಾಡಿದ ವಿಚಾರಕ್ಕೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಸ್ನೇಹಮಯಿ ಕೃಷ್ಣ ಹೈಕೋರ್ಟ್‌ನಲ್ಲಿ ಮುಡಾ ಕೇಸನ್ನು ಸಿಬಿಐ ತನಿಖೆಗೆ ವಹಿಸಬೇಕು ಅಂತ ಅರ್ಜಿ ಹಾಕಿದ್ದರು ಕೋರ್ಟ್ ಅವರ ಅರ್ಜಿ ವಜಾ ಮಾಡಿದೆ. ಸಿಬಿಐಗೆ ಕೊಡೋ ಅರ್ಜಿ ಮಾತ್ರ ಕೋರ್ಟ್ ವಜಾ ಮಾಡಿದೆ. ಆದರೆ, ಸಿದ್ದರಾಮಯ್ಯ ನಿರಪರಾಧಿ ಅಂತ ಹೇಳಿಲ್ಲ ಎಂದು ತಿಳಿಸಿದರು.
ಬಿಜೆಪಿ ಮುಡಾ ಅಕ್ರಮದ ವಿರುದ್ದ ಹೋರಾಟ ಮಾಡಿತ್ತು. ಪಾದಯಾತ್ರೆ ಕೂಡಾ ಮಾಡಿತ್ತು, ಕೋರ್ಟ್ ತೀರ್ಪಿನಿಂದ ನಮ್ಮ ಹೋರಾಟಕ್ಕೆ ಹಿನ್ನಡೆ ಆಗಿಲ್ಲ,ಮುಡಾ ಅಕ್ರಮದ ಬಗ್ಗೆ ಇಡಿ, ಲೋಕಾಯುಕ್ತ ತನಿಖೆ ನಡೆಯುತ್ತಿದೆ,ಮುಂದೇನಾಗಲಿದೆ ನೋಡೋಣ ಎಂದು ಹೇಳಿದರು.
ನಾವು ಹೋರಾಟ ಮಾಡಿದ್ದು ಸಿಎಂ ಮತ್ತು ಅವರ ಕುಟುಂಬ ಮುಡಾ ಅಕ್ರಮದಲ್ಲಿ ಭಾಗಿಯಾಗಿದೆ ಅಂತ,ನಮ್ಮ ಆರೋಪಕ್ಕೆ ನಾವು ಈಗಲೂ ಬದ್ಧ ಎಂದು ವಿಜಯೇಂದ್ರ ತಿಳಿಸಿದರು.
ಮೈಸೂರು: ಆಚಾರ್ಯ ಮಧ್ವರ ಸಂದೇಶಗಳು ಸರ್ವಕಾಲಿಕ ಮಾರ್ಗದರ್ಶಕವಾಗಿವೆ ಎಂದು ಮುಡಾ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್ ತಿಳಿಸಿದರು.
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಕುವೆಂಪು ನಗರದ ನವಿಲು ರಸ್ತೆಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಹಮ್ಮಿಕೊಂಡಿದ್ದ ಮಧ್ವನವಮಿ ಆಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿರಿಯ ಸಮಾಜ ಸೇವಕ ಕೆ ರಘುರಾಮ ವಾಜಪೇಯಿ ಅವರು ಮಾತನಾಡಿ, ಮಧ್ವರನ್ನು ಕೇವಲ ಒಂದು ದಿನ ಆರಾಧಿಸಿದರೆ ಸಾಲದು. ಪ್ರತಿನಿತ್ಯ ಅವರು ಪ್ರತಿಪಾದಿಸಿದ ತತ್ವ, ಸಿದ್ಧಾಂತಗಳ ಆಚರಣೆ ಮಾಡಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಜ್ಞಾನಕಾರ್ಯಗಳನ್ನು ಮಾಡಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ವಿಶ್ವಕ್ಕೆ ಪೂರ್ಣಪ್ರಜ್ಞ ದೃಷ್ಟಿಯನ್ನು ನೀಡಿದ ಮಧ್ವರ ಸ್ಮರಣೆ ಪ್ರತಿ ಕ್ಷಣವೂ ಆಗಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಎನ್ ಎಂ ನವೀನ್ ಕುಮಾರ್ ಮಾತನಾಡಿ,ಉಡುಪಿ ಜಿಲ್ಲೆಯ ಪಾಜಕ ಗ್ರಾಮದ ಮಧ್ಯಗೇಹ ಭಟ್ಟ ಮತ್ತು ವೇದವತಿ ದಂಪತಿಗಳಿಗೆ ಜನಿಸಿದ ಆನಂದತೀರ್ಥರು ಪೂರ್ವಾಶ್ರಮದ ಬಳಿಕ ವಾಸುದೇವ ಮಧ್ವಾಚಾರ್ಯರಾಗಿ 13ನೇ ಶತಮಾನದಲ್ಲಿ ದ್ವೈತ ಮತದ ಸ್ಥಾಪಕರಾಗಿ ತತ್ವಜ್ಞಾನಿಗಳಾದರು ಎಂದು ವಿವರಿಸಿದರು.
