ಅರಮನೆಯಲ್ಲಿ ಗಜಪಡೆಗೆ ಅದ್ದೂರಿ ಸ್ವಾಗತ

ಮೈಸೂರು,ಆ.23: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ‌ ಮೊದಲ ಹಂತದ ಗಜಪಡೆಯನ್ನು ಅರಮನೆಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ದಸರಾ ಗಜಪಡೆಯ ಆಗಮನದಿಂದ ಸಾಂಸ್ಕೃತಿಕ ನಗರಿಯಲ್ಲಿ ಈಗಾಗಲೇ ಹಬ್ಬದ ವೈಭವ ಕಳೆಗಟ್ಟಿದೆ.

ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಗಜಪಡೆಗೆ

ಮೈಸೂರು ಜಿಲ್ಲಾಡಳಿತ, ಅರಮನೆ ಮಂಡಳಿ ವತಿಯಿಂದ ಗಜಪಡೆಗೆ ಬೆಳಗ್ಗೆ 10.10 ರಿಂದ 10.30 ರ ಶುಭಗಳಿಗೆಯಲ್ಲಿ ಪೂಜೆ ಸಲ್ಲಿಸಿ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು.

ಮೈಸೂರಿನ ಅಶೋಕಪುರಂನ ಅರಣ್ಯಭವನದಲ್ಲಿ ತಂಗಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9
ಆನೆಗಳಿಗೆ ಇಲಾಖೆ ವತಿಯಿಂದ ಪುಜೆ ಸಲ್ಲಿಸಿ ಬೀಳ್ಕೊಡಲಾಯಿತು,
ನಂತರ ಅರಣ್ಯಭವನದಿಂದ ಕಾಲ್ನಡಿಗೆ ಮೂಲಕ ಅರಮನೆಗೆ ಗಜಪಡೆ ಆಗಮಿಸಿತು.

ಅಭಿಮನ್ಯು,ಏಕಲವ್ಯ, ಭೀಮ, ಕಂಜನ್, ಲಕ್ಷ್ಮೀ, ವರಲಕ್ಷ್ಮೀ, ರೋಹಿತ್, ಗೋಪಿ, ಧನಂಜಯ ಆನೆಗಳು ಅರಮನೆಗೆ ಆಗಮಿಸಿದ್ದು‌ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ರಾಜ ಬೀದಿಗಳಲ್ಲಿ ಸಾಗಿ ಬಂದ ದಸರಾ ಗಜಪಡೆ ಕಣ್ತುಂಬಿಕೊಳ್ಳಲು ಮೈಸೂರಿಗರು ಮುಗಿ ಬಿದ್ದುದು ಕಂಡುಬಂದಿತು.

ಗಜಪಡೆ‌ ಆಗಮನದ ವೇಳೆ ಶಾಸಕರಾದ ತನ್ವೀರ್ ಸೇಠ್, ಶಾಸಕರಾದ ಕೆ.ಹರೀಶ್ ಗೌಡ, ಶ್ರೀವತ್ಸಾ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಪಂ ಸಿಇಒ ಕೆ.ಎಂ.ಗಾಯಿತ್ರಿ, ಎಸ್ ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರಾದ ಎಂ.ಕೆ.ಸವಿತಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಅರಮನೆಯಲ್ಲಿ ಗಜಪಡೆಗೆ ಅದ್ದೂರಿ ಸ್ವಾಗತ Read More

ಗಣಪತಿಯನ್ನು ಕೂರಿಸಲು ಸಿಂಗಲ್ ವಿಂಡೋ ಅನುಮತಿಗೆ ಬಿಜೆಪಿ ಮನವಿ

ಮೈಸೂರು, ಆ.22: ಗಣಪತಿಗಳನ್ನು ಕೂರಿಸಲು ಸಿಂಗಲ್ ವಿಂಡೋ ಅನುಮತಿಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್‍. ಜಿ ಗಿರಿಧರ್ ಮನವಿ ಮಾಡಿದರು.

ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಎಚ್‍. ಜಿ ಗಿರಿಧರ್ ನೇತೃತ್ವದ ನಿಯೋಗ ಅಪರಾ ಜಿಲ್ಲಾಧಿಕಾರಿ ಪಿ ಶಿವರಾಜು ರವರಿಗೆ ಮನವಿ ಸಲ್ಲಿಸಿತು.

