ಮುಸಲ್ಮಾನ್ ಬಾಂಧವರಿಗೆ ಎಳ್ಳು ಬೆಲ್ಲ ನೀಡಿ ಭಾವೈಕ್ಯತೆ ಮೆರೆದ ಮೈಸೂರು ಯುವ ಬಳಗ
ಮೈಸೂರು: ಮೈಸೂರು ಯುವ ಬಳಗದವರು
ಮುಸಲ್ಮಾನ್ ಬಾಂಧವರಿಗೆ ಎಳ್ಳು ಬೆಲ್ಲ ನೀಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ನಗರದ ದಿವಾನ್ಸ್ ರಸ್ತೆಯಲ್ಲಿರುವ
ಖಾಸಗಿ ಹೋಟೆಲ್ ನಲ್ಲಿ ಮೈಸೂರು ಯುವ ಬಳಗದ ವತಿಯಿಂದ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಭಾವೈಕ್ಯತೆ ಬೆಸೆಯುವ ನಿಟ್ಟಿನಲ್ಲಿ ಶುಭ ಕೋರಿದರು.

ಈ ವೇಳೆ ಶಾಸಕ ಹರೀಶ್ ಗೌಡ ಅವರ ಧರ್ಮಪತ್ನಿ ಗೌರಿ ಅವರು ಗೋಪೂಜೆ ನೆರವೇರಿಸಿ ನಂತರ ಮುಸಲ್ಮಾನ್ ಬಾಂಧವರಿಗೆ ಎಳ್ಳು ಬೆಲ್ಲ ನೀಡಿ ಶುಭ ಹಾರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೌರಿ ಹರೀಶ್ ಗೌಡ,ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ಧವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ. ಆದರೆ ಕೆಲವು ಕಿಡಿಗೇಡಿಗಳಿಂದ ಎರಡು ಸಮಾಜದಲ್ಲಿ ಶಾಂತಿಯನ್ನು ಕದಡುವ ಯತ್ನಗಳು ನಡೆಯುತ್ತಿವೆ ಎಂದು ಬೇಸರಪಟ್ಟರು.

ಎರಡೂ ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯ ವಹಿಸಿ ಹಬ್ಬಗಳನ್ನು ಆಚರಣೆ ಮಾಡಲು ಮುಂದಾಗಬೇಕು. ಈ ಯುವಕರು ಒಟ್ಟಾಗಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುತ್ತಾ ಬಂದಿರುವುದು ಬಹಳ ಸಂತಸದ ವಿಚಾರ. ಇದೇ ರೀತಿ ಎಲ್ಲಾ ಹಬ್ಬಗಳಲ್ಲೂ ಸೌಹಾರ್ದತೆ ಪ್ರತಿ ಜಿಲ್ಲೆಯಲ್ಲೂ ಆದರೆ ಸಮಾಜದಲ್ಲಿ ಉತ್ತಮ ಬೆಳವಣಿಗೆ ಕಾಣಲು ಸಾಧ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ಈ ವೇಳೆ ಸೌಭಾಗ್ಯ ಗಿರೀಶ್, ಕರ್ನಾಟಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಮೈಸೂರು ಯುವ ಬಳಗದ ಅಧ್ಯಕ್ಷ ರವಿಚಂದ್ರ,ಆನಂದ,ಮಹಾದೇವ್, ಮಂಜುನಾಥ್, ನವೀನ, ಹರೀಶ್ ಗೌಡ,ವಕೀಲ ಸೂರ್ಯ ಕುಮಾರ್, ನಂಜುಂಡಸ್ವಾಮಿ, ಚೆಲುವರಾಜ,ಜ್ಞಾನೇಶ, ಪವನ,ಮಹಿಳಾ ಮುಖಂಡರಾದ ಮಂಗಳ, ಶಾಂತ, ಲೀಲಾ, ರಾಣಿ, ಲೋಕೇಶ್, ನಿತಿನ್, ಸಂತೋಷ್, ಶ್ರೀನಿವಾಸ್ ಶೆಟ್ಟಿ,ಸಮೀರಾ, ಫಾತಿಮಾ, ಹಾಗೂ ಮುಸಲ್ಮಾನ್ ಬಾಂಧವರು ಮತ್ತು ಪೌರಕಾರ್ಮಿಕರು ಮತ್ತಿತರರು ಹಾಜರಿದ್ದರು.
ಮುಸಲ್ಮಾನ್ ಬಾಂಧವರಿಗೆ ಎಳ್ಳು ಬೆಲ್ಲ ನೀಡಿ ಭಾವೈಕ್ಯತೆ ಮೆರೆದ ಮೈಸೂರು ಯುವ ಬಳಗ Read More








