ದರ್ಶನ್-ಸುಮಲತಾ ನಡುವೆ ಬುರುಕು?

ಬೆಂಗಳೂರು: ನಟ ದರ್ಶನ್ ಮತ್ತು ಸುಮಲತಾ ನಡುವೆ ಬಿರುಕು ಮೂಡಿರಬಹುದೆ ಎಂಬ ಅನುಮಾನ ಡಿ ಬಾಸ್ ಅಭಿಮಾನಿಗಳನ್ನು ಕಾಡುತ್ತಿದೆ.

ಸುಮಲತಾ ಸೇರಿದಂತೆ ದರ್ಶನ್ ಎಲ್ಲರನ್ನೂ ಇನ್ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಹಂಚಿಕೊಂಡಿರುವ ಮತ್ತೊಂದು ಪೋಸ್ಟ್ ಈಗ ಇಬ್ಬರ ನಡುವಿನ ಬಿರುಕಿನ ಬಗ್ಗೆ ಚರ್ಚೆ ಹುಟ್ಟುಹಾಕುವಂತೆ ಮಾಡಿದೆ.

ಮತ್ತೊಂದು ಮಾರ್ಮಿಕ ಸಂದೇಶವೊಂದನ್ನು ನಟಿ ಹಂಚಿಕೊಂಡಿದ್ದಾರೆ. ನೋವಿಲ್ಲದಂತೆ ಎದ್ದು ಬರುವುದು, ಚಿಂತೆ ಇಲ್ಲದಂತೆ ಇರೋದು. ನಿಮ್ಮನ್ನು ಯಾರು ಅರ್ಥ ಮಾಡಿಕೊಳ್ತಾರೋ ಅಂಥವರ ಜೊತೆಗೆ ಇರೋದು. ಇವೆಲ್ಲಾ ಸಾಮಾಜಿಕ ಮಾಧ್ಯಮದಲ್ಲಿ ತೋರಿಸಲಾಗದ ಖಜಾನೆ ಎಂದು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.

ಜೈಲಿನಲ್ಲಿದ್ದಾಗ ತನ್ನ ಬೆನ್ನಿಗೆ ಸುಮಲತಾ ನಿಲ್ಲಲಿಲ್ಲ ಅಂತ ದರ್ಶನ್ ಗೆ ಕೋಪವಿದೆಯೆ ಎಂದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಾ ಇದೆ.

ಹಿಂದಿನ ಪೋಸ್ಟ್‌ನಲ್ಲಿ, ಬೆಸ್ಟ್ ಆಕ್ಟಿಂಗ್ ಆಸ್ಕರ್ ಅವಾರ್ಡ್ ಯಾರಿಗೆ ಹೋಗುತ್ತೆ ಅಂದ್ರೆ.. ಯಾರು ಸತ್ಯವನ್ನ ತಿರುಚುತ್ತಾರೋ, ತಮ್ಮದೇ ತಪ್ಪು ಇಟ್ಕೊಂಡು ಬೇರೆಯವರ ಮೇಲೆ ಹಾಕಿ ನೋವು ಮಾಡೋದು, ತಮ್ಮ ಮೇಲಿನ ನಿಂದನೆಯನ್ನ ಬೇರೆಯವರ ಮೇಲೆ ಹಾಕೋದು, ಗೂಬೆ ಕೂರಿಸೋದು ಮಾಡಿ ತಮ್ಮನ್ನ ತಾವು ಹೀರೋ ಎಂಬಂತೆ ಬಿಂಬಿಸಿಕೊಳ್ಳೋದು ಎಂದು ಸುಮಲತಾ ಅವರು ಪೋಸ್ಟ್ ಮಾಡಿದ್ದರು.

ತಾಯಿ ಸಮಾನರಾದ ಸುಮಲತಾ, ತಮ್ಮನ ಸಮಾನರಾದ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರು ಸೇರಿದಂತೆ ಆರು ಮಂದಿ ಆಪ್ತರನ್ನು ನಟ ದರ್ಶನ್ ಇನ್ಸ್ಟಾದಲ್ಲಿ ಅನ್‌ಫಾಲೋ ಮಾಡಿದ್ದಾರೆ.

ದರ್ಶನ್ ಈ ನಡೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಆರು ಮಂದಿಯನ್ನು ದರ್ಶನ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಫಾಲೋ ಮಾಡುತ್ತಿದ್ದರು. ಆದರೆ, ಈಗ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ 0 ಫಾಲೋ ಇದೆ. ಈ ಬೆಳವಣಿಗೆ ಫ್ಯಾನ್ಸ್ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ದರ್ಶನ್-ಸುಮಲತಾ ನಡುವೆ ಬುರುಕು? Read More

ರಾಜ್ಯಾದ್ಯಂತ ನಾಳೆ ಇಂಟರ್‌ ವಲ್ ತೆರೆಗೆ

ಮೈಸೂರು,ಮಾ.6: ಮೂವರು ತುಂಟಾಟದ ಹುಡುಗರು ಹಾಗೂ ಯುವತಿಯರಿಬ್ಬರ ಸುತ್ತ ನಡೆಯುವ ಒಂದಷ್ಟು ಘಟನೆಗಳನ್ನು ಹಾಸ್ಯದ ಹಿನ್ನೆಲೆಯಲ್ಲಿ ನಿರೂಪಿಸಿರುವ ಚಿತ್ರ ” ಇಂಟರ್ ವಲ್ ” ನಾಳೆ ರಾಜ್ಯಾದ್ಯಂತ ತೆರೆಕಾಣಲಿದೆ

ಶುಕ್ರವಾರ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಗೆ ಬರಲಿದೆ.

