ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯದಲ್ಲಿ ಏರುಪೇರು

: ಸೂಪರ್‌ಸ್ಟಾರ್ ರಜನಿಕಾಂತ್ ಆರೋಗ್ಯದಲ್ಲಿ ಏರುಪೇರಾಗಿದ್ದು ನಿನ್ನೆ ಮಧ್ಯ ರಾತ್ರಿ ದಿಢೀರನೇ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ರಜನಿಕಾಂತ್ ಆರೋಗ್ಯದಲ್ಲಿ ದಿಢೀರನೇ ಏರುಪೇರಾದ ಕಾರಣ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದು,ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ, ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ಅಭಯ ನೀಡಿದ್ದಾರೆ.

ಮಧ್ಯ ರಾತ್ರಿ ರಜನಿಕಾಂತ್‌ಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಅವರನ್ನು ಕೂಡಲೇ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ವೈದ್ಯರು ರಜನಿಕಾಂತ್ ಅವರಿಗೆ ಚಿಕಿತ್ಸೆ ಮಾಡುತ್ತಿದ್ದು, ತೀವ್ರ ನಿಗಾ ವಹಿಸಿದ್ದಾರೆ ಎಂದು ಆಸ್ಪತ್ರೆಯ ನಿರ್ಧೇಶಕ ಡಾ.ಆರ್.ಕೆ.ವೆಂಕಟಸಲಮ್‌ ತಿಳಿಸಿದ್ದರೆ.ರಜಿನಿ ಒಂದೆರಡು ದಿನಗಳಲ್ಲಿ ಮನೆಗೆ ಮರಳಲಿದ್ದಾರೆ ಎಂದೂ ಅಭಯ ನೀಡಿದ್ದಾರೆ.

ಇದೇ ವೇಳೆ ರಜನಿಕಾಂತ್ ಪತ್ನಿ ಲತಾ ಕೂಡ ಇದು ರೆಗ್ಯೂಲರ್ ಚೆಕಪ್ ಅಷ್ಟೇ ಎಂದು ಹೇಳಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯದಲ್ಲಿ ಏರುಪೇರು Read More

ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ.

ಅರ್ಜಿ ವಿಚಾರಣೆಯನ್ನು
ಅಕ್ಟೋಬರ್‌ 4 ಕ್ಕೆ ಮುಂದೂಡಿ ನ್ಯಾಯಾಲಯ ಆದೇಶ ನೀಡಿದೆ.

ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್‌ ಹಾಗೂ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಸೋಮವಾರ 57ನೇ ಸೆಷನ್ ಕೋರ್ಟ್‌ನಲ್ಲಿ ನಡೆಯಿತು.

ಕಳೆದ ಶುಕ್ರವಾರ ಪವಿತ್ರ ಗೌಡ ಪರ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದರು. ಇಂದಿಗೆ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿತ್ತು.

ಈಗ ದರ್ಶನ್‌ ಜಾಮೀನು ಅರ್ಜಿ ವಿಚಾರಣೆಯನ್ನೂ ಮುಂದೂಡಲಾಗಿದ್ದು ದರ್ಶನ್ ಗೆ ಮತ್ತೆ ನಿರಾಸೆಯಾಗಿದೆ.

ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ Read More

ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ಮುಂಬೈ: ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ಪ್ರತಿಷ್ಟಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಅ.08 ರಂದು ನಡೆಯಲಿರುವ 70ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ಈ ಕುರಿತು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಮಿಥುನ್ ಅವರ ಗಮನಾರ್ಹ ಸಿನಿಮೀಯ ಪ್ರಯಾಣವು ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಭಾರತೀಯ ಚಿತ್ರರಂಗಕ್ಕೆ ಅವರ ಅಪ್ರತಿಮ ಕೊಡುಗೆಗಾಗಿ ದಾದಾಸಾಹೇಬ್ ಫಾಲ್ಕೆ ತೀರ್ಪುಗಾರರ ಸಮಿತಿಯು ಆಯ್ಕೆ ಮಾಡಿದೆ. ಅ.8 ರಂದು 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಬರೆದಿದ್ದಾರೆ,

ಜೊತೆಗೆ ಈ ವರ್ಷದ ಆರಂಭದಲ್ಲಿ ಮಿಥುನ್ ಚಕ್ರವರ್ತಿ ಅವರಿಗೆ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣವನ್ನು ಘೋಷಿಸಲಾಗಿತ್ತು.