ಸಾಮೂಹಿಕವಾಗಿ ಅನೇಕ ಸಂಘ ಸಂಸ್ಥೆಗಳು ಮತ್ತು ಯುವಕರು ರಸ್ತೆ ಬದಿ, ಪಾರ್ಕ್ ಗಳಲ್ಲಿ ಮತ್ತು ಅವರವರ ಏರಿಯಾಗಳಲ್ಲಿ ಸಾಮೂಹಿಕವಾಗಿ ಕೂರಿಸುವ ಗಣಪತಿಗಳನ್ನು ಸಲೀಸಾಗಿ ಕೂರಿಸುವ ರೀತಿಯಲ್ಲಿ ಎಲ್ಲಾ ಅನುಮತಿ ಗಳನ್ನು ಒಂದೇ ಕಡೆ ನೀಡಬೇಕು ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.

ಕಾರ್ಪೊರೇಷನ್, ಕೆಇಬಿ, ಕೆಎಸ್ಆರ್ಟಿಸಿ ಮತ್ತು ಪೊಲೀಸ್ ಹಾಗೂ ಅಗ್ನಿಶಾಮಕ ದಳ ಈ ಎಲ್ಲವೂ ಒಂದೇ ಕಡೆ ಅರ್ಜಿಗಳನ್ನು ತೆಗೆದುಕೊಂಡು 24 ಗಂಟೆಗಳಲ್ಲಿ ಪರಿಶೀಲಿಸಿ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ ಸರಳವಾಗಿ ಅನುಮತಿ ಸಿಗುವ ರೀತಿಯಲ್ಲಿ ಮಾಡಿಕೊಡಬೇಕು.

ಸಣ್ಣ ಸಣ್ಣ ಮಕ್ಕಳು ತೋರಿಸುವ ಗಣಪತಿ ಗಳಿಗೆ ಅನುಮತಿ ಅಗತ್ಯವಿಲ್ಲವೆಂದು ಘೋಷಿಸಬೇಕು ಸಾಮೂಹಿಕವಾಗಿ ಕೂರಿಸುವ ಗಣಪತಿಗಳನ್ನ ಮುಂದಿನ ಪೀಳಿಗೆಗೆ ಕೊಂಡುಯುವುದಕ್ಕೆ ಸಹಕರಿಸಬೇಕೆಂದು ಮನವಿ ಪತ್ರಯಲ್ಲಿ ಕೋರಲಾಗಿದೆ.

ನಿಯೋಗದಲ್ಲಿ ಬಿಜೆಪಿ ನಗರ ಉಪಾಧ್ಯಕ್ಷರಾದ ಎಸ್. ಕೆ ದಿನೇಶ್, ಜೋಗಿ ಮಂಜು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ಎನ್ ಆರ್ ಕ್ಷೇತ್ರದ ಅಧ್ಯಕ್ಷ ಸ್ಮಾರ್ಟ್ ಮಂಜು, ಎನ್ ಆರ್ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ನವೀನ್ ರಾಜ್, ಮತ್ತಿತರರು ಹಾಜರಿದ್ದರು.

ಗಣಪತಿಯನ್ನು ಕೂರಿಸಲು ಸಿಂಗಲ್ ವಿಂಡೋ ಅನುಮತಿಗೆ ಬಿಜೆಪಿ ಮನವಿ Read More

ವಿಕಲಚೇತನರಿಗೆ ಅನುಕಂಪಕ್ಕಿಂತ ಅವಕಾಶಗಳನ್ನು ಕಲ್ಪಿಸಿ:ಭವಾನಿ ಶಂಕರ್

ಮೈಸೂರು,ಆ.22:ಚಾಮುಂಡಿಪುರಂನಲ್ಲಿರುವ ಅರುಣೋದಯ ವಿಶೇಷ ಶಾಲಾ ಮಕ್ಕಳಿಗೆ ಮಹರ್ಷಿ ಶಾಲೆಯ ವ್ಯವಸ್ಥಾಪಕ ಅಧ್ಯಕ್ಷರಾದ ಭವಾನಿ ಶಂಕರ್ ಸಮವಸ್ತ್ರ ಹಾಗೂ ಊಟ ವಿತರಿಸಿದರು.