ಭರತವರ್ಷ್ ಪಿಚ್ಚರ್ಸ್ ಅಡಿಯಲ್ಲಿ ಸುಖೇಶ್ ಹಾಗೂ ಭರತ್ ವರ್ಷ ಸೇರಿ ನಿರ್ಮಿಸಿರುವ ಹಾಗೂ ಭರತ್ ವರ್ಷ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಯೂಥ್ ಫುಲ್ ಎಂಟರ್ ಟೈನರ್ ಚಿತ್ರ ಇದು.

ಮೈಸೂರು ಪತ್ರಕರ್ತರ ಭವನದಲ್ಲಿ ಚಿತ್ರತಂಡದವರು ಇಂಟರ್ ವಲ್ ಚಿತ್ರದ ಕುರಿತು ಮನಬಿಚ್ಚಿ ಮಾತನಾಡಿದರು.

ಈಗಿನ ಕಾಲದ ಯುವಕರ ಮನಸ್ಥಿತಿ ಹಾಗೂ ವಿದ್ಯಾರ್ಥಿ ಜೀವನದಲ್ಲಿ ನಡೆಸುವ ಆಟ, ತುಂಟಾಟದ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಹೆಣೆದ ಮನರಂಜನಾತ್ಮಕ ಕಥೆ ಈ ಚಿತ್ರದ ಹೈಲೈಟ್.

ಪ್ರತಿಯೊಬ್ಬರ ಜೀವನದಲ್ಲೂ ಒಂದು ಇಂಟರ್‌ವಲ್ ಅನ್ನೋದು ಬಂದೇ ಬರುತ್ತದೆ. ಅದೇ ರೀತಿ ನಾಯಕನ ಜೀವನದಲ್ಲಿ ಆದ ಇಂಟರ್‌ವಲ್ ಆತನ ಲೈಫಲ್ಲಿ ಏನೇನೆಲ್ಲ ತಿರುವುಗಳಿಗೆ ಕಾರಣವಾಯಿತು ಅನ್ನೋದನ್ನು ಕುತೂಹಲಕರ ಕಥಾನಕದೊಂದಿಗೆ ನಿರ್ದೇಶಕ ಸುಖೀ ಅವರು ಹೇಳಹೊರಟಿದ್ದಾರೆ.

ಕಥೆ, ಚಿತ್ರಕಥೆಯನ್ನು ಸುಖೀ ಅವರೇ ಹೆಣೆದಿದ್ದಾರೆ.
ಬೆಂಗಳೂರು, ಶಿವಮೊಗ್ಗ, ತೀರ್ಥಹಳ್ಳಿಯ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ಮೂವರು ಹಳ್ಳಿ ಹುಡುಗರ ತುಂಟತನ ಹಾಗೂ ಪ್ರೇಮಕಥೆಯನ್ನು ಈ ಚಿತ್ರದಲ್ಲಿ ಹಾಸ್ಯಮಯವಾಗಿ ಕಟ್ಟಿಕೊಡಲಾಗಿದೆ.

ಈ ಚಿತ್ರದ ಕೊನೇ ಹತ್ತು ನಿಮಿಷಗಳ ಕ್ಲೈಮ್ಯಾಕ್ಸ್ ದೃಶ್ಯ ವಿಶೇಷವಾಗಿ ಮೂಡಿಬಂದಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತದೆ.

ಈ ಚಿತ್ರದಲ್ಲಿ ಯುವನಟ ಶಶಿರಾಜ್ ಅವರು ಪ್ರಥಮಬಾರಿಗೆ ನಾಯಕನಾಗಿ ತೆರೆಯಮೇಲೆ ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್‌ ಕುಮಾರ್ ಗೌಡ, ಸುಖಿ, ಚರಿತ್ರರಾವ್, ಸಹನ ಆರಾಧ್ಯ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ವಿಕಾಸ್ ವಸಿಷ್ಠ ಅವರ ಸಂಗೀತ ಸಂಯೋಜನೆಯ ಹಾಡುಗಳಿಗೆ ವಿಜಯ್ ಪ್ರಕಾಶ್, ಚಂದನ್ ಶಟ್ಟಿ, ಆಲ್ ಓಕೆ ಅಲೋಕ್, ಸುನಿಧಿ ಗಣೇಶ್, ವಾಣಿ ಹರಿಕೃಷ್ಣ ದನಿಯಾಗಿದ್ದಾರೆ.

ಇಂಟರ್‌ವಲ್ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಸುಕೇಶ್ ರಚಿಸಿದ್ದಾರೆ. ರಾಜ್‌ಕಾಂತ್ ಅವರ ಛಾಯಾಗ್ರಹಣ, ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ, ಶಶಿಧರ್ ಅವರ ಸಂಕಲನ ಈ ಚಿತ್ರಕ್ಕಿದೆ.