ಮಿಥುನ್ ಚಕ್ರವರ್ತಿ
ಕಲ್ಕತ್ತಾದಲ್ಲಿ ಜನಿಸಿದ್ದಾರೆ, 1976ರ ಮೃಗಯಾ ಸಿನಿಮಾದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದ ಅತ್ಯುತ್ತಮ ನಟನೆಯಿಂದಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟಿತು. ಬಳಿಕ 1992 ರಲ್ಲಿ ತೆರೆ ಕಂಡ ತಹದರ್ ಕಥಾ ಹಾಗೂ 1998ರಲ್ಲಿ ತೆರೆ ಕಂಡಿದ್ದ ಸ್ವಾಮಿ ವಿವೇಕಾನಂದ ಸಿನಿಮಾದ ಪಾತ್ರಗಳಿಗಾಗಿ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ಇತ್ತೀಚಿಗೆ ತೆರೆ ಕಂಡಿದ್ದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್‌ನಲ್ಲೂ ಅವರು ಇದ್ದರು.

ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ Read More

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

ಬೆಂಗಳೂರು: ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದ್ದು,ಅವರಿಗೆ ಬಳ್ಳಾರಿ ಜೈಲೇ ಗತಿಯಾಗಿದೆ.

ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಬೇಕಿತ್ತು, ಆದರೆ ಯಾವುದೇ ವಾದ ಮಂಡನೆ ಮಾಡದೆ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಲಾಯಿತು.

ದರ್ಶನ್ ಪರ ವಕೀಲರು
ವಾದ ಮಂಡನೆಗೆ ಕಾಲಾವಕಾಶ ಕೇಳಿದ ಕಾರಣ ಪ್ರಕರಣದ ವಿಚಾರಣೆಯನ್ನು ಸೆ. 30ಕ್ಕೆ ಮುಂದೂಡಲಾಗಿದೆ.

ಈ ಹಿಂದೆ, ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ದರ್ಶನ್ ಪರ ವಕೀಲರು, ಎಸ್​ಪಿಪಿ ಪ್ರಸನ್ನ ಕುಮಾರ್ ಅವರು ಆಕ್ಷೇಪಣೆ ಸಲ್ಲಿಸಲು ತಡ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಆದರೆ ಈಗ ಆಕ್ಷೇಪಣೆ ಸಲ್ಲಿಸಿದ ಮೇಲೆ ತಾವೇ ವಿಚಾರಣೆಯನ್ನು ಮುಂದಕ್ಕೆ ಹಾಕಿಸಿಕೊಂಡಿದ್ದಾರೆ.

ಎಸ್​ಪಿಪಿ ಪ್ರಸನ್ನಕುಮಾರ್ ಅವರು ಮಾತನಾಡಿ, ನಾವು ಆಕ್ಷೇಪಣೆ ಸಲ್ಲಿಸಿಲ್ಲವೆಂದು ದರ್ಶನ್ ವಕೀಲರು ತಕರಾರು ತೆಗೆಯುತ್ತಿದ್ದರು, ಈಗ ಆಕ್ಷೇಪಣೆ ಸಲ್ಲಿಸಿದ್ದೇವೆ ವಾದ ಮಂಡನೆಗೆ ಸಿದ್ದ ಇದ್ದೇವೆ ಎಂದು ಹೇಳಿದರು.