ಪುರಾಣದಲ್ಲಿ ಬರುವ ಹನುಮ ಅವತಾರವೇ ಮಧ್ವಾಚಾರ್ಯರು, 74ನೇ ವಯಸ್ಸಿನಲ್ಲಿ ಬದರಿಕಾಶ್ರಮಕ್ಕೆ ಒಬ್ಬರೇ ಕಾಲ್ನಡಿಗೆಯಲ್ಲಿ ಪ್ರಯಾಣ ಹೋದ ದಿನವೇ ಮಧ್ವನವಮಿ ಎಂದು ಆಚರಿಸಲ್ಪಡುತ್ತದೆ. ಭಕ್ತಿಮಾರ್ಗದ ಪ್ರವರ್ತಕರಾದ ಮಧ್ವಾಚಾರ್ಯರು ಕನ್ನಡಲ್ಲಿ ದಾಸಪಂಥದ ಮಾರ್ಗ ಸಂಗೀತ ಕಲಾ ಪ್ರಕಾರದೊಡನೆ ಬೆಳೆಯಲು ಸ್ಪೂರ್ತಿಯಾದರು ಎಂದು ತಿಳಿಸಿದರು
ಎಸ್ ಬಿ ವಾಸುದೇವಮೂರ್ತಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ವಿನಯ್ ಕಣಗಾಲ್,ಪುನೀತ್ ಜಿ ಕುಡ್ಲೂರು, ವಿಕಾಸ್ ಶಾಸ್ತ್ರಿ, ರಂಗನಾಥ್, ಸುಚಿಂದ್ರ, ರಘು ಭಾರದ್ವಾಜ್, ಮಿರ್ಲೆ ಪನೀಶ್, ಕಡಕೋಳ ಜಗದೀಶ್, ಗುರುರಾಜ್, ವಿಜಯ್ ಕುಮಾರ್ ಮತ್ತಿತರರು ಹಾಜರಿದ್ದರು.
ಮಂಡ್ಯ: ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ತಿಬ್ಬನಹಳ್ಳಿ ಬಳಿ ವಿಸಿ ನಾಲೆಗೆ ಕಾರು ಉರುಳಿದ ಘಟನೆಯಲ್ಲಿ ಮತ್ತೊಂದು ದೇಹ ಪತ್ತೆಯಾಗಿದೆ.
ಹಾಲಹಳ್ಳಿ ಸ್ಲಂ ನಿವಾಸಿ ಪೀರ್ ಖಾನ್ ಶವ ಪತ್ತೆಯಾಗಿದ್ದು ಮೃತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಫೆ.3 ರಂದು ತಿಬ್ಬನಹಳ್ಳಿ ಬಳಿ ವಿಶ್ವೇಶ್ವರಯ್ಯ ನಾಲೆಗೆ ಕಾರು ಉರುಳಿದ ವೇಳೆ ಒಬ್ಬನನ್ನ ರಕ್ಷಿಸಲಾಗಿತ್ತು. ಇಬ್ಬರ ದೇಹ ಪತ್ತೆಯಾಗಿತ್ತು.
ಪಾಂಡವಪುರಕ್ಕೆ ತೆರಳಿದ್ದ ನಾಲ್ವರು ಕಾರಿನಲ್ಲಿ ಮಂಡ್ಯ ಕಡೆಗೆ ವಾಪಸಾಗುವಾಗ ಚಾಲಕನ ನಿಯಂತ್ರಣ ತಪ್ಪಿಕಾರು ನಾಲೆಗೆ ಉರುಳಿದೆ.
ನಾಲೆ ಪಕ್ಕ ತಡೆಗೋಡೆ ಇಲ್ಲದಿದ್ದರಿಂದ ಕಾರು ನಾಲೆಯೊಳಗೆ ಉರುಳಿದೆ.. ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಆ ಸಮಯದಲ್ಲಿ ಸಾವು-ಬದುಕಿನ ನಡುವೆ ಸೆಣಸಾಡುತ್ತಿದ್ದ ನಯಾಜ್‌ನನ್ನು ನೀರಿನಿಂದ ಹೊರತಂದು ಪ್ರಾಣ ರಕ್ಷಿಸಿದ್ದಾರೆ. ನಂತರದಲ್ಲಿ ಕಾರು ನೀರಿನೊಳಗೆ ಮುಳುಗಿದ್ದರಿಂದ ಮೂವರು ಮೃತಪಟ್ಟಿದ್ದಾರೆ.