ರಾಜ್ಯಾದ್ಯಂತ ನಾಳೆ ಇಂಟರ್‌ ವಲ್ ತೆರೆಗೆ Read More

ದೊಡ್ಮನೆ ಸೊಸೆ ಚಿತ್ರದ ಮುಹೂರ್ತ:ಧನ್ಯವಾದ ಸಲ್ಲಿಸಿದ ನಟ ಆಸ್ಕರ್ ಕೃಷ್ಣ

ಬೆಂಗಳೂರು: ದೊಡ್ಮನೆ ಸೊಸೆ ಚಿತ್ರದ ಮುಹೂರ್ತದ ಕ್ಷಣಗಳಿಗೆ ಕಾರಣಕರ್ತರಾದ ಹಾಗೂ ಸಾಕ್ಷಿಗಳಾದ ಎಲ್ಲಾ ಸುಂದರ ಮನಸುಗಳಿಗೆ ತುಂಬು ಹೃದಯದ ಧನ್ಯವಾದಗಳು ಎಂದು ನಟ, ನಿರ್ದೇಶಕ, ನಿರ್ಮಾಪಕ ಆಸ್ಕರ್ ಕೃಷ್ಣ ಹೃದಯ ತುಂಬಿ ನುಡಿದಿದ್ದಾರೆ.

ನೂರಾರು ಜನ ಸೇರಿದ್ದ ಈ ಸಮಾರಂಭಕ್ಕೆ ಆಗಮಿಸಿ ಚಿತ್ರದ ಮೊದಲ ಚಿತ್ರಿಕೆಗೆ ಕ್ಲಾಪ್ ನೀಡಿದ ರಾಷ್ಟ್ರಪ್ರಶಸ್ತಿ ವಿಜೇತ ಹಿರಿಯ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರಿಗೆ ಹಾಗೂ ಮೊದಲ‌ ಚಿತ್ರಿಕೆಗೆ ಕ್ಯಾಮೆರಾ ಸ್ವಿಚ್ ಆನ್ ಮಾಡಿದ ನಿರ್ಮಾಪಕರ‌ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಹಾಗೂ ಚಿತ್ರದಲ್ಲಿ ದೊಡ್ಮನೆಯ ಯಜಮಾನನ ಪಾತ್ರಧಾರಿಯಾಗಿ ನೇತೃತ್ವವಹಿಸಿರುವ ಹಿರಿಯ ನಟರಾದ ಸುಂದರ್ ರಾಜ್ ಅವರಿಗೆ ವಂದನೆ ಸಲ್ಲಿಸಿದರು.

ನಿರ್ಮಾಪಕರಾದ ಡಾ.ಸುನಿಲ್ ಕುಮಾರ್, ಮುಹೂರ್ತದ ಕೆಲಸಗಳಿಗಾಗಿ ಅಹೋರಾತ್ರಿ ಕೆಲಸ ಮಾಡಿ ಸುಂದರ ಸಮಾರಂಭವನ್ನು ಸೃಷ್ಟಿ ಮಾಡಿಕೊಟ್ಟ ಗೆಳೆಯ ಪ್ರಶಾಂತ್ ಅಂಕಪುರ‌, ಚಿತ್ರದ ಕಲಾವಿದರಿಗೆ, ತಂತ್ರಜ್ಞರಿಗೆ ಮತ್ತು ದೂರದೂರುಗಳಿಂದ ಆಗಮಿಸಿ ಸಮಾರಂಭದ ಸೌಂದರ್ಯವನ್ನು ಹೆಚ್ಚಿಸಿದ ಸ್ನೇಹಿತರಿಗೆ, ಬಂಧುಗಳಿಗೆ, ನನ್ನ ಒಳಿತಿಗಾಗಿ ಪ್ರಾಮಾಣಿಕವಾಗಿ ಹಾರೈಸಿದ ಎಲ್ಲಾ ಗೆಳೆಯ, ಗೆಳತಿಯರಿಗೆ, ಹಿರಿಯರಿಗೆ ಸಾವಿರ ವಂದನೆಗಳು ಎಂದು ಆಸ್ಕರ್ ಕೃಷ್ಣ ತಿಳಿಸಿದರು.

ದೊಡ್ಮನೆ ಸೊಸೆ ಚಿತ್ರದ
ಚಿತ್ರೀಕರಣ ಫೆಬ್ರವರಿ 18ರಿಂದ ಪ್ರಾರಂಭವಾಗಲಿದೆ
ನಿಮ್ಮೆಲ್ಲರ ಹಾರೈಕೆ ಮತ್ತು ಸಹಕಾರ ನಿರಂತರವಾಗಿರಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

ದೊಡ್ಮನೆ ಸೊಸೆ ಚಿತ್ರದ ಮುಹೂರ್ತ:ಧನ್ಯವಾದ ಸಲ್ಲಿಸಿದ ನಟ ಆಸ್ಕರ್ ಕೃಷ್ಣ Read More

ಭಗೀರಥ ಚಲನಚಿತ್ರದ ಪ್ರಚಾರಕ್ಕೆ ಚಾಲನೆ

ಮೈಸೂರು: ಡೇರಿಂಗ್ ಸ್ಟಾರ್ ಎಸ್ ಜಯಪ್ರಕಾಶ್ ( ಜೆ ಪಿ ) ನಟಿಸಿರುವ ಭಗೀರಥ ಚಲನಚಿತ್ರ ರಾಜ್ಯಾದ್ಯಂತ ಇದೇ ಶುಕ್ರವಾರ ಬಿಡುಗಡೆ ಆಗುತ್ತಿದ್ದು,ಇಂದು
ಪ್ರಚಾರಕ್ಕೆ ಚಾಲನೆ ನೀಡಲಾಯಿತು.