ಪ್ರಕರಣ ಸಂಬಂಧ‌ ವಾದ ಮಂಡನೆಗೆ ಖುದ್ದು ಹಿರಿಯ ವಕೀಲ ಸಿ.ವಿ ನಾಗೇಶ್ ಅವರು ಬರಬೇಕಿದೆ ಅವರು ಬಂದಿಲ್ಲ ಹಾಗಾಗಿ ಇನ್ನಷ್ಟು ದಿನದ ಕಾಲಾವಕಾಶ ಕೊಡಬೇಕೆಂದು ಅವರ ಸಹಾಯಕ ವಕೀಲರು ಕೇಳಿದರು.

ಹಾಗಾಗಿ ಸೆ. 30ಕ್ಕೆ ವಿಚಾರಣೆಯನ್ನು ನ್ಯಾಯಾಧೀಶರು ಮುಂದೂಡಿದರು.

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ Read More

ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್ ಜಾನಿ ಮಾಸ್ಟರ್‌ ಅರೆಸ್ಟ್

ಹೈದರಾಬಾದ್: ತೆಲುಗು, ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ಜಾನಿ ಮಾಸ್ಟರ್ ಜಾನಿ ಮಾಸ್ಟರ್‌ನನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸಹ ಕೊರಿಯೋಗ್ರಾಫರ್‌ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮೇಲೆ ಜಾನಿ ಮಾಸ್ಟರ್‌ನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಜಾನಿ ಮಾಸ್ಟರ್ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಅವರ ಜೊತೆ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು ರಾಯದುರ್ಗ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಆತ ತನ್ನ ಮೇಲೆ ಅತ್ಯಾಚಾರ ಎಸಗಿ, ಬೆದರಿಕೆ ಹಾಕಿ ದೈಹಿಕ ಹಲ್ಲೆ ನಡೆಸಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದರು.

ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸಿಕೊಂಡ ಪೊಲೀಸರು ಈಗ ಜಾನಿ ಮಾಸ್ಟರ್‌ ನನ್ನು ಬಂಧಿಸಿದ್ದಾರೆ. ಈಗ ಈ ಪ್ರಕರಣವನ್ನು ನರಸಿಂಗಿ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿದೆ.

ಧಿ ಡ್ಯಾನ್ಸ್‌ ಶೋ ಮೂಲಕ ಪರಿಚಯವಾದ ಜಾನಿ ಮಾಸ್ಟರ್‌ ಈಗ ಟಾಲಿವುಡ್‌ನಲ್ಲಿ ಸ್ಟಾರ್ ಕೊರಿಯೋಗ್ರಾಫರ್ ಆಗಿ ಹೆಸರು ಮಾಡಿದ್ದಾರೆ.

ಟಾಲಿವುಡ್‌ ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ, ಹಿಂದಿ ಸಿನಿಮಾಗಳಿಗೂ ಅವರು ಕೊರಿಯೋಗ್ರಫಿ ಮಾಡಿದ್ದಾರೆ. ಆದರೆ ಅವರ ಮೇಲಿನ ಆರೋಪ,ಬಂಧನ ತೆಲುಗು ಸಿನಿ ರಂಗದಲ್ಲಿ ಸಂಚಲನ ಮೂಡಿಸಿದೆ.

ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್ ಜಾನಿ ಮಾಸ್ಟರ್‌ ಅರೆಸ್ಟ್ Read More

ದಸರಾ ಚಲನಚಿತ್ರೋತ್ಸವ: ಉತ್ತಮ ಕಿರುಚಿತ್ರ ಆಯ್ಕೆಗಾಗಿ ಪರಿಣಿತರ ವೀಕ್ಷಣೆ

ಮೈಸೂರು: 2024ರ ದಸರಾ ಚಲನ ಚಿತ್ರೋತ್ಸವ ಪ್ರಯುಕ್ತ ಆಯೋಜಿಸಿದ್ದ ಕಿರು ಚಿತ್ರಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಿತ್ರಗಳನ್ನು ಪರಿಣಿತರು ವೀಕ್ಷಿಸಿದರು.

