ಕದನ ವೀರ ಚಿತ್ರಕ್ಕೆ‌ ಸಿ. ಹೆಚ್ ವಿಜಯಶಂಕರ್, ಯದುವೀರ್ ಶುಭ ಹಾರೈಕೆ

ಮೈಸೂರು, ಆ.23: ಯೋಧರ ತ್ಯಾಗ, ಬಲಿದಾನ, ಶೌರ್ಯದ ಬಗ್ಗೆ ನಿರ್ಮಾಣ ಆಗಿರುವ ಕದನ ವೀರ ಚಲನ ಚಿತ್ರಕ್ಕೆ ರಾಜ್ಯಪಾಲ ಸಿ. ಹೆಚ್ ವಿಜಯಶಂಕರ್ ಮತ್ತು ಸಂಸದ ಯದುವೀರ್ ಶುಭ ಹಾರೈಸಿದರು.

ಭವಿಷ್ಯದ ಸೈನಿಕರಾದ ಸೈನಿಕ ಅಕಾಡೆಮಿ (ರಿ) ಮೈಸೂರು ವತಿಯಿಂದ ಕದನ ವೀರ ಚಲನಚಿತ್ರ ನಿರ್ಮಾಣ ಮಾಡಲಾಗಿದೆ.

ಒಂದು ವರ್ಷಗಳ ಸತತ ಪ್ರಯತ್ನ ಪರಿಶ್ರಮದಿಂದ ಎಸ್‌ ಎ ಎಂ ಸಂಸ್ಥಾಪಕರು ಮತ್ತು ಎಕ್ಸ್ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಶ್ರೀಧರ ಸಿ ಎಂ ಅವರ ಪ್ರೋತ್ಸಾಹದಿಂದ, ಸೈನಿಕರ ಮೇಲೆ ಅಪಾರ ಅಭಿಮಾನ ಇರುವ ಎಸ್‌ ಎ ಎಂ ಅಭ್ಯರ್ಥಿ ಜೀವನ ಚಿಕ್ಕಬಂಡಾರ ಅವರ ನಿರ್ದೇಶನ ಹಾಗೂ ನಿರ್ಮಾಪಕರಾದ ಅನಿತಾ ಶ್ರೀಧರ ಅವರ ಸಹಕಾರದಿಂದ ನನ್ನ ಮಣ್ಣು, ನನ್ನ ಜಲ, ನನ್ನ ಗಾಳಿ, ನನ್ನ ಜನ, ದೇಶ ಎಂಬ ಕಿಚ್ಚು ಯುವಪೀಳಿಗೆಗೆ ತಿಳಿಯಬೇಕೆಂದು ಈ ಚಿತ್ರ ನಿರ್ಮಿಸಲಾಗಿದೆ.

ಪೋಷಕರಿಗೆ ಹೆಚ್ಚಿಸಬೇಕೆಂಬ ಸೈನಿಕರ ತ್ಯಾಗ ಬಲಿದಾನ ಪ್ರತಿಯೊಬ್ಬರೂ ತಿಳಿಯಬೇಕು, ಸೈನಿಕರ ಸಾಹಸ ಸಾಧನೆಯು ಶಾಲೆಯ ಪಠ್ಯ ಪುಸ್ತಕಗಳಲ್ಲಿ ಪ್ರಕಟಿಸಬೇಕು, ತನಗಾಗಿ ಅಲ್ಲ, ತನ್ನವರಿಗಾಗಿ ಸೇವೆ ಮಾಡುತ್ತಿರುವ ಸೈನಿಕನಿಗೆ ಅಪಾರ ಗೌರವ ಸಿಗಬೇಕು, ಸೈನಿಕರಿಗೆ ಉತ್ಸಾಹ ಧೈರ್ಯ ಹೆಚ್ಚಿಸುವ ಕೆಲಸ ನಾವುಗಳು ಮಾಡಬೇಕೆಂಬ ಉದ್ದೇಶದಿಂದ ಈ ಚಲನ ಚಿತ್ರವನ್ನು ಭವಿಷ್ಯದ ಸೈನಿಕರಿಂದಲೇ ನಿರ್ಮಿಸಲಾಗಿದೆ.