ಮೈಸೂರು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಸಿನಿಮಾದ ಪ್ರಚಾರಕ್ಕೆ ಚಾಲನೆ ನೀಡಲಾಯಿತು.ಅಶ್ವದ‌ ಮೇಲೆ‌ ಭಗೀರಥ ಪೋಸ್ಟರ್ ಇಟ್ಟು ಚಾಲನೆ ನೀಡುತ್ತಿರುವುದು ವಿಶೇಷ.

ಭಗೀರಥದಲ್ಲಿ‌ ಅಸಾಧ್ಯವಾದದನ್ನು ಸಾಧ್ಯವಾಗಿಸುವ ಕಥೆ ಇದೆ, ಈ ಸಿನಿಮಾದಲ್ಲಿ ಒಂದು ಸಾಮಾಜಿಕ ಸಂದೇಶವಿದೆ, ಯುವಕರಿಗೆ ಜೀವನದಲ್ಲಿ ಸಾಧಿಸಬೇಕಾದನ್ನು ಗುರಿಯಾಗಿಟ್ಟುಕೊಂಡು ಸಾಧಿಸಬೇಕೆಂಬ ಸಂದೇಶವಿದೆ. ಆದುದರಿಂದ ಪ್ರತಿಯೊಬ್ಬ ಕನ್ನಡಿಗರು, ವಿಧ್ಯಾರ್ಥಿ ದೆಸೆಯಿಂದ ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಹಿರಿಯ ಹೋರಾಟಗಾರರಾದ ಹಾಗೂ ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಎಸ್ ಜಯ ಪ್ರಕಾಶ್ ರವರ ಈ ಚಿತ್ರವನ್ನು ನೋಡಲೇಬೇಕು, ಕನ್ನಡ ಸಿನಿಮಾಗಳನ್ನು ನೋಡಿ ಕನ್ನಡ ಕಲಾವಿದರುಗಳನ್ನು ಬೆಳೆಸಬೇಕು ಎಂದು ಅಭಿಮಾನಿಗಳು ಈ ವೇಳೆ ಮನವಿ ಮಾಡಿದರು.

ಪ್ರಚಾರ ಕಾರ್ಯದಲ್ಲಿ ತೇಜೇಶ್ ಲೋಕೇಶ್ ಗೌಡ,ಸಿಂದುವಳ್ಳೀ ಶಿವಕುಮಾರ್, ವರಕೂಡು ಕೃಷ್ಣೇಗೌಡ, ನೇಹಾ, ಪ್ರಭುಶಂಕರ, ನಾಗರಾಜ್, ಪ್ರದೀಪ್ , ಮಂಜುಳಾ , ಶಿವಣ್ಣ , ರಘು ಅರಸ್, ಪುಷ್ಪಾವತಿ, ಹನುಮಂತೇಗೌಡ, ಪ್ರಭಾಕರ್, ಕೃಷ್ಣಪ್ಪ , ರವೀಶ್, ಮಹೇಶ್ ಒಂಟಿಕೊಪಲು, ಅಕ್ಬರ್ , ಅಶೋಕ್ ಹನುಮಂತಯ್ಯ ಮತ್ತಿತರರು ಪಾಲ್ಗೊಂಡಿದ್ದರು.

ಭಗೀರಥ ಚಲನಚಿತ್ರದ ಪ್ರಚಾರಕ್ಕೆ ಚಾಲನೆ Read More

ಫೆ.7ರಂದು ಭಗೀರಥ ಚಿತ್ರದ ಸ್ಟಾರ್ ಮೆರವಣಿಗೆ

ಮೈಸೂರು: ಡೇರಿಂಗ್ ಸ್ಟಾರ್ ಎಸ್ ಜಯಪ್ರಕಾಶ್ ( ಜೆ ಪಿ ) ನಟಿಸಿರುವ ಭಗೀರಥ ಚಲನಚಿತ್ರವು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿರುವ ಪ್ರಯುಕ್ತ ಫೆ.7 ಶುಕ್ರವಾರ ಸ್ಟಾರ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 10 ಗಂಟೆಗೆ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ, ಪ್ರಭಾ ಚಿತ್ರಮಂದಿರದ ವರೆಗೆ ಸ್ಟಾರ್ ಮೆರವಣಿಗೆಯನ್ನು ಏರ್ಪಡಿಸಿದ್ದೇವೆ,ಈ ಮೆರವಣಿಗೆಯಲ್ಲಿ ಜೆಪಿ ಅವರ ಅಭಿಮಾನಿಗಳು, ಸ್ನೇಹಿತರು ಬಂಧು ಮಿತ್ರರು ಪಾಲ್ಗೊಳ್ಳಬೇಕೆಂದು ಸುದ್ದಿಗೋಷ್ಠಿಯಲ್ಲಿ
ಕಾವೇರಿ ಕ್ರಿಯಾ ಸಮಿತಿಯ ತೇಜೇಶ್ ಲೋಕೇಶ್ ಗೌಡ ಮನವಿ ಮಾಡಿದರು.