ಈ‌ ವೇಳೆ ಮಾತನಾಡಿದ ಭವಾನಿ ಶಂಕರ್,
ವಿಕಲಚೇತನರಿಗೆ ಅನುಕಂಪಕ್ಕಿಂತ ಅವಕಾಶಗಳನ್ನು ಕಲ್ಪಿಸಬೇಕು,ಈ ಮಕ್ಕಳ ಪೋಷಣೆ, ಶಿಕ್ಷಣ, ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಮಹತ್ವದ್ದು ಎಂದು ತಿಳಿಸಿದರು.

ಅನೇಕ ವಿಕಲಚೇತನರು ಹಲವಾರು ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ, ಅಂತಹ ಸಾಧಕರ ಜೀವನವನ್ನು ಮಾದರಿಯಾಗಿ ಅನುಸರಿಸಿ, ಕೀಳರಿಮೆ ಹೊಂದದೇ ಉತ್ತಮವಾದುದುನ್ನು ಸಾಧಿಸಲು ಶ್ರಮಿಸಬೇಕು, ಸರ್ಕಾರದ ಸವಲತ್ತುಗಳನ್ನು ಸದುಪಯೋಗ
ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮ್ ಪ್ರಸಾದ್ ಮಾತನಾಡಿ
ಈ ಶಾಲೆಯಲ್ಲಿ ಬುದ್ಧಿಮಾಂದ್ಯ ಹಾಗೂ ವಿಕಲಚೇತನ ಮಕ್ಕಳಿಗೆ ಪ್ರತ್ಯೇಕವಾಗಿ ಆರೈಕೆ ಮಾಡಲಾಗುತ್ತಿದ್ದು, ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅವರಿಗೆ ವಿಶೇಷ ತರಬೇತಿಯನ್ನೂ ನೀಡಲಾಗುತ್ತಿದೆ ಎಂದು ಹೇಳಿದರು.

ಇಲ್ಲಿರುವ ಮಕ್ಕಳಲ್ಲಿ ಶೇ.50ರಷ್ಟು ಮಕ್ಕಳು ಕಂಪ್ಯೂಟರ್ ಕಲಿತಿದ್ದಾರೆ. ಅವ ರಲ್ಲಿರುವ ಪ್ರತಿಭೆಯನ್ನು ಹೊರತರು ವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಪ್ರಿಯಾಂಕ, ಅಂಕಿತ ಅರುಣೋದಯ ಶಾಲೆಯ ಶಿಕ್ಷಕಿಯರು ಹಾಜರಿದ್ದರು.

ವಿಕಲಚೇತನರಿಗೆ ಅನುಕಂಪಕ್ಕಿಂತ ಅವಕಾಶಗಳನ್ನು ಕಲ್ಪಿಸಿ:ಭವಾನಿ ಶಂಕರ್ Read More

ಕೊರಗಜ್ಜ ದೈವಸ್ಥಾನದ ಅರ್ಚಕ ತೇಜುಕುಮಾರ್ ನಾಪತ್ತೆ ಆಗಿಲ್ಲ:ತೇಜಸ್ವಿ

ಮೈಸೂರು, ಆ.22:ಮೈಸೂರಿನ ಕೊರಗಜ್ಜ ದೈವಸ್ಥಾನದ ಪ್ರದಾನ ಅರ್ಚಕ ತೇಜುಕುಮಾರ್ ನಾಪತ್ತೆ ಆಗಿಲ್ಲ ಮೈಸೂರಿನಲ್ಲೇ ಇದ್ದಾರೆ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಹೇಳಿದ್ದಾರೆ.

ಮೈಸೂರು, ಭೂ ವಿವಾದದ ಜತೆಗೆ ಸಂಬಂಧಿಕರ ಕಲಹದಿಂದಾಗಿ ಮೈಸೂರಿನ ರಿಂಗ್ ರಸ್ತೆಯ ಕೇರ್ಗಳ್ಳಿ ಬಳಿ ಇರುವ ಕೊರಗಜ್ಜ ದೇವಸ್ಥಾನಕ್ಕೆ ಕಳೆದ ಒಂದು ತಿಂಗಳಿಂದ ಬೀಗ ಹಾಕಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ದೇವಸ್ಥಾನದ ಅರ್ಚಕ ತೇಜುಕುಮಾರ್ ದೇವಸ್ಥಾನಕ್ಕೆ ಬೀಗ ಜಡಿದು ನಾಪತ್ತೆಯಾಗಿದ್ದಾರೆ ಎಂದು ಯಾರೊ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ತೇಜಸ್ವಿ ಬೇಸರ ವ್ಯಕ್ತಪಡಿಸಿದ್ದಾರೆ.

ತೇಜುಕುಮಾರ್ ಮೈಸೂರಿನಲ್ಲೇ ಇದ್ದಾರೆ ಎಲ್ಲೂ ತಲೆ ಮರೆಸಿಕೊಂಡು ಹೋಗಿಲ್ಲ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ತೇಜುಕುಮಾರ್ ಸರಳ ಸಜ್ಜನಿಕೆಯ ವ್ಯಕ್ತಿತ್ವ ಇರುವ ಮನುಷ್ಯ ಇಂತವರ‌‌ ಮೇಲೆ ಕೋಟ್ಯಂತರ ರೂಪಾಯಿ ದುಡ್ಡು ಮಾಡಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ

ಕೊರಗಜ್ಜ ದೈವದ ಭಕ್ತಾದಿಗಳು ಆತಂಕ ಪಡುವ ಅಗತ್ಯವಿಲ್ಲ ಕೆಲವೇ ದಿನಗಳಲ್ಲಿ ಪ್ರಧಾನ ಅರ್ಚಕರಾದ ತೇಜುಕುಮಾರ್ ಮೈಸೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಮಾಡಿ ಎಲ್ಲದಕ್ಕೂ ಉತ್ತರಿಸಲಿದ್ದರೆ ಎಂದು ತೇಜಸ್ವಿ ತಿಳಿಸಿದ್ದಾರೆ.

ಕೊರಗಜ್ಜ ದೈವಸ್ಥಾನದ ಅರ್ಚಕ ತೇಜುಕುಮಾರ್ ನಾಪತ್ತೆ ಆಗಿಲ್ಲ:ತೇಜಸ್ವಿ Read More

ರಾಜ್ಯಪಾಲ ಸಿ.ಎಚ್ ವಿಜಯಶಂಕರ್ ಗೆ ಅಭಿನಂದನೆ

ಮೈಸೂರು, ಆ.22: ಮೈಸೂರಿಗೆ ಆಗಮಿಸಿದ ಮೇಘಾಲಯದ ರಾಜ್ಯಪಾಲರಾದ ಸಿ. ಎಚ್ ವಿಜಯಶಂಕರ್ ಅವರನ್ನು ವಿವಿಧ ಸಂಘಟನೆಯ ಮುಖಂಡರು ಅಭಿನಂದಿಸಿದರು.

ಹಾಲುಮತ ಮಹಾಸಭಾದ ಮಾಜಿ ಜಿಲ್ಲಾಧ್ಯಕ್ಷರಾದ ವಿಜಯ್ ಕುಮಾರ್ ಹಾಗೂ ಈಶ್ವರ್, ವಿವನ್, ಕಡಕೋಳ ಮಹೇಶ್, ಮುಸಲ್ಮಾನ ಮುಖಂಡರಾದ ಕಲೀಮ್, ಶರೀಫ್, 55ನೇ ವಾರ್ಡಿನ ಯುವ ಮುಖಂಡರಾದ ಶಶಿ ರಾಜ್ ಎಂ ಎನ್ ಮತ್ತಿತರರು ಸಿ.ಹೆಚ್. ವಿಜಯಶಂಕರ್ ಅವರಿಗೆ‌ ಶಾಲು ಹೊದಿಸಿ ಹಾರ ಹಾಕಿ ಅಭಿನಂದಿಸಿ ಶುಭ ಕೋರಿದರು.

ರಾಜ್ಯಪಾಲ ಸಿ.ಎಚ್ ವಿಜಯಶಂಕರ್ ಗೆ ಅಭಿನಂದನೆ Read More

ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ:ನಾರಾಯಣಗೌಡ

ಮೈಸೂರು,ಆ.22: ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಮಹಿಳೆಯರಿಗಾಗಿ ಆಯೋಜಿಸಿದ್ದ ಆನ್ ಲೈನ್ ವರಮಹಾಲಕ್ಷ್ಮಿ ಸೆಲ್ಫಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಬಹುಮಾನ ವಿತರಿಸಿ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಸಿ,ಮಕ್ಕಳಿಗಾಗಿ ಆಸ್ತಿಯನ್ನು ಮಾಡದೆ ಮಕ್ಕಳನ್ನೇ ಆಸ್ತಿ ಮಾಡಬೇಕು ಎಂದು ಸಲಹೆ ನೀಡಿದರು.

ನಮ್ಮ ಧರ್ಮದ ಜಾಗೃತಿಯನ್ನು ಎಲ್ಲರಲ್ಲೂ ಮೂಡಿಸಬೇಕು, ಮಂದಿನ ಪೀಳಿಗೆಯ ಮಕ್ಕಳನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು, ಈ ಮೂಲಕ ಹಿಂದೂ ಸನಾತನ ಸಂಸ್ಕೃತಿ ರಕ್ಷಿಸಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಮಾತನಾಡಿ,
ತಾಯಂದಿರನ್ನೆಲ್ಲಾ ತೊಡಗಿಸಿಕೊಂಡು ನಡೆಸಿಕೊಂಡು ಬರುವಂತಹ ಅತಿ ದೊಡ್ಡ ಹಬ್ಬ ಶ್ರೀ ವರಮಹಾಲಕ್ಷ್ಮಿ ವ್ರತ , ನಮ್ಮ ಸಂಸ್ಕಾರ ಸಂಸ್ಕೃತಿ ಉಳಿಯಬೇಕೆಂದರೆ ಇಂತಹ ಹಬ್ಬಗಳು ಎಲ್ಲಾ ಕಡೆಗಳಲ್ಲಿ ಒಟ್ಟುಗೂಡಿ ನಡೆಸಲ್ಪಡುವುದು ಅತಿ ಮುಖ್ಯವಾಗಿದೆ ಎಂದು ಹೇಳಿದರು.

250ಕ್ಕೂ ಹೆಚ್ಚು ಸ್ಪರ್ಧಿಗಳು ಆನ್ಲೈನ್ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದು,ವಿಜೇತರಾದ
ರಿಷು ಪುರುಷೋತ್ತಮ್,
ಪ್ರಮೀಳಾ ರಾಧಾಕೃಷ್ಣ, ಎಚ್ ಎಸ್ ಪ್ರೇಮಾವತಿ, ಗಾಯಿತ್ರಿ ಜಿ, ಚೈತ್ರ ಗುರುದತ್, ಹರ್ಷಿತ, ರೂಪಶ್ರೀ, ವಿಜಯಲಕ್ಷ್ಮಿ, ಕಲಾ, ಶೃತಿ, ಸುಧಾಬಾಯಿ, ಶಿಲ್ಪ ಅರುಣ್, ಹರ್ಷಿಣಿ ವಿಜಯ್,ನೇತ್ರಾವತಿ ಯಶವಂತ್ ಕುಮಾರ್, ಪ್ರೀತಿ ವಿನಯ್ ಅವರುಗಳಿಗೆ
ಬಹುಮಾನ ನೀಡಲಾಯಿತು.

ನಗರ ಪಾಲಿಕೆ ಮಾಜಿ ಸದಸ್ಯ ಮ. ವಿ ರಾಮಪ್ರಸಾದ್, ಸಮೃದ್ಧಿ ವಾರ್ತಾ ಪತ್ರಿಕೆಯ ಸಂಪಾದಕರಾದ ಸಹನಾ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಚಿದನ್ವಿ ಟ್ರಸ್ಟ್ ಅಧ್ಯಕ್ಷೆ ನಾಗಮಣಿ, ಅಥರ್ವ ಸ್ಕಿಲ್ ಫೌಂಡೇಶನ್ ಅಧ್ಯಕ್ಷೆ ಪುಷ್ಪ, ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ,ಸಚಿಂದ್ರ, ಚಕ್ರಪಾಣಿ ಮತ್ತಿತರರು ಹಾಜರಿದ್ದರು.

ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ:ನಾರಾಯಣಗೌಡ Read More

ಮಂತ್ರಾಲಯದಲ್ಲಿ ರಾಯರ ಉತ್ತರಾರಾಧನೆ ಸಂಭ್ರಮ

ರಾಯಚೂರು,ಆ.22: ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ ಪ್ರಯುಕ್ತ ರಾಯರ ಉತ್ತರಾರಾಧನೆ ಸಂಭ್ರಮ ಮನೆ ಮಾಡಿದೆ.

ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಿರಂತರವಾಗಿ ನಡೆಯುತ್ತಿದೆ.

ಆರಾಧನಾ ಮಹೋತ್ಸವದ ಕೊನೆಯ ಘಟ್ಟ ತಲುಪಿದ್ದು, ರಾಯರು ವೃಂದಾವನಸ್ಥರಾದ ಮರುದಿನವನ್ನ ಉತ್ತರರಾಧನೆಯಾಗಿ ಆಚರಣೆ ಮಾಡಲಾಗಿತ್ತಿದೆ. ಮಠದ ರಾಜಬೀದಿಯಲ್ಲಿ ಮಹಾರಥೋತ್ಸವ ಜರುಗಲಿದ್ದು, ಅಂತಿಮ ಸಿದ್ದತೆಗಳು ನಡೆದಿವೆ.

ಬಳಿಕ ಉತ್ಸವ ಮೂರ್ತಿ ಪ್ರಹ್ಲಾದ ರಾಜರ ಮೆರವಣಿಗೆ ನಡೆಯುತ್ತದೆ. ಮೆರವಣಿಗೆ ಬಳಿಕ ಮಹಾರಥೋತ್ಸವ ನಡೆಯಲಿದೆ. ರಥಕ್ಕೆ ಹೆಲಿಕಾಪ್ಟರ್ ಮೂಲಕ ಪುಷ್ಟಿವೃಷ್ಠಿ ಮಾಡಲಾಗುತ್ತದೆ.

ಮಂತ್ರಾಲಯದಲ್ಲಿ ರಾಯರ ಉತ್ತರಾರಾಧನೆ ಸಂಭ್ರಮ Read More

ಆ.25ರಂದು‌ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳವರ 109ನೇ ಜಯಂತಿ

ಮೈಸೂರು,ಆ. 22: ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 109ನೇ ಜಯಂತಿ ಮಹೋತ್ಸವವನ್ನು ಆ. 25ರಂದು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಡಾ. ಮಂಜುನಾಥ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು,
ಆ.25 ರ ಬೆಳಿಗ್ಗೆ 10.30ಕ್ಕೆ ನಗರದ ಸುತ್ತೂರು ಮಠದಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜಯಂತಿ ಮಹೋತ್ಸವ ನಡೆಯಲಿದೆ ಎಂದು ಹೇಳಿದರು.

ಈ ಸಮಾರಂಭವು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಆಧ್ಯಾತ್ಮಿಕ ಮತ್ತು ಸಾಮಾಜಿಕ ನೇತಾರ ಮಧುಸೂದನ ಸಾಯಿ ಅವರ ದಿವ್ಯ ಸಮ್ಮುಖದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮವನ್ನು ಗೋವಾದ ರಾಜ್ಯಪಾಲ ಪಿ. ಎಸ್ ಶ್ರೀಧರನ್ ಪಿಳ್ಳೈ ಅವರು ನೆರವೇರಿಸಲಿದ್ದು, ಮೇಘಾಲಯ ರಾಜ್ಯಪಾಲ ಸಿ. ಎಚ್ ವಿಜಯ ಶಂಕರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಅದೇ ದಿನ ಮಧ್ಯಾಹ್ನ 3 ಗಂಟೆ ಗೆ ಜೆಎಸ್ಎಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ 102 ಮಂದಿ ಹಾಗೂ ಸೇವೆಯಿಂದ ಬಿಡುಗಡೆ ಪಡೆದಿರುವ 63 ಮಂದಿಯನ್ನು ಅಭಿನಂದಿಸಲಾಗುವುದು ಎಂದು ಡಾ. ಮಂಜುನಾಥ್ ತಿಳಿಸಿದರು.

ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ಹಾಗೂ ಬಹುಮಾನ ವಿತರಣೆಯನ್ನು ಸಹ ಹಮ್ಮಿಕೊಳ್ಳಲಾಗಿದೆ.

ಜಯಂತಿಯ ಅಂಗವಾಗಿ ಮೈಸೂರಿನ ಮೃಗಾಲಯದ ಪ್ರಾಣಿ ಸಂಕುಲಕ್ಕೆ ಆಹಾರ ವಿತರಣೆ ಮಾಡಲು ಒಂದು ಲಕ್ಷ ರೂಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಜೆಎಸ್ಎಸ್ ಆಸ್ಪತ್ರೆಯ ಮಾಹಿತಿ ಕೇಂದ್ರ ಘಟಕದಲ್ಲಿ ನೇತ್ರ, ರಕ್ತ, ಅಂಗಗಳು ಹಾಗೂ ದೇಹ ದಾನ ಬಗ್ಗೆ ಮಾಹಿತಿ ನೀಡಲು ನೊಂದಣಿ ಮಾಡಿಕೊಳ್ಳಲಾಗುವುದು ಎಂದು ಮಂಜುನಾಥ್ ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಿವಕುಮಾರ ಸ್ವಾಮಿಗಳು, ಮೊರಬದ ಮಲ್ಲಿಕಾರ್ಜುನ ಹಾಗೂ ಸುರೇಶ್ ಅವರುಗಳು ಉಪಸ್ಥಿತರಿದ್ದರು.

ಆ.25ರಂದು‌ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳವರ 109ನೇ ಜಯಂತಿ Read More

ಚಾಮರಾಜನಗರಕ್ಕೆ ಬಂದಾಗೆಲ್ಲಾ ನನ್ನ ಕುರ್ಚಿ ಹೆಚ್ಚು ಗಟ್ಟಿಯಾಗಿದೆ:ಸಿದ್ದು

ಚಾಮರಾಜನಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋಧ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಚೆಲುವ ಚಾಮರಾಜನಗರ ಭರಚುಕ್ಕಿ ಜಲಪಾತೋತ್ಸವ ವನ್ನು ಸಿಎಂ ಸಿದ್ದರಾಮಯ್ಯ‌ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸಿದ್ದು,ಪರಿಸರ ಪ್ರವಾಸೋಧ್ಯಮಕ್ಕೆ ಚಾಮರಾಜನಗರ ಉತ್ತಮ, ಆದರೆ ಆರ್ಥಿಕವಾಗಿ, ಸಾಮಾಜಿಕವಾಗಿ ನಗರ ಬಹಳ ಹಿಂದೆ ಉಳಿದಿದೆ ಎಂದು ಹೇಳಿದರು.

ಚಾಮರಾಜನಗರ ಜಿಲ್ಲೆಗೆ ಕಾಲಿಟ್ಟರೆ ಅಧಿಕಾರ ಹೋಗುತ್ತದೆ ಎಂದು ಬಿಂಬಿಸಿದರು, ಆದರೆ ನಾನು ಮುಖ್ಯಮಂತ್ರಿಯಾಗಿಯೇ ಹತ್ತಕ್ಕೂ ಹೆಚ್ಚು ಬಾರಿ ಜಿಲ್ಲೆಗೆ ಬಂದಿದ್ದೇನೆ, ಇಲ್ಲಿಗೆ ಬಂದಾಗೆಲ್ಲಾ ನನ್ನ ಕುರ್ಚಿ ಹೆಚ್ಚು ಗಟ್ಟಿಯಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

ನೀವು ನನ್ನ ಕುರ್ಚಿ ಅಲುಗಾಡಿಸುತ್ತಲೇ ಇರಿ, ನನ್ನ‌ ಕುರ್ಚಿ ಗಟ್ಟಿ ಆಗುತ್ತಲೇ ಇರುತ್ತೆ ಎಂದು ಬಿಜೆಪಿ-ಜೆಡಿಎಸ್ ನವರಿಗೆ ಸಿದ್ದರಾಮಯ್ಯ ಟಾಂಗ್ ನೀಡಿದರು.

ಯಾರು ಏನೆ ಷಡ್ಯಂತ್ರ ಮಾಡಿದರೂ ನಾನು ಇನ್ನಷ್ಟು ಗಟ್ಟಿಯಾಗಿ ಅಧಿಕಾರದಲ್ಲಿದ್ದು ಬಡವರ, ಶೋಷಿತರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸ್ತಲೇ ಇರುವೆ ಎಂದು ದೃಢವಾಗಿ ಸಿಎಂ ಹೇಳಿದರು.

 

ಚಾಮರಾಜನಗರಕ್ಕೆ ಬಂದಾಗೆಲ್ಲಾ ನನ್ನ ಕುರ್ಚಿ ಹೆಚ್ಚು ಗಟ್ಟಿಯಾಗಿದೆ:ಸಿದ್ದು Read More

82 ನೇ ವಯಸ್ಸಿನಲ್ಲಿ ಇದೆಲ್ಲ ಬೇಕಿತ್ತಾ:ಬಿಎಸ್ ವೈ ವಿರುದ್ಧ ಸಿಎಂ ಗರಂ

ಮೈಸೂರು: ಯಡಿಯೂರಪ್ಪನವರು ಕೋರ್ಟ್ ದಯದಿಂದ ಹೊರಗಡೆ ಇದ್ದಾರೆ,
ಈ ವಯಸ್ಸಿನಲ್ಲಿ ಫೋಕ್ಸೋ ಕೇಸ್ ಹಾಕಿಸಿಕೊಂಡಿದ್ದಾರೆ,82 ನೇ ವಯಸ್ಸಿನಲ್ಲಿ ಇದೆಲ್ಲ ಬೇಕಿತ್ತಾ ಎಂದು ಸಿಎಂ ಸಿದ್ದರಾಮಯ್ಯ‌ ಟಾಂಗ್ ನೀಡಿದರು.

ಮೈಸೂರಿನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,ಪಾದಯಾತ್ರೆ ಮುಗಿಯುವಷ್ಟರಲ್ಲಿ ಸಿಎಂ ರಾಜೀನಾಮೆ ಎಂಬ ಯಡಿಯೂರಪ್ಪ ಹೇಳಿಕೆಗೆ ಗರಂ ಆದರು.

82 ನೇ ವಯಸ್ಸಿನಲ್ಲಿ ಇದೆಲ್ಲ ಬೇಕಿತ್ತಾ,
ಅವರು ರಾಜಕೀಯ ನಿವೃತ್ತಿ ಆಗಬೇಕಿತ್ತು, ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಅವರು ಚೆಕ್ ಮೂಲಕ ಹಣ ಪಡೆದಿದ್ದರು,ಡಿನೋಟಿಫಿಕೇಷನ್ ಮಾಡಿದ್ದರು,ಅವರ ಪ್ರಕರಣವೇ ಬೇರೆ ನನ್ನ ಪ್ರಕರಣವೇ ಬೇರೆ.
ನನ್ನ ಬಗ್ಗೆ ಮಾತನಾಡುವ ನೈತಿಕತೆ ಯಡಿಯೂರಪ್ಪ ಅವರಿಗಿಲ್ಲ ಎಂದು ತಿರುಗೇಟು ನೀಡಿದರು.

ಬಿಜೆಪಿ ಜೆಡಿಎಸ್ ನವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ,ನನ್ನ ಟಾರ್ಗೆಟ್ ಮಾಡಿ ಸರ್ಕಾರ ಅಸ್ಥಿರ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ,ಇವರ ಸುಳ್ಳುಗಳಿಂದ ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಿಲ್ಲ,
ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ‌ ಎಂದು ತಿರುಗೇಟು ನೀಡಿದರು.

82 ನೇ ವಯಸ್ಸಿನಲ್ಲಿ ಇದೆಲ್ಲ ಬೇಕಿತ್ತಾ:ಬಿಎಸ್ ವೈ ವಿರುದ್ಧ ಸಿಎಂ ಗರಂ Read More