ಈ ಬಾರಿಯ ದಸರಾ ಚಲನಚಿತ್ರೋತ್ಸವದಲ್ಲಿ ಕಿರು ಚಿತ್ರ ತಯಾರಿಕೆ ಸ್ಪರ್ಧೆ ಸೇರಿದಂತೆ ಹಲವು ವಿಶೇಷತೆಗಳನ್ನು ನೀಡಲು ಚಲನ ಚಿತ್ರೋತ್ಸವ ಉಪ ಸಮಿತಿ ಸಿದ್ಧತೆ ನಡೆಸಿದೆ.

ತೀರ್ಪುಗಾರರಿಂದ ಆಯ್ಕೆಯಾದ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಅತ್ಯುತ್ತಮ ಕಿರು ಚಿತ್ರಗಳನ್ನು ಐನಾಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲಾಗುವುದು.

ಕಿರುಚಿತ್ರಗಳ ಸ್ಪರ್ಧೆಗೆ 63 ಕನ್ನಡ ಭಾಷೆ, 2 ಮೂಕಿ ಚಿತ್ರ, 1 ಕೊಡವ, 1 ಹಿಂದಿ, 4 ತಮಿಳು ಹಾಗೂ 1 ಲಂಬಾಣಿ ಭಾಷೆಯ ಕಿರುಚಿತ್ರಗಳು ಬಂದಿವೆ.

ಸ್ಪರ್ಧೆಗೆ ಬಂದಂತಹ ಕಿರು ಚಿತ್ರಗಳ ಆಯ್ಕೆ ಸಂಬಂಧ ತೀರ್ಪು ಗಾರರಾಗಿ ರಂಗಭೂಮಿ ಕಲಾವಿದರು ಹಾಗೂ ಚಲನಚಿತ್ರ ನಟರು, ಕಿರುತರೆ ನಟರಾದ ಶಿವಾಜಿ ರಾವ್ ಜಾಧವ್, ಹಿರಿಯ ಚಲನಚಿತ್ರ ಛಾಯಾಗ್ರಾಹಕರು ಹಾಗೂ ನಿರ್ದೇಶಕರಾದ ಜನಾರ್ಧನ್, ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.ಸಪ್ನಾ.ಎಸ್.ಎಂ, ನಟ ಕೆ.ಜೆ.ಪವನ್ ಅವರು ಭಾಗವಹಿಸಿದ್ದರು.

ಈ ವೇಳೆ ‌ದಸರಾ ಚಲನಚಿತ್ರೋತ್ಸವ ಉಪ ವಿಶೇಷಾಧಿಕಾರಿ ಡಾ. ಕೆ.ಎನ್. ಬಸವರಾಜು, ಸಮಿತಿಯ ಕಾರ್ಯಾಧ್ಯಕ್ಷ ರಂಗೇಗೌಡ, ಸಮಿತಿಯ ಕಾರ್ಯದರ್ಶಿ ಹರೀಶ್ ಟಿ.ಕೆ. ಹಾಗೂ ಚಲನ ಚಿತ್ರೋತ್ಸವದ ಸಹ ಸಂಯೋಜಕ ಶ್ರೇಯಸ್ ಮತ್ತಿತರರು ಉಪಸ್ಥಿತರಿದ್ದರು.

ದಸರಾ ಚಲನಚಿತ್ರೋತ್ಸವ: ಉತ್ತಮ ಕಿರುಚಿತ್ರ ಆಯ್ಕೆಗಾಗಿ ಪರಿಣಿತರ ವೀಕ್ಷಣೆ Read More

ಅರ್ಜುನ್ ಅವಧೂತ ರ ಆಶೀರ್ವಾದ ಪಡೆದರ ಅಕ್ಷನ್ ಪ್ರಿನ್ಸ್ ಧ್ರುವ

ಮೈಸೂರು: ನಟ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಮಾರ್ಟಿನ್ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು ಗುರುವಾರ‌ ಧ್ರುವ‌ ಮೈಸೂರಿಗೆ ಆಗಮಿಸಿ ಅವಧೂತರ ಆಶೀರ್ವಾದ ಪಡೆದಿದ್ದಾರೆ.

ಈಗಾಗಲೇ ಚಿತ್ರದ ಮೊದಲ ಟ್ರೈಲರ್ ಬಿಡುಗಡೆಯಾಗಿದ್ದು, ಒಟ್ಟು 13 ಭಾಷೆಗಳಲ್ಲಿ ಚಿತ್ರ ತಯಾರಾಗಿದೆ,ಈ ಮೂಲಕ ಗ್ಲೋಬಲ್ ಬಿಡುಗಡೆಗೆ ಮಾರ್ಟಿನ್ ಸಜ್ಜಾಗಿದೆ.

ಮಾರ್ಟಿನ್ ಚಿತ್ರ ಯಶಸ್ವಿಯಾಗುವಂತೆ ಪ್ರಾರ್ಥಿಸಲು ಅರ್ಜುನ್ ಅವಧೂತ ರ ಆಶೀರ್ವಾದ ಪಡೆದರು ಅಕ್ಷನ್ ಪ್ರಿನ್ಸ್.

ಮೈಸೂರಿನ ಸೋನಾರ್ ಬೀದಿಯಲ್ಲಿರುವ ಅರ್ಜುನ್ ಅವಧೂತರ ನಿವಾಸಕ್ಕೆ ಬೇಟಿ ಧ್ರುವ ಅಶಿರ್ವಾದ ಪಡೆದುಕೊಂಡರು.

ಈ ಸಂದರ್ಭದಲ್ಲಿ ಅರ್ಜುನ್ ಅವಧೂತರು ಧ್ರುವ‌ ಸರ್ಜಾಗೆ ಶಾಲು ಹೊದಿಸಿ ಹಾರ ಹಾಕಿ ಆಶೀರ್ವದಿಸಿ ಶುಭ ಕೋರಿದರು.

ಈ ವೇಳೆ ಧ್ರುವ ಸರ್ಜಾ ಅವರ ಸಹೋದ್ಯೋಗಿಗಳು ಕೂಡ ಆಶಿರ್ವಾದ ಪಡೆದರು.

ಅರ್ಜುನ್ ಅವಧೂತ ರ ಆಶೀರ್ವಾದ ಪಡೆದರ ಅಕ್ಷನ್ ಪ್ರಿನ್ಸ್ ಧ್ರುವ Read More

ದರ್ಶನ್ ಅಂಡ್ ಗ್ಯಾಂಗ್ ಗೆ ಮತ್ತೆ 3 ದಿನ ನ್ಯಾಯಾಂಗ ಬಂಧನ ವಿಸ್ತರಿಸಿದ ಕೋರ್ಟ್

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್‌ ಮತ್ತು ಗ್ಯಾಂಗ್‌ಗೆ ಕೋರ್ಟ್ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದೆ.

ದರ್ಶನ್ ಅಂಡ್ ಗ್ಯಾಂಗ್ ಗೆ ಸೆ.12ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶಿಸಿದೆ. ಮಧ್ಯಾಹ್ನ 1.15ಕ್ಕೆ ವೀಡಿಯೋ ಕಾನ್ಫರೆನ್ಸ್ ಮೂಲಕ 17 ಆರೋಪಿಗಳನ್ನು ವಿಚಾರಣೆಗೆ ಹಾಜರುಪಡಿಸಲಾಯಿತು.

ಬಳ್ಳಾರಿ ಜೈಲಿನಿಂದ ವೀಡಿಯೋ ಕಾನ್ಫರೆನ್ಸ್‌ಗೆ ಆರೋಪಿ ದರ್ಶನ್ ಬಂದಿದ್ದರು.

ಪ್ರಕರಣದ ಹಾರ್ಡ್ ಡಿಸ್ಕ್, ಪೆನ್‌ಡ್ರೈವ್ ಎಲ್ಲವನ್ನೂ ಕೋರ್ಟ್‌ಗೆ ಎಸ್‌ಪಿಪಿ ಪ್ರಸನ್ನಕುಮಾರ್ ಸಲ್ಲಿಕೆ ಮಾಡಿದರು. ಡಿಜಿಟಲ್ ಎವಿಡೆನ್ಸ್ 2 ವಾರದಲ್ಲಿ ಕೊಡುವುದಾಗಿ ತಿಳಿಸಿದರು.

ವಿಚಾರಣೆ ವೇಳೆ, ಜೈಲಿಗೆ ಚಾರ್ಜ್‌ಶೀಟ್‌ ಕಳಿಸುತ್ತೇವೆ ಎಂದು ಎಸ್‌ಪಿಪಿ ಪ್ರಸನ್ನಕುಮಾರ್ ಕೋರ್ಟ್‌ಗೆ ಮನವಿ ಮಾಡಿದರು. ಆದರೆ ಆರೋಪಿಗಳ ಪರ ವಕೀಲರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ನ್ಯಾಯಾಧೀಶರು ಆರೋಪಿಗಳ ಬಳಿಯೇ ವಕೀಲರ ಹೆಸರು ಕೇಳಿದರು. ಸಿ.ವಿ.ನಾಗೇಶ್ ನನ್ನ ಪರ ಹಾಜರಾಗುತ್ತಿದ್ದಾರೆ ಎಂದು ದರ್ಶನ್ ತಿಳಿಸಿದರು.

ಉಳಿದ ಆರೋಪಿಗಳು ತಮ್ಮ ಪರ ವಾದ ಮಂಡಿಸುವ ವಕೀಲರ ಹೆಸರು ಹೇಳಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಮತ್ತೆ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ಹೊರಡಿಸಿತು.

ದರ್ಶನ್ ಅಂಡ್ ಗ್ಯಾಂಗ್ ಗೆ ಮತ್ತೆ 3 ದಿನ ನ್ಯಾಯಾಂಗ ಬಂಧನ ವಿಸ್ತರಿಸಿದ ಕೋರ್ಟ್ Read More

ದರ್ಶನ್ ಗಿಲ್ಲ ಗಣೇಶನ ದರ್ಶನ,ಪೂಜೆ ಭಾಗ್ಯ

ಬಳ್ಳಾರಿ: ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಗಣೇಶ ಚತುರ್ಥಿ ಆಚರಿಸಿದರೂ ಕೂಡಾ ಆರೋಪಿ ದರ್ಶನ್‌ಗೆ ಗಣೇಶನ ದರ್ಶನ ಭಾಗ್ಯ ಸಿಗದಂತಾಗಿದೆ.

ಜೈಲು ಒಳಭಾಗದಲ್ಲಿ ಬಾಳೆ ಕಂಬ, ಬಲೂನ್, ಲೈಟಿಂಗ್, ಹಣ್ಣು, ಚಿತ್ತಾರದ ಹಾಳೆಯ ಅಲಂಕಾರದೊಂದಿಗೆ ಗಣೇಶ ಮೂರ್ತಿ ಪ್ರತಿಷ್ಟಾಪಿಸಲಾಯಿತು.

ಗಣೇಶ ಕೂರಿಸುವುದು ಜೈಲು ಸಿಬ್ಬಂದಿ ಮಾತ್ರ. ಆದರೆ, ಪ್ರತಿ ವರ್ಷ ಎಲ್ಲಾ ಕೈದಿಗಳು ಸೇರಿ ಅದ್ದೂರಿಯಾಗಿ ಅಲಂಕಾರ ಮಾಡಿ ಹಬ್ಬ ಮಾಡುತ್ತಿದ್ದರು.

ಈ ವರ್ಷ ದರ್ಶನ್ ಜೈಲಿನಲ್ಲಿರುವ ಹಿನ್ನೆಲೆ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಗಣೇಶನ ದರ್ಶನ ಮಾಡಿ ಕೈ ಮುಗಿದು ಪ್ರಾರ್ಥನೆ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಜೈಲಿನಲ್ಲಿ ಯಾವುದೇ ಸಾಂಸ್ಕೃತಿಕ ಚಟುವಟಿಕೆಗೆ ಅವಕಾಶ ನೀಡಿಲ್ಲ.

ಜೈಲಿನಲ್ಲಿ 3 ಅಡಿ ಎತ್ತರದ ಇಲಿಯ ಮೇಲೆ ಕುಳಿತಿರುವ ವಿಘ್ನೇಶ್ವರನ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಹೈ ಸೆಕ್ಯುರಿಟಿ ಸೆಲ್‌ನಲ್ಲಿ ಆರೋಪಿ ದರ್ಶನ್ ಸೇರಿದಂತೆ ಇತರೆ ಮೂರು ಕೈದಿಗಳಿದ್ದಾರೆ.ದರ್ಶನ್ ಸೇರಿ ಹೈ ಸೆಕ್ಯೂರಿಟಿ ಸೆಲ್‌ನಲ್ಲಿರುವ ಯಾವೊಬ್ಬ ಕೈದಿಗೂ ಗಣೇಶ ಪೂಜೆಗೆ ಅವಕಾಶ ನೀಡಲಾಗಿಲ್ಲ.

ದರ್ಶನ್ ಗಿಲ್ಲ ಗಣೇಶನ ದರ್ಶನ,ಪೂಜೆ ಭಾಗ್ಯ Read More

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ದುನಿಯಾ ವಿಜಯ್‌ ಎರಡನೇ ಪುತ್ರಿ ಮೋನೀಷಾ

ಬೆಂಗಳೂರು: ನಟ ದುನಿಯಾ ವಿಜಯ್‌ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾಗೆ ವಿಜಯ್ ಅವರ ಎರಡನೇ ಮಗಳು ಮೋನಿಷಾ ನಾಯಕಿಯಾಗುವ ಮೂಲಕ
ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ತಂದೆಯ ಸಿನಿಮಾ ಮೂಲಕವೇ ಮೋನಿಷಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವುದು ವಿಶೇಷ, ವಿಜಯ್ ಅವರ ಮೊದಲ ಪುತ್ರಿ ರಿತನ್ಯಾ ಈಗಾಗಲೇ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದು,ಈಗ ಎರಡನೇ ಮಗಳು ಮೋನಿಷಾ ಕೂಡ ಬೆಳ್ಳಿತೆರೆಗೆ ಪ್ರವೇಶಿಸಿದ್ದಾರೆ.

ಮೋನಿಷಾ ನಟನೆಯ ಮೊದಲ ಸಿನಿಮಾ ಹಾಗೂ ದುನಿಯಾ ವಿಜಯ್‌ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾದ ಹೆಸರನ್ನು ಗೌರಿ-ಗಣೇಶ ಹಬ್ಬದ ಪ್ರಯುಕ್ತ ಬಹಿರಂಗ ಪಡಿಸಲಾಗಿದೆ.

ಮೋನಿಷಾ ಅವರ ಮೊದಲ ಚಿತ್ರಕ್ಕೆ ‘ಸಿಟಿ ಲೈಟ್ಸ್’ ಎಂದು ಹೆಸರಿಡಲಾಗಿದ್ದು, ಜವಾಬ್ದಾರಿ ದೀಪಗಳು ಎಂಬ ಟ್ಯಾಗ್‌ ಲೈನ್‌ ನೀಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೊದಲ ಸಿನಿಮಾದ ಸಂತಸವನ್ನು ಹಂಚಿಕೊಂಡಿರುವ ಮೋನಿಷಾ, ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ಶುಭದಿನದಂದು ನಿಮ್ಮೊಂದಿಗೆ ನನ್ನ ಮೊದಲನೆಯ ಚಿತ್ರ ‘ಸಿಟಿ ಲೈಟ್ಸ್’ ನ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಳ್ಳುತ್ತಿದ್ದೇನೆ. ಇಂತಹ ಅದ್ಭುತ ತಂಡದೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಮತ್ತು ಪ್ರೋತ್ಸಾಹ ಸದಾ ನಮ್ಮ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ದುನಿಯಾ ವಿಜಯ್‌ ಎರಡನೇ ಪುತ್ರಿ ಮೋನೀಷಾ Read More