ಈ ಭಗೀರಥ ಚಿತ್ರ ಪ್ರತಿಯೊಬ್ಬ ಮನುಷ್ಯನಲ್ಲಿ ಇರುವಂತಹ ಸಾಹಸಕತೆ, ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಚಿತ್ರದ ಕಥೆ ಇದೆ ಎಂದು ಹೇಳಿದರು.

ಯುವಕರಿಗೆ ಕನ್ನಡದ ಕಣ್ಮಣಿ, ಕನ್ನಡಿಗರ ಆರಾಧ್ಯ ದೈವ ಡಾ. ರಾಜಕುಮಾರ್ ಅವರ ಸಿನಿಮಾಗಳಲ್ಲಿ ಹೇಗೆ ಸಾಮಾಜಿಕ ಸಂದೇಶಗಳು ಇರುತ್ತಿದ್ದವೋ, ಅದೇ ಮಾದರಿಯಲ್ಲಿ ಈ ಸಿನಿಮಾದಲ್ಲಿಯೂ ಜೀವನದಲ್ಲಿ ಸಾಧಿಸಬೇಕಾದನ್ನು ಗುರಿಯಾಗಿಟ್ಟುಕೊಂಡು ಸಾಧಿಸಬೇಕು ಎಂಬ ಸಂದೇಶವಿದೆ. ಆದುದರಿಂದ ಪ್ರತಿಯೊಬ್ಬ ಕನ್ನಡಿಗರು, ವಿಧ್ಯಾರ್ಥಿ ದೆಸೆಯಿಂದ ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಹಿರಿಯ ಹೋರಾಟಗಾರರಾದ ಹಾಗೂ ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಎಸ್ ಜಯ ಪ್ರಕಾಶ್ ಅವರ ಈ ಭಗೀರಥ ಚಿತ್ರವನ್ನು ನೋಡಬೇಕು, ಕನ್ನಡ ಸಿನಿಮಾಗಳನ್ನು ನೋಡಿ ಕನ್ನಡ ಕಲಾವಿದರುಗಳನ್ನು ಬೆಳೆಸಬೇಕು ಎಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಸಿಂದುವಳ್ಳಿ ಶಿವಕುಮಾರ್, ಭಾಗ್ಯಮ್ಮ , ನಾಗರಾಜ್, ಬೋಗಾದಿ ಸಿದ್ದೇಗೌಡ ,ಲತಾ ಶಂಕರಿ, ಸುಧಾಮಣಿ, ಪುಷ್ಪಾವತಿ, ವಿನೋದ್ ಕುಮಾರ್, ಮಂಜುಳಾ , ಕೃಷ್ಣಪ್ಪ , ರವೀಶ್, ಮಹೇಶ್ ಒಂಟಿಕೊಪಲು, ಅಶೋಕ್ ಹನುಮಂತಯ್ಯ , ಪೈ ನಾಗರಾಜು, ಆಟೋ ಶಿವು ಭಗೀರಥ, ವಿಷ್ಣು ಮತ್ತಿತರರು ಉಪಸ್ಥಿತರಿದ್ದರು. ‌

ಫೆ.7ರಂದು ಭಗೀರಥ ಚಿತ್ರದ ಸ್ಟಾರ್ ಮೆರವಣಿಗೆ Read More

ಯುವ ನಾಯಕ ರವಿ ಗೌಡ ಹೊಸ ಸಿನಿಮಾಗೆ ಸಿಎಂ ಸಾಥ್

ಮೈಸೂರು: ರಾಜಕೀಯ ಜಂಜಾಟಗಳ ಮಧ್ಯೆಯೂ ಸಿಎಂ ಸಿದ್ದರಾಮಯ್ಯ ಬಿಡುವು ಮಾಡಿಕೊಂಡು ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

ಸಿದ್ದರಾಮಯ್ಯ ಅವರು ತಮ್ಮ ಆತ್ಮೀಯ ಗೆಳೆಯ ಮುಡಾ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ಅವರ ಮಗನ ಹೊಸ ಪಯಣಕ್ಕೆ ಶುಭ ಹಾರೈಸಿದರು.

ಧ್ವಜ ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದ ರವಿ ಗೌಡ ಅಯಾಮ್ ಗಾಡ್ ಸಿನಿಮಾ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ.

ಈ ಚಿತ್ರದಲ್ಲಿ ನಾಯಕನಾಗಿ,ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿ ಅವರು ಜವಾಬ್ದಾರಿ ನಿಭಾಯಿಸಲಿದ್ದಾರೆ.

ರವಿ ಗೌಡ ನಟಿಸಿ, ನಿರ್ದೇಶಿಸಿ ಹಾಗೂ ನಿರ್ಮಿಸಿರುವ I’m god ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಅನಾವರಣ ಗೊಳಿಸಿದರು.

ಈ‌ ವೇಳೆ ಮಾತನಾಡಿದ ಅವರು, ರವಿ ಗೌಡ ಹುಟ್ಟುವ ಮುಂಚೆಯೇ ಬಸವೇಗೌಡ ನನಗೆ ಪರಿಚಯ. ನಾನು ಬಸವೇಗೌಡರ ಮಗ ರವಿ ಸಿನಿಮಾದಲ್ಲಿ ನಟಿಸುತ್ತಾನೆ,ನಿರ್ಮಾಪಕ ನಾಗುತ್ತಾನೆ,ನಿರ್ದೇಶಕನಾಗುತ್ತಾನೆ ಅಂದು ಕೊಂಡಿರಲಿಲ್ಲ. ಸಿನಿಮಾ ಕ್ಷೇತ್ರಗಳಲ್ಲಿ ಒಳ್ಳೆ ನಟನಾಗಿ, ನಿರ್ದೇಶಕನಾಗಿ ಮೂಡಿ ಬರಲಿ ಹಾರೈಸಿದರು.