ಈ ಕದನ ವೀರ ಚಲನ ಚಿತ್ರಕ್ಕೆ ಮೇಘಾಲಯ ರಾಜ್ಯಪಾಲರಾದ ಸಿ ಹೆಚ್ ವಿಜಯಶಂಕರ್ ಹಾಗೂ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಶುಭ ಹಾರೈಸು ಎಸ್ ಎ ಎಂ ಅಭ್ಯರ್ಥಿಗಳಿಗೂ ಶುಭ ಕೋರಿದರು.

ಸೆಪ್ಟೆಂಬರ್ 1ರಂದು ಭಾನುವಾರ ಕರ್ನಾಟಕ ಕಲಾ ಮಂದಿರ ದಲ್ಲಿ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ 5 ಕದನ ವೀರ‌‌ ಚಲನ ಚಿತ್ರದ ಶೋ ಇಡಲಾಗಿದೆ.

ಈ ಚಲನ ಚಿತ್ರದ ಟ್ರೇಲರ್ ನ್ನೂ YouTube channel Sainik Academy Mysuru ನಲ್ಲಿ ವೀಕ್ಷಿಸಬಹುದು ಎಂದು
ಸೈನಿಕ ಅಕಾಡೆಮಿ ಸಂಸ್ಥಾಪಕರಾದ ಶ್ರೀಧರ್ ಸಿ ಎಂ ತಿಳಿಸಿದ್ದಾರೆ.

ಕದನ ವೀರ ಚಿತ್ರಕ್ಕೆ‌ ಸಿ. ಹೆಚ್ ವಿಜಯಶಂಕರ್, ಯದುವೀರ್ ಶುಭ ಹಾರೈಕೆ Read More

ಕಳರಿ ಪಯಟ್ಟು ವೀರನ ಪಾತ್ರದಲ್ಲಿ ರಿಷಬ್ ಶೆಟ್ಟಿ:ಅಭಿಮಾನಿಗಳು ಖುಷ್

ಬೆಂಗಳೂರು, ಆ‌.22: ಕಾಂತಾರ ಚಾಪ್ಟರ್ 1
ಸಿನಿಮಾದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ ಅವರು ಕಳರಿ ಪಯಟ್ಟು ಮಾಡಿದ್ದು ಅಭಿಮಾನಿಗಳು‌ ಕುಣಿಯುವಂತೆ ಮಾಡಿದೆ.

ಇತ್ತೀಚೆಗೆ ರಿಷಬ್ ಕಳರಿ ಪಯಟ್ಟು ಕಲಿಯುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ಕಾಂತಾರ ಚಾಪ್ಟರ್ 1 ರಲ್ಲಿ
ಕಳರಿ ಪಯಟ್ಟು ‌ವೀರನ ಪಾತ್ರದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿರುವುದು ಇದು ನಿಜ ಎಂಬುದನ್ನು ಸಾಬೀತು ಮಾಡಿದೆ.

ಚಿತ್ರದಲ್ಲಿನ ಕಳರಿ ಪಯಟ್ಟು ವೀರನ ಪಾತ್ರದ ಲುಕ್ ಅನಾವರಣ ಆಗಿದ್ದು,ಈ ಭಂಗಿಯಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.

ಕಾಂತಾರ ಚಾಪ್ಟರ್ 1 ಸಿನಿಮಾವು ಆಗಸ್ಟ್ ಕೊನೆಯ ವಾರದಲ್ಲಿ 4ನೇ ಹಂತದ ಚಿತ್ರೀಕರಣ ನಡೆಯಲಿದೆ.

ಕಾಂತಾರ ಚಾಪ್ಟರ್ 1 ಸಿನಿಮಾ ಕಾಂತಾರದ ಹಿಂದಿನ ಕತೆಯಾಗಿದೆ. ಕದಂಬ ಯುಗದ ಪಂಜುರ್ಲಿ ದೇವತೆಯ ಕಥೆಯನ್ನು ಇದು ಹೊಂದಿದೆ.

ಕಳರಿ ಪಯಟ್ಟು ವೀರನ ಪಾತ್ರದಲ್ಲಿ ರಿಷಬ್ ಶೆಟ್ಟಿ:ಅಭಿಮಾನಿಗಳು ಖುಷ್ Read More

ಯುವ ಡಿವೋರ್ಸ್‌ ಪ್ರಕರಣ ಆ. 23ಕ್ಕೆ ಮುಂದೂಡಿಕೆ

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಯುವ ರಾಜ್‌ಕುಮಾರ್‌ ಸಲ್ಲಿಸಿದ್ದ ವಿಚ್ಚೇದನ ಅರ್ಜಿ ವಿಚಾರಣೆಯನ್ನು ಆಗಸ್ಟ್‌ 23ಕ್ಕೆ ಮುಂದೂಡಲಾಗಿದೆ.

ಗುರುವಾರ 1ನೆ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಕಲ್ಪನಾ ಅವರಿದ್ಧ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು.

ಈ ವೇಳೆ ವಿಚ್ಚೇದನ ಅರ್ಜಿಗೆ ಯುವ ಪತ್ನಿ ಶ್ರೀದೇವಿ ಭೈರಪ್ಪ ಅವರ ಪರ ವಕೀಲರು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.

ಈ ಮನವಿಗೆ ನ್ಯಾಯಾಧೀಶರು, ಇದು ಕೌಟುಂಬಿಕ ಕಲಹವಾಗಿರುವ ಕಾರಣ ಮಿಡಿಯೇಷನ್ ಕೌನ್ಸಿಲಿಂಗ್ ಮುಕ್ತಾಯವಾಗಲಿ. ಮೊದಲು ಕೌನ್ಸಿಲಿಂಗ್‌ ಮುಕ್ತಾಯವಾಗಬೇಕು ಎಂದು ಹೇಳಿದರು.

ಯುವ ಡಿವೋರ್ಸ್‌ ಪ್ರಕರಣ ಆ. 23ಕ್ಕೆ ಮುಂದೂಡಿಕೆ Read More

ಆ. 14ರ ತನಕ ದರ್ಶನ್‌ ಅಂಡ್ ಗ್ಯಾಂಗ್ ಗೆ ಜೈಲೇ ಗತಿ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ  ಆರೋಪಿಗಳಾದ ದರ್ಶನ್ ಮತ್ತು ಗ್ಯಾಂಗ್‌ ನ  ನ್ಯಾಯಾಂಗ ಬಂಧನ ಅವಧಿಯನ್ನು ನ್ಯಾಯಾಲಯ ಆಗಸ್ಟ್‌ 14 ರವರೆಗೆ ವಿಸ್ತರಿಸಿ ಆದೇಶಿಸಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ 24ನೇ ಎಸಿಎಂಎಂ ಕೋರ್ಟ್‌ಗೆ ಪರಪ್ಪನ ಅಗ್ರಹಾರ ಜೈಲಿನಿಂದ 13 ಮಂದಿ ಹಾಗೂ ತುಮಕೂರು ಜೈಲಿನಿಂದ 4 ಆರೋಪಿಗಳನ್ನ ಹಾಜರು ಪಡಿಸಲಾಗಿತ್ತು.

ದರ್ಶನ್, ಪವಿತ್ರಾಗೌಡ, ಪವನ್, ಪ್ರದೂಷ್, ವಿನಯ್, ದೀಪಕ್ ಸೇರಿ 17 ಮಂದಿಯ  ನ್ಯಾಯಾಂಗ ಬಂಧನ ವಿಸ್ತರಣೆ ಮಾಡುವಂತೆ ಎಸ್‌ಐಟಿ ನ್ಯಾಯಾಧೀಶರ ಮುಂದೆ ರಿಮ್ಯಾಂಡ್‌ ಕಾಪಿಯನ್ನು ಸಲ್ಲಿಸಿ ಮನವಿ ಮಾಡಿತ್ತು.

ಆ. 14ರ ತನಕ ದರ್ಶನ್‌ ಅಂಡ್ ಗ್ಯಾಂಗ್ ಗೆ ಜೈಲೇ ಗತಿ Read More