700 ಕೋಟಿ ರೂ. ಗಳಿಸಿದ ದುರಂಧರ್ !

ಮುಂಬೈ: ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ 14 ದಿನಗಳಲ್ಲಿ ಜಾಗತಿಕವಾಗಿ 700 ಕೋಟಿ ರೂ. ಗಳಿಸುವ ಮೂಲಕ ಇತಿಹಾಸ ಬರೆದಿದೆ.

ನಮ್ಮ ದೇಶದಲ್ಲೇ ಈ ಚಿತ್ರವು 479.50 ಕೋಟಿ ರೂ. ಕಲೆಕ್ಟ್ ಮಾಡಿದೆ ಡಿ.19 ರ ರಾತ್ರಿಯೊಳಗೆ 500 ಕೋಟಿ ಗಡಿ ದಾಟುವುದು ಖಚಿತವಾಗಿದೆ.

ಬಾಕ್ಸ್‌ ಆಫೀಸ್‌ನಲ್ಲಿ ರಣವೀರ್‌ ಸಿಂಗ್‌ ನಟನೆಯ ʻಧುರಂಧರ್‌ʼ ಸಿನಿಮಾವು ಭಾರೀ ಕಲೆಕ್ಷನ್ ಮಾಡುತ್ತಿದೆ.

ದುರಂದರ್ ಚಿತ್ರಕ್ಕೆ ವಿಶ್ವಾದ್ಯಂತ ಆಗಿರುವ ಗಳಿಕೆಯನ್ನು ಲೆಕ್ಕ ಹಾಕಿದರೆ, ಆಗಲೇ ಈ ಚಿತ್ರದ ಗಳಿಕೆಯು 700 ಕೋಟಿ ರೂ. ದಾಟಿದೆ. ಇದೀಗ ಈ ಚಿತ್ರವು 2ನೇ ವಾರದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರವಾಗಿ ಹೊರಹೊಮ್ಮಿದೆ.
ಪುಷ್ಪ 2 ಸೇರಿದಂತೆ ಹಲವು ಸಿನಿಮಾಗಳ ದಾಖಲೆಗಳನ್ನು ದೊಡ್ಡ ಅಂತರದಿಂದ ಹಿಂದಿಕ್ಕಿದೆ.

ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಆರಂಭವಾಗುತ್ತಿರುವುದರಿಂದ ಚಿತ್ರದ ಗಳಿಕೆಗೆ ಭಾರಿ ಬೂಸ್ಟ್ ಸಿಗಲಿದೆ. ಈ ಯಶಸ್ಸಿನ ಓಟ ಹೊಸ ವರ್ಷದವರೆಗೂ ಮುಂದುವರಿಯುವ ಸಾಧ್ಯತೆಯಿದೆ.

ಕಾಂತಾರ ಚಾಪ್ಟರ್‌ 1 ಚಿತ್ರದ ಗಳಿಕೆಯನ್ನು ಬ್ರೇಕ್‌ ಮಾಡಲು ದುರಂದರ್ ಗೆ ಇನ್ನೂ 200+ ಕೋಟಿ ರೂ. ಕಲೆಕ್ಷನ್‌ ಆಗಬೇಕಿದೆ. ಕಾಂತಾರ ಚಾಪ್ಟರ್‌ 1 ಚಿತ್ರವು 900+ ಕೋಟಿ ರೂ. ಗಳಿಸಿ, ಈ ವರ್ಷದ ಅತ್ಯಧಿಕ ಗಳಿಕೆ ಕಂಡ ಭಾರತದ ಸಿನಿಮಾಗಳ ಮೊದಲ ಸ್ಥಾನದಲ್ಲಿದೆ.

700 ಕೋಟಿ ರೂ. ಗಳಿಸಿದ ದುರಂಧರ್ ! Read More

ಡಿಸೆಂಬರ್ 25 ಕ್ಕೆ ʻ45ʼ ಚಿತ್ರ ಬಿಡುಗಡೆ: ಸದ್ದು ಮಾಡುತ್ತಿದೆ ಟ್ರೇಲರ್

ಬೆಂಗಳೂರು: ಶಿವರಾಜ್‌ಕುಮಾರ್‌, ಉಪೇಂದ್ರ ಮತ್ತು ರಾಜ್‌ ಬಿ ಶೆಟ್ಟಿ ಅಭಿನಯದ ʻ45ʼ ಚಿತ್ರದ ಟ್ರೇಲರ್‌ ಭಾರಿ ಸದ್ದು ಮಾಡುತ್ತಿದೆ.

ಡಿಸೆಂಬರ್‌ 25 ಕ್ರಿಸ್ಮಸ್ ದಿನ ಈ ಚಿತ್ರ ತೆರೆಕಾಣಲಿದೆ.ಚಿತ್ರ ಬಿಡುಗಡೆಗೆ ಭಾರಿ ತಯಾರಿ ನಡೆದಿದೆ.

’45’ ಪ್ಯಾನ್‌ ಇಂಡಿಯಾ ಸಿನಿಮಾ ಆಗಿರುವುದರಿಂದ ಪರಭಾಷೆಯಲ್ಲಿ ಇದರ ಬಿಡುಗಡೆಯ ಹಕ್ಕುಗಳನ್ನು ದೊಡ್ಡ ದೊಡ್ಡ ಸಂಸ್ಥೆಗಳು ಪಡೆದುಕೊಂಡಿವೆ. ಜೊತೆಗೆ ಸ್ಯಾಟಲೈಟ್‌ ಮತ್ತು ಒಟಿಟಿ ಹಕ್ಕುಗಳು ಕೂಡ ಮಾರಾಟವಾಗಿವೆ.

ಸದ್ಯ ಕನ್ನಡ ಸಿನಿಮಾಗಳಿಗೆ ಒಟಿಟಿ ಮಾರುಕಟ್ಟೆಯಲ್ಲಿ ಅಂತಹಾ ಬೇಡಿಕೆ ಇಲ್ಲದ ಸಮಯದಲ್ಲಿ ’45’ ಚಿತ್ರ ತೆರೆಗೆ ಬರುವ ಮುನ್ನವೇ ಅದರ ಡಿಜಿಟಲ್‌ ಹಕ್ಕುಗಳು ಮಾರಾಟ ಮಾಡಲಾಗಿದೆ.

’45’ ಸಿನಿಮಾವು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ.
45 ಸಿನಿಮಾವು ಡಿಸೆಂಬರ್ ‌25ರಂದು ಭಾರತದಲ್ಲಿ ತೆರೆಕಂಡರೆ, ಕೆನಡಾದಲ್ಲಿ ಎರಡು ದಿನ ಮೊದಲೇ,ರಿಲೀಸ್ ಆಗುತ್ತಿರುವುದು ವಿಶೇಷ.

ಡಿಸೆಂಬರ್ 25 ಕ್ಕೆ ʻ45ʼ ಚಿತ್ರ ಬಿಡುಗಡೆ: ಸದ್ದು ಮಾಡುತ್ತಿದೆ ಟ್ರೇಲರ್ Read More

ದರ್ಶನ್ ನಟನೆಯ ಡೆವಿಲ್ ಚಿತ್ರ ಬಿಡುಗಡೆ-ಭರ್ಜರಿ ರೆಸ್ಪಾನ್ಸ್

ಬೆಂಗಳೂರು: ನಟ ದರ್ಶನ್ ತೂಗುದೀಪ ಅಭಿನಯದ ದಿ ಡೆವಿಲ್ ಚಿತ್ರ ಗುರುವಾರ ತೆರೆ ಕಂಡಿದ್ದು,ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಅಭಿಮಾನಿಗಳು ಚಿತ್ರಕ್ಕೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ದಿ ಡೆವಿಲ್’ ನ ರೇಟಿಂಗ್ ಮತ್ತು ವಿಮರ್ಶೆಗಳನ್ನು ಬುಕ್ ಮೈ ಶೊ ನಂತಹ ಕೆಲ ವೇದಿಕೆಗಳಲ್ಲಿ ತಿಳಿಸುವಂತಿಲ್ಲ.
ಅಭಿಮಾನಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಕುರಿತು ಚಿತ್ರ ವೀಕ್ಷಿಸಿದ ಬಳಿಕ ದರ್ಶನ್ ಸಹೋದರ, ನಿರ್ದೇಶಕ ದಿನಕರ್ ತೂಗುದೀಪ ಮಾತನಾಡಿ, ನೆಗೆಟಿವ್ ವಿಮರ್ಶೆ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಅದನ್ನು ಆಫ್ ಮಾಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ದುಡ್ಡು ಕೊಟ್ಟು ರೇಟಿಂಗ್ ಮಾಡಿಸೋ ಕೆಲಸ ಆಗುತ್ತಿದೆ. ಈ ಮೂಲಕ ಸಿನಿಮಾ ಸಂಸ್ಕೃತಿಯನ್ನು ಹಾಳು ಮಾಡುವ ಕೆಲಸ ಮಾಡಲಾಗುತ್ತಿದೆ ನನ್ನ ರಾಯಲ್ ಸಿನಿಮಾಗೂ ಇದೇ ಅನುಭವ ಆಗಿದೆ ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ದರ್ಶನ್ ನಟನೆಯ ಡೆವಿಲ್ ಚಿತ್ರ ಬಿಡುಗಡೆ-ಭರ್ಜರಿ ರೆಸ್ಪಾನ್ಸ್ Read More

ಖ್ಯಾತ ಹಿರಿಯ ಹಾಸ್ಯ ನಟ ಉಮೇಶ್ ವಿಧಿವಶ

ಬೆಂಗಳೂರು: ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ಹಾಸ್ಯ ನಟ ಎಂ.ಎಸ್.ಉಮೇಶ್ ಅವರು ವಿಧಿವಶರಾಗಿದ್ದಾರೆ.

ಕಳೆದ ಎರಡು ತಿಂಗಳಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ‌ಕಾಯಿಲೆಗೆ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಸುಮಾರು 8.30 ಕ್ಕೆ ಕಿದ್ವಾಯಿ ಆಸ್ಪತ್ರೆಯಲ್ಲೇ ಉಮೇಶ್ ಕೊನೆಯುಸಿರೆಳೆದಿದ್ದಾರೆ.

ಮಧ್ಯಾಹ್ನ 2 ಗಂಟೆವರೆಗೂ ಉಮೇಶ್ ಅವರ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಇಟ್ಟು ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ಎಂ. ಎಸ್. ಉಮೇಶ್ ಮೈಸೂರಿನಲ್ಲಿ ಏಪ್ರಿಲ್ 22, 1945ರಲ್ಲಿ ಜನಿಸಿದವರು.ಚಿಕ್ಕವಯಸಿನಿಂದಲೇ ಬಣ್ಣ ಹಚ್ಚಿದ್ದರು. ರಂಗಭೂಮಿ ಮತ್ತು ಚಲನಚಿತ್ರ ಎರಡರಲ್ಲೂ 1948ರಿಂದಲೂ ನಟಿಸುತ್ತಿದ್ದರು.

ಮಕ್ಕಳ ರಾಜ್ಯ, ಭಾಗ್ಯವಂತರು, ಕಿಲಾಡಿ ಜೋಡಿ, ಗುರು ಶಿಷ್ಯರು, ಭೂಮಿಗೆ ಬಂದ ಭಗವಂತ, ಹಾಲು ಜೇನು, ಕಾಮನಬಿಲ್ಲು, ಅಪೂರ್ವ ಸಂಗಮ, ಶೃತಿ ಸೇರಿದಾಗ,ಮೇಘ ಮಂದಾರ, ಆಕಸ್ಮಿಕ, ಸರ್ವರ್ ಸೋಮಣ್ಣ, ಮೇಘಮಾಲೆ, ನನ್ನಾಸೆಯ ಹೂವೆ, ಜಾಕಿ, ಮುಸ್ಸಂಜೆ ಮಾತು ಸೇರಿದಂತೆ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಅಯ್ಯೋ ಇವ್ರೂ ನನ್ನ ಅಪಾರ್ಥ ಮಾಡ್ಕೊಂಬಿಟ್ರಲ್ಲ. ನಾನೇನೂ ಬೇಕೂ ಅಂತ ಹೀಗ್ ಮಾಡ್ಲಿಲ್ಲ ಈ ಡೈಲಾಗ್ ಗಳು ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿವೆ.ಈ ಡೈಲಾಗ್ ಗಳನ್ನು ಬಹಳಷ್ಟು ಮಂದಿ ಈಗಲೂ ಸ್ಮರಿಸುತ್ತಾರೆ.

ಚಿತ್ರರಂಗದ ಗಣ್ಯರು,ನಟ,ನಟಿಯರು,ಕಲಾವುದರು ಅಂತಿಮ ನಮನ ಸಲ್ಲಿಸಿದರು.

ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು,ರಾಜಕೀಯ ನಾಯಕರು ಉಮೇಶ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.ಅವರ ಆತ್ಮಕ್ಕೆ‌ ಶಾಂತಿ ಕೋರಿದ್ದಾರೆ.

ಖ್ಯಾತ ಹಿರಿಯ ಹಾಸ್ಯ ನಟ ಉಮೇಶ್ ವಿಧಿವಶ Read More

ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ರಿಷಬ್‌

ಮೈಸೂರು: ಕಾಂತಾರ ಚಾಪ್ಟರ್ 1 ಯಶಸ್ಸಿನ ಬೆನ್ನಲ್ಲೇ ನಟ ರಿಷಬ್ ಶೆಟ್ಟಿ ಟೆಂಪಲ್ ರನ್ ಮಾಡುತ್ತಿದ್ದು‌ ಗುರುವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು.

ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಿಷಬ್ ಶೆಟ್ಟಿ, ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದೇನೆ. ಕಾಂತಾರ ಚಾಪ್ಟರ್ 1 ಯಶಸ್ವಿಯಾಗಿದೆ. ನಮ್ಮ ತಂಡದ ಶ್ರಮವನ್ನ ಜನರು ಒಪ್ಪಿದ್ದಾರೆ. ನಮ್ಮ ಸಿನಿಮಾದ ಯಶಸ್ಸು ಮೊದಲು ಕನ್ನಡಿಗರಿಗೆ ಸಲ್ಲಬೇಕು ಎಂದು ಹೇಳಿದರು.

ಕಾಂತಾರ ಬಂದಾಗ ಜನರು ಇಷ್ಟ ಪಟ್ಟಿದ್ದರು. ಸಿನಿಮಾದ ಗಳಿಕೆ, ಆದಾಯದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.

ಸಿನಿಮಾದಲ್ಲಿ ಚಾಮುಂಡಿ ದೈವದ ಆಶೀರ್ವಾದ ಇರೋದಕ್ಕೆ ಸಿನಿಮಾ ಒಳ್ಳೆ ರೀತಿ ಆಗಿದೆ. ದೈವವನ್ನು ನಾನು ನಂಬುತ್ತೇನೆ ಆರಾಧನೆ ಮಾಡುತ್ತೇನೆ. ನಾನು ಅದನ್ನು ತೋರಿಸುವಾಗ ಎಲ್ಲರ ಹಿರಿಯರ ಮಾರ್ಗದರ್ಶನ ತೆಗೆದುಕೊಂಡಿದ್ದೇನೆ. ನನಗೂ ದೈವಕ್ಕೂ ಒಂದು ಸಂಬಂಧ ಇದೆ. ಇಂತಹ ದೊಡ್ಡ ಯಶಸ್ಸು ಸಿಕ್ಕಿರೋದು ಖುಷಿ ಇದೆ ಎಂದು ಸಂತಸ ವ್ಯಕ್ತಪಡಿಸಿದರು.

ನಾನು ಸಣ್ಣ ಊರಿನಿಂದ ಬಂದವನು, ಕರ್ನಾಟಕದಿಂದ ವಿಶ್ವದಾದ್ಯಂತ ಸಿನಿಮಾವನ್ನ ಜನ ಇಷ್ಟ ಪಟ್ಟಿದ್ದಾರೆ. ಇದು ಚಿತ್ರರಂಗಕ್ಕೆ ಒಳ್ಳೆಯ ಬೆಳವಣಿಗೆ. ಇದು ಇನ್ನೂ ಹೆಚ್ಚಿನ ಶಕ್ತಿ ಕೊಡುತ್ತದೆ. ಮುಂದಿನ ಚಿತ್ರ ಜೈ ಹನುಮಾನ್ ಮಾಡುತ್ತಿದ್ದೇನೆ ಎಂದು ನಟ ರಿಷಬ್ ಶೆಟ್ಟಿ ತಿಳಿಸಿದರು.

ನಟ ಅಮಿತಾಬ್ ಬಚ್ಚನ್ ಭೇಟಿ ಮಾಡಿದ್ದೆ. ಅಣ್ಣಾವ್ರ ಬಗ್ಗೆ ಅವರು ಬಹಳ ಮಾತನಾಡಿದರು,ಜತೆಗೆ ತಮ್ಮ ಅನುಭವ ಹಂಚಿಕೊಂಡರು. ಅಂತಹ ಲೆಜೆಂಡ್ ಜೊತೆ ನಾನು ಕಾಲ ಕಳೆದದ್ದು ಖುಷಿ ಕೊಟ್ಟಿದೆ ಎಂದು ನಟ ರಿಷಬ್ ಶೆಟ್ಟಿ ತಿಳಿಸಿದರು.

ಫ್ಯಾನ್ಸ್ ವಾರ್ ಬಗ್ಗೆ ಪ್ರತಿಕ್ರಿಯಿಸಿದ ನಟ ರಿಷಬ್ ಶೆಟ್ಟಿ, ಫ್ಯಾನ್ಸ್ ವಾರ್ ಬಗ್ಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಎಲ್ಲರ ಸಿನಿಮಾ ನೋಡಿ ಕನ್ನಡ ಸಿನಿಮಾ ಗೆಲ್ಲಿಸಿ ಅಂತ ಕೇಳಿಕೊಳ್ಳುತ್ತೇವೆ ಎಂದು ಮನವಿ ಮಾಡಿದರು.

ಥಿಯೇಟರ್ ನಲ್ಲಿ ದೈವ ಆರಾಧನೆ ನೆಪದಲ್ಲಿ ಹುಚ್ಚಾಟ ಮಾಡಬೇಡಿ. ಅದಕ್ಕೆ ಒಂದು ಕ್ರಮ ಇರತ್ತದೆ. ದೈವ ಆರಾಧನೆಗೆ ಒಂದು ಶಿಸ್ತುಬದ್ಧ ಕ್ರಮವಿದೆ. ಆ ರೀತಿ ಮಾಡಬೇಡಿ ಅಂತ ಎಲ್ಲರಿಗೂ ಕೇಳಿಕೊಳ್ಳುತ್ತೇನೆ ಎಂದು ರಿಷಬ್ ಕೋರಿದರು.

ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ರಿಷಬ್‌ Read More

ಕಾಕಾಂತಾರ-1 ಟ್ರೈಲರ್

ಕಾಂತರಾ -1 ಟ್ರೈಲರ್ https://www.gnews5.com/?p=24589

ಬೆಂಗಳೂರು: ಕಾಂತಾರ‌ ಖ್ಯಾತಿಯ ನಟ‌ ರಿಷಬ್ ಶಟ್ಟಿ ಅಭಿನಯದ ಕಾಂತಾರ-1 ಟ್ರೈಲರ್ ಬಿಡುಗಡೆಯಾಗಿದ್ದು ಭಾರೀ ಸದ್ದು ಮಾಡುತ್ತಿದೆ.

ಟ್ರೈಲರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಕೋಟ್ಯಂತರ ವೀಕ್ಷಣೆಗೊಳಗಾಗಿದೆ.

ಕಾಕಾಂತಾರ-1 ಟ್ರೈಲರ್ Read More

ಮತ್ತೊಮ್ಮೆ ಹೌಸ್ ಫುಲ್ ಪ್ರದರ್ಶನ ಕಂಡ ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರಗಳು

ಮೈಸೂರು: ಗುಬ್ಬಿವಾಣಿ ಟ್ರಸ್ಟ್, ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಸಹಯೋಗದೊಂದಿಗೆ, ಮಹಿಳಾ ನಿರ್ದೇಶಕಿಯರ ಆಯ್ದ ಕನ್ನಡ ಕಿರುಚಿತ್ರಗಳ ಮರುಪ್ರದರ್ಶನ ಭರ್ಜರಿ ಯಶಸ್ಸು ಕಂಡಿತು.

ಈ ವರ್ಷದ ಆರಂಭದಲ್ಲಿ ಅವಳ ಹೆಜ್ಜೆ ಕಿರುಚಿತ್ರೋತ್ಸವಕ್ಕೆ ದೊರೆತ ಅಗಾಧ ಪ್ರತಿಕ್ರಿಯೆಯ ನಂತರ, ಇದು ಮೂರನೇ ಪ್ರದರ್ಶನವಾಗಿದ್ದು,ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಮಹಿಳಾ ಧ್ವನಿಗೆ ಪ್ರೇಕ್ಷಕರನ್ನು ಒಟ್ಟುಗೂಡಿಸಿ ಕರೆತಂದಿತು.

ಈ ಆಕರ್ಷಕ ಕಿರುಚಿತ್ರಗಳು ಪ್ರತ್ಯೇಕವಾಗಿ ಮಹಿಳೆಯರಿಗೆಂದೇ ಏರ್ಪಡಿಸಿದ್ದ ಅವಳ ಹೆಜ್ಜೆ ಕಿರುಚಿತ್ರೋತ್ಸವ ಸ್ಪರ್ಧೆಯಲ್ಲಿ ಆಯ್ಧ ಚಿತ್ರಗಳಾಗಿದ್ದು, ವಿವಿಧ ಸಮಕಾಲೀನ ವಿಷಯಗಳ ಕುರಿತು ವಿಭಿನ್ನ ಅಭಿವ್ಯಕ್ತಿ, ದೃಷ್ಟಿಕೋನಗಳನ್ನು ನಿರೂಪಿಸಿದವು.

ಸುಚಿತ್ರದ ಸಂಸ್ಥಾಪಕ ಎಚ್.ಎನ್. ನರಹರಿ ರಾವ್ ಅವರ ಆರಂಭಿಕ ಹೇಳಿಕೆಗಳು ಮತ್ತು ನಾರ್ಮನ್ ಮೆಕ್‌ಲಾರೆನ್ ಅವರ ಅಮರ (ಕ್ಲಾಸಿಕ್) ಕಿರುಚಿತ್ರ ನೈಬರ್ಸ್ (1952) ಪ್ರದರ್ಶನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಗುಬ್ಬಿವಾಣಿ ಟ್ರಸ್ಟ್‌ನ ಮಹಿಳಾ ಸಬಲೀಕರಣ ವಿಭಾಗವಾದ ಅವಳ ಹೆಜ್ಜೆಯ ನಿರ್ದೇಶಕಿ ಶಾಂತಲಾ ದಾಮ್ಲೆ,ಚಿತ್ರೋತ್ಸವದ ಆಶಯ ಮತ್ತು ದೃಷ್ಟಿಕೋನವನ್ನು ಹಂಚಿಕೊಂಡರು.

ಈ ವರ್ಷ ದೊರೆತ ಹೆಚ್ಚು ಬೆಂಬಲದಿಂದ ನಮಗೆ ಅಗಾಧ ಪ್ರೋತ್ಸಾಹ ಸಿಕ್ಕಿದೆ. ಮುಂದಿನ ವರ್ಷದ ಸ್ಪರ್ಧೆಗೆ ಸಲ್ಲಿಕೆಗಳು ಇದೇ ನವೆಂಬರ್ 1 ರಂದು ತೆರೆದಿರುತ್ತವೆ ಎಂದು ಹೇಳಿದರು.

ರಾಜ್ಯೋತ್ಸವ ವಿಶೇಷ ಕಾರ್ಯಕ್ರಮವಾಗಿ, ನವೆಂಬರ್ 30 ರೊಳಗೆ ಸಲ್ಲಿಸಿದ ಸಲ್ಲಿಕೆಗಳಿಗೆ ಪ್ರವೇಶ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಹೆಚ್ಚಿನ ವಿವರಗಳು ನಮ್ಮ ವೆಬ್‌ಸೈಟ್: www.gubbivanitrust.ngo ನಲ್ಲಿ ಲಭ್ಯವಿರುತ್ತವೆ ಎಂದು ಮಾಹಿತಿ ನೀಡಿದರು.

ಪ್ರದರ್ಶಿತ ಕಿರುಚಿತ್ರಗಳು:
ಸತ್ಯ ಪ್ರಮೋದ ಎಂ.ಎಸ್ ನಿರ್ದೇಶನದ ‘ಆನ್ ಲೈನ್’* (2025), ಮಾನಸ ಯು ಶರ್ಮ ನಿರ್ದೇಶನದ ‘ಸೊಲೋ ಟ್ರಾವೆಲ್ಲರ್’ (2023), ತೃಪ್ತಿ ಕುಲಕರ್ಣಿ ನಿರ್ದೇಶನದ ‘ಹೌ ಆರ್ ಯು?’ (2023), ಮಂದಾರ ಬಟ್ಟಲಹಳ್ಳಿ ನಿರ್ದೇಶನದ ‘ದಿ ಲಾಸ್ಟ್ ಹ್ಯಾಪಿ ಕಸ್ಟಮರ್’ (2024), ಚಂದನಾ ನಾಗ್ ನಿರ್ದೇಶನದ ‘ಉಭಯ’ (2024), ಕ್ಷಮಾ ಅಂಬೆಕಲ್ಲು ನಿರ್ದೇಶನದ ‘ಪುಷ್ಪ’ (2024), ಕವಿತಾ ಬಿ ನಾಯಕ್ ನಿರ್ದೇಶನದ ‘ಗ್ಲೀ’ (2023), ಸಿಂಚನಾ ಶೈಲೇಶ್ ನಿರ್ದೇಶನದ ‘ಕೇಕ್ ವಾಕ್’ (2025)

ಪುರವಂಕರ ಸಭಾಂಗಣವು ಉತ್ಸಾಹಭರಿತ ಪ್ರೇಕ್ಷಕರಿಂದ ತುಂಬಿ, ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. ನಿರ್ದೇಶಕಿಯರೊಂದಿಗೆ ಪ್ರಶ್ನೋತ್ತರ ಅವಧಿಯಲ್ಲಿ, ಪ್ರೇಕ್ಷಕರು ನೇರವಾಗಿ ಉತ್ಸಾಹಭರಿತ ಹಾಗೂ ಚಿಂತನಶೀಲ ಸಂವಾದದಲ್ಲಿ ತೊಡಗಿದ್ದು ಬಹಳ ವಿಶೇಷ.

ಮತ್ತೊಮ್ಮೆ ಹೌಸ್ ಫುಲ್ ಪ್ರದರ್ಶನ ಕಂಡ ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರಗಳು Read More

ನಟಿ ರನ್ಯಾ ರಾವ್ ಗೆ 102 ಕೋಟಿ ರೂ. ದಂಡ

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್‌ಗೆ ಡಿಆರ್‌ಐ ಕೋಟ್ಯಾಂತರ ರೂಗಳ ದಂಡ ವಿದೇಶಿಸುವ ಮೂಲಕ ಶಾಕ್‌ ನೀಡಿದೆ.

ರನ್ಯಾ ರಾವ್ ಗೆ 102 ಕೋಟಿ ರೂ. ದಂಡ ವಿಧಿಸಲಾಗಿದೆ.

127 ಕೆಜಿ ಚಿನ್ನ ಅಕ್ರಮ ಸಾಗಾಟ ಸಾಬೀತಾದ ಹಿನ್ನೆಲೆಯಲ್ಲಿ ದೊಡ್ಡ ಮೊತ್ತದ ದಂಡ ವಿಧಿಸಲಾಗಿದೆ.

ಡಿಆರ್‌ಐ ತನಿಖೆಯಲ್ಲಿ ಅಕ್ರಮ ಚಿನ್ನ ಸಾಗಾಟ ಮಾಹಿತಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ 102 ಕೋಟಿ ರೂ. ಪಾವತಿ ಮಾಡುವಂತೆ ರನ್ಯಾ ರಾವ್‌ಗೆ ಡಿಆರ್‌ಐ ಶೋಕಾಸ್‌ ನೋಟಿಸ್‌ ನೀಡಿದೆ.

ನಾಲ್ವರು ಆರೋಪಿಗಳಿಗೂ ಡಿಆರ್‌ಐ ಶೋಕಾಸ್ ನೋಟಿಸ್ ನೀಡಿದೆ.

ಈಗಾಗಲೇ ಇ.ಡಿ 37 ಕೋಟಿ ರೂ. ಆಸ್ತಿ ಜಪ್ತಿ ಮಾಡಿದೆ. ಆಸ್ತಿ ಕಳೆದುಕೊಂಡಿರುವ ರನ್ಯಾ ರಾವ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಡಿಆರ್‌ಐ ತನಿಖೆಯಲ್ಲಿ ದುಬೈನಿಂದ ಚಿನ್ನ ವಹಿವಾಟು ಮಾಡಿರುವುದು ಸಾಬೀತಾಗಿದ್ದು, 127 ಕೆಜಿ ಚಿನ್ನವನ್ನು 1 ವರ್ಷದಲ್ಲಿ ನಟಿ ರನ್ಯಾ ರಾವ್ ಬೆಂಗಳೂರಿಗೆ ತಂದಿದ್ದಾರೆ.

ನಟಿ ರನ್ಯಾ ರಾವ್ ಗೆ 102 ಕೋಟಿ ರೂ. ದಂಡ Read More

ಸುಪ್ರೀಂ ಕೋರ್ಟ್ ಆದೇಶ‌ ಸ್ವಾಗತಿಸುವೆ:ರಮ್ಯಾ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಸ್ವಾಗತಿಸುವುದಾಗಿ ಮೋಹಕ ತಾರೆ ರಮ್ಯಾ ತಿಳಿಸಿದ್ದಾರೆ.

ನಟ ದರ್ಶನ್ ಜಾಮೀನು ರದ್ದಾದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರಮ್ಯಾ,ಸುಪ್ರೀಂ ಕೋರ್ಟ್ ಆದೇಶಗಳಿಗೆ ಯಾವುದೇ ಕೇಸಾಗಲಿ ಎಲ್ಲರೂ ತಲೆಬಾಗಬೇಕು ಎಂದು ಹೇಳಿದರು.

ದರ್ಶನ್ ಅವರು ಲೈಟ್ ಬಾಯ್‌ ಆಗಿ ಸಿನಿಮಾರಂಗಕ್ಕೆ ಬಂದು ಬಹಳ ಕಷ್ಟಪಟ್ಟು ಮುಂದೆ ಬಂದಿದ್ದಾರೆ‌ ಎಂದು ತಿಳಿಸಿದರು.

ಅವರು ಮನಸು ಮಾಡಿದ್ದರೆ ಇನ್ನೂ ಎತ್ತರಕ್ಕೆ ಬೆಳೆಯಬಹುದಿತ್ತು,ಆದರೆ ಎಲ್ಲವನ್ನೂ ಹಾಳು ಮಾಡಿಕೊಂಡರು ಎಂದು ಹೇಳಿದರು.

ತಮಗೆ ಬರುತ್ತಿದ್ದ ಅಶ್ಲೀಲ ಸಂದೇಶಗಳು ಕಡಿಮೆಯಾಗಿದೆ ಸಧ್ಯ ನೆಮ್ಮದಿ ಇದೆ,ಕಿರಿಕ್ ತಪ್ಪಿದೆ ಎಂದು ರಮ್ಯಾ ತಿಳಿಸಿದರು.

ಸುಪ್ರೀಂ ಕೋರ್ಟ್ ಆದೇಶ‌ ಸ್ವಾಗತಿಸುವೆ:ರಮ್ಯಾ Read More

ಚಾಮುಂಡೇಶ್ವರಿ ದೇವಿ ದರ್ಶನ ಪಡೆದ ಶಿವಣ್ಣ

ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೈಸೂರಿಗೆ ಆಗಮಿಸಿದ್ದು,ಅಭಿಮಾನಿಗಳು ಖುಷ್ ಆಗಿದ್ದಾರೆ.

ಅವರು ಇಂದು ನಾಡ ಅಧಿದೇವತೆ ಚಾಮುಂಡೇಶ್ವರಿ ದರುಶನ ಪಡೆದು ಪೂಜೆ ಸಲ್ಲಿಸಿದರು.

ಅಭಿಮಾನಿಗಳ ಪ್ರೀತಿಯ ಶಿವಣ್ಣ ತಮ್ಮ ಪತ್ನಿ ಗೀತಾ ಜೊತೆ ಚಾಮುಂಡಿಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದರು.

ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ ಶಶಿಶೇಖರ್ ದೀಕ್ಷಿತ್‌ ಅವರು ಶಿವರಾಜ್ ಕುಮಾರ್ ಕುಟುಂಬಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದರು.

ಚಾಮುಂಡೇಶ್ವರಿ ದೇವಿ ದರ್ಶನ ಪಡೆದ ಶಿವಣ್ಣ Read More