ದುಡ್ಡಿದ್ರೆ ಯಾರು ಬೇಕಾದರೂ ನಿರ್ಮಾಪಕರು ಆಗಬಹುದು. ಆದರೆ ನಟನೆ, ನಿರ್ದೇಶಕರಾಗುವುದು ರಕ್ತದಲ್ಲಿ ಬಂದಾಗ ಮಾತ್ರ ಸಾಧ್ಯ. ಬಸವೇಗೌಡರ ಮಗ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿರುವುದು ಸಂತಸ‌. ಈ ಕ್ಷೇತ್ರದಲ್ಲಿ ಪ್ರಬುದ್ಧವಾಗಿ ಬೆಳೆಯಲಿ ಎಂದು ಆಶಿಸುತ್ತೇನೆ, ಸಿನಿಮಾ ಕ್ಷೇತ್ರದಲ್ಲಿ ದೊಡ್ಡದಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

I’m god ರೋಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಈಗಾಗಲೇ ಚಿತ್ರೀಕರಣ ಮುಕ್ತಾಯಗೊಂಡಿದೆ. ಬೆಂಗಳೂರು ಹಾಗೂ ಕೇರಳದಲ್ಲಿ ಶೂಟಿಂಗ್ ನಡೆಸಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ.

ಸಿಬಿಜಿ ಪ್ರೊಡಕ್ಷನ್ಸ್ ನಡಿ ಮೂಡಿ ಬರುತ್ತಿರುವ I’m god ಚಿತ್ರಕ್ಕೆ ಕಾಂತಾರ ಮ್ಯೂಸಿಕ್ ಮಾಂತ್ರಿಕ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ರವಿ ವರ್ಮಾ ಸಾಹಸ ನಿರ್ದೇಶನ ಹಾಗೂ ಜಿತಿನ್ ದಾಸ್ ಕ್ಯಾಮೆರಾ ಕೆಲಸ , ಸುರೇಶ್ ಅರುಮುಗಂ ಸಂಕಲನ ಮಾಡಿದ್ದಾರೆ.

ಯುವ ನಾಯಕ ರವಿ ಗೌಡ ಹೊಸ ಸಿನಿಮಾಗೆ ಸಿಎಂ ಸಾಥ್ Read More

ಜ.31ಕ್ಕೆ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆನೋಡಿದವರು ಏನಂತಾರೆ ಚಲನಚಿತ್ರ

ಮೈಸೂರು: ಇದೇ ಜ. 31ಕ್ಕೆ ನೋಡಿದವರು ಏನಂತಾರೆ ಸಿನಿಮಾ ರಿಲೀಸ್ ಆಗಲಿದ್ದು,
ಟ್ರೇಲರ್ ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕುಲದೀಪ್ ಕಾರಿಯಪ್ಪ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಈ ಚಿತ್ರದ‌ ಬಗ್ಗೆ ಮಾಹಿತಿ ಹಂಚಿಕೊಂಡ ಅವರು,
ಕನ್ನಡ ಸಿನಿಮಾ ಇಂಡಸ್ಟ್ರಿಯ ಬಹುತೇಕ ಎಲ್ಲರಿಂದ ಶುಭ ಹಾರೈಕೆ ಸಿಕ್ಕಿದೆ ಎಂದು ‌ಸಂತಸ ಪಟ್ಟರು.

ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆ ನವೀಶ್ ಶಂಕರ್ ಕಥೆಗಳ ಆಯ್ಕೆಗಳೇ ವಿಭಿನ್ನ. ಪ್ರತಿ ಸಿನಿಮಾದಲ್ಲಿಯೂ ತಾವು ಎಂತಹ ನಟ ಅನ್ನೋದನ್ನು ಸಾಬೀತುಪಡಿಸಿಕೊಂಡು ಬರುತ್ತಿದ್ದು ಈಗ ಕಾಡುವ ಕಥೆಯೊಂದಿಗೆ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ.

ಕುಲದೀಪ್ ಕಾರಿಯಪ್ಪ ಸಾರಥ್ಯದ ನೋಡಿದವರು ಏನಂತಾರೆ ಸಿನಿಮಾದಲ್ಲಿ ನವೀನ್ ಅಕ್ಷರಶಃ ಜೀವಿಸಿದ್ದಾರೆ. ಅದಕ್ಕೆ ಬಿಡುಗಡೆಯಾಗಿರುವ ಟ್ರೇಲರ್ ಸಾಕ್ಷಿಯಾಗಿದೆ.

ಜನವರಿ 31ರಂದು ಬಿಡುಗಡೆಯಾಗಲಿರುವ ನೋಡಿದವರು ಏನಂತಾರೆ ಚಿತ್ರದ ಟ್ರೇಲರ್ ಅನ್ನು ಶಿವರಾಜ್ ಕುಮಾರ್, ಡಾಲಿ ಧನಂಜಯ್, ರುಕ್ಮಿಣಿ ವಸಂತ್ ಸೇರಿದಂತೆ ಕನ್ನಡ ಚಿತ್ರೋದ್ಯಮದ ಹಲವಾರು ನಟ – ನಟಿ – ನಿರ್ದೇಶಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತ ಪಡಿಸಿ ಪ್ರೋತ್ಸಾಹಿಸಿದ್ದಾರೆ ಎಂದು ಕಾರಿಯಪ್ಪ ತಿಳಿಸಿದರು.

ಭಾವನಾತ್ಮಕ ಚೌಕಟ್ಟಿನಲ್ಲಿ ಸಾಗುವ ನೋಡಿದವರು ಏನಂತಾರೆ ಸಿನಿಮಾದಲ್ಲಿ ನವೀಶ್ ಶಂಕರ್ ಸಿದ್ದಾರ್ಥ್ ದೇವಯ್ಯನಾಗಿ ನಟಿಸಿದ್ದು, ಅಪೂರ್ವ ಭಾರದ್ವಾಜ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.

ವಿಶೇಷವೆಂದರೆ ಸುಮಾರು 40 ವರ್ಷಗಳ ನಂತರ ಗೀತ ಚಿತ್ರದಲ್ಲಿ ಶಂಕರ್‌ನಾಗ್ ಅವರೊಂದಿಗೆ ಕಾಣಿಸಿಕೊಂಡಿದ್ದ ಪದ್ಮಾವತಿ ರಾವ್ ಅವರು ಈ ಚಿತ್ರದ ಮೂಲಕ ಕನ್ನಡಕ್ಕೆ ಮರಳಿ ಬಂದಿರುವುದು.

ನಾಗೇಶ್ ಗೋಪಾಲ್ ನಿರ್ಮಾಣದ ಈ ಚಿತ್ರಕ್ಕೆ ಮಯೂರೆಶ್ ಸಂಗೀತ ಒದಗಿಸಿದ್ದು, ಅಶ್ವಿನ್ ಕ್ಯಾಮೆರಾ ಹಿಡಿದ್ದಾರೆ. ಕುಲದೀಪ್ ಕಾರಿಯಪ್ಪ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಅವರ ಜೊತೆ ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್ ಮತ್ತು ಸುನಿಲ್ ವೆಂಕಟೇಶ್ ಸಂಭಾಷಣೆ ಬರೆದಿದ್ದಾರೆ.

ಖ್ಯಾತ ಲೇಖಕ ಹಾಗು ಸಾಹಿತಿ ಜಯಂತ್ ಕಾಯ್ಕಿಣಿ ಎರಡು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಒಂದು ಹಾಡಿಗೆ ಲೈಲಾ ಪದ ಪೊಣಿಸಿದ್ದಾರೆ. ಸಾಧು ಕೋಕಿಲ, ಅನನ್ಯಾ ಭಟ್ ಮತ್ತು ಕೀರ್ತನ್ ಹೊಳ್ಳಾ ಹಾಗೂ ಅಮೇರಿಕಾದ ಗಾಯಕ ಜೋರ್ಡನ್ ರಾಬರ್ಟ್ ಕಿರ್ಕ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಪ್ರೀತಿ, ಸ್ನೇಹ, ತ್ಯಾಗ, ಸೆಂಟಿಮೆಂಟ್, ಎಮೋಷನ್ ಒಳಗೊಂಡಿರುವ ನೋಡಿದವರು ಏನಂತಾರೆ ಸಿನಿಮಾ ಇದೇ ತಿಂಗಳ 31ರಂದು ಬಿಡುಗಡೆಯಾಗಲಿದ್ದು ಎಲ್ಲರೂ ಸಿನಿಮಾ ಥಿಯೆಟರ್ ಗಳಿಗೆ ಬಂದು ಚಿತ್ರ‌ವೀಕ್ಷಿಸಬೇಕೆಂದು ಕಾರಿಯಪ್ಪ ಈ‌ ವೇಳೆ ಸಿನಿಪ್ರಿಯರಲ್ಲಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ‌ ಚಿತ್ರದ ನಾಯಕಿ ಅಪೂರ್ವ ಭಾರದ್ವಾಜ್,ನವೀಶ್ ಶಂಕರ್ ಮತ್ತಿತರರು ಹಾಜರಿದ್ದರು.

ಜ.31ಕ್ಕೆ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆನೋಡಿದವರು ಏನಂತಾರೆ ಚಲನಚಿತ್ರ Read More

ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಪೋಸ್ಟರ್ ಬಿಡುಗಡೆ

ಮೈಸೂರು: ಫೆಬ್ರವರಿ 1ಮತ್ತು 2ನೇ ತಾರೀಖಿನಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲದ ಆವರಣದಲ್ಲಿರುವ ಕಾವೇರಿ ಮತ್ತು ನಳ ಸಭಾಂಗಣದಲ್ಲಿ ಅಂತರ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಮೈಸೂರು ಸಿನಿಮಾ ಸೊಸೈಟಿ ಮತ್ತು ಭಾರತೀಯ ಚಿತ್ರ ಸಾಧನದ ಸಹಯೋಗದೊಂದಿಗೆ ಈ ಸಮಾರಂಭ ನಡೆಯಲಿದ್ದು,ಇಂದು ಇದರ ಪೋಸ್ಟರ್ ಅನ್ನು ಸಮಿತಿಯ ಕಾರ್ಯದರ್ಶಿ ಪದ್ಮವಾತಿ ಭಟ್ ಬಿಡುಗಡೆ ಮಾಡಿದರು.

ಉದ್ಘಾಟನಾ ಕಾರ್ಯಕ್ರಮವನ್ನು ಖ್ಯಾತ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ, ಬರಹಗಾರ ಮನೇಕ್ ಪ್ರೇಮಚಂದ್ ಮತ್ತು ಕರ್ನಾಟಕ ಮುಕ್ತ‌ ವಿಶ್ವವಿದ್ಯಾಲಯ‌ ಕುಲಪತಿ ಶರಣಪ್ಪ ಹಲಸೆ ನೆರವೇರಿಸಲಿದ್ದಾರೆ‌ ಎಂದು ಅವರು ತಿಳಿಸಿದರು.

ಪೃಥ್ವಿ ಕೊನನೂರ್,ಸಂಸದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್.ಶ್ರೀ ವತ್ಸ,ಹಾಗೂ ಇನ್ನಿತರ ಶಾಸಕರು ಉಪಸ್ಥಿತರಿರುವರು.

ಚಿತ್ರೋತ್ಸವಕ್ಕೆ ಪ್ರಪಂಚದಾದ್ಯಂತ 109 ದೇಶಗಳಿಂದ 3123 ಕಿರು ಮತ್ತು ಸಾಕ್ಷ್ಯಚಿತ್ರಗಳು ಬಂದಿವೆ.

ಈ ಚಿತ್ರಗಳಲ್ಲಿ ಆಯ್ಕೆಯಾದ ಸಿನಿಮಾಗಳಿಗೆ 26 ವರ್ಗಗಳ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.

ಭಾರತದಿಂದ 985, ಇರಾನ್,ಇರಾನ್,ಪ್ರಾನ್ಸ್, ಇಟಲಿ,ಜರ್ಮನಿ,ರಷ್ಯಾ ಗಳಿಂದ 42 138, 5 137, 108, ದೇಶಗಳಿಂದ 3123 ಸಿನಿಮಾಗಳು ಬಂದಿವೆ.

ಕನ್ನಡದ ಒಟ್ಟು 73 ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳು ಸೇರಿವೆ.ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಡ.ಎಲ್ ಮುರುಗನ್ ಅವರು ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಯೋಜಕ ಚೇತನ ಜಿ.ಅರ್.,ಸದಸ್ಯರುಗಳಾದ ಜೋಗಿಮಂಜು,ಸೀಮಾ ಬುರುಡೆ,ವೇಣುಗೋಪಾಲ್ ಹಾಜರಿದ್ದರು.

ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಪೋಸ್ಟರ್ ಬಿಡುಗಡೆ Read More

ಹ್ಯಾಟ್ರಿಕ್ ಹೀರೊ ತವರಿಗೆ‌ ವಾಪಸ್: ಅಭಿಮಾನಿಗಳ ಸಂಭ್ರಮ

ಬೆಂಗಳೂರು:ಅನಾರೋಗ್ಯ ಹಿನ್ನೆಲೆ ಶಸ್ತ್ರಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಿದ್ದ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ತವರಿಗೆ ವಾಪಸಾಗಿದ್ದು,ಅಭಿಮಾನಿಗಳು ಫುಲ್ ಖುಷಿಯಾಗಿ ಕುಣಿದು ಕುಪ್ಪಳಿಸಿದರು.

ಶಿವರಾಜ್​ ಕುಮಾರ್ ಪತ್ನಿ ಗೀತಾ, ಪುತ್ರಿ ನಿವೇದಿತಾ ಜೊತೆ ಬೆಳಗ್ಗೆ 8.50ಕ್ಕೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಶಿವಣ್ಣನ ಅಭಿಮಾನಿಗಳು ದೊಡ್ಡ ಕಟೌಟ್ ಗಳನ್ನು ಹಾಕಿ ವಾದ್ಯ ಮೇಳದೊಂದಿಗೆ ಬರಮಾಡಿಕೊಂಡರು.

ಗಣರಾಜ್ಯೋತ್ಸವ ಹಿನ್ನೆಲೆ ಹೈಅಲರ್ಟ್​ ಘೋಷಣೆ ಮಾಡಿದ್ದರಿಂದ ಏರ್​ಪೋರ್ಟ್​ನಲ್ಲಿ ಅದ್ಧೂರಿ ಸ್ವಾಗತಕ್ಕೆ ಅವಕಾಶ ಇರಲಿಲ್ಲ,ಹಾಗಾಗಿ ಸಾದಹಳ್ಳಿ ಗೇಟ್​ ಬಳಿ ಶಿವರಾಜ್ ಕುಮಾರ್ ಅವರನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.

ಸಾದಹಳ್ಳಿ ಗೇಟ್​ನಿಂದಲೂ ನೆಚ್ಚಿನ ನಟನಿಗೆ ಅಭಿಮಾನಿಗಳು ಹೂವಿನ ಮಳೆಯನ್ನೇ ಸುರಿಸಿದರು.

ದಾರಿಯುದ್ದಕ್ಕೂ ಅಭಿಮಾನಿಗಳು ಕಿಕ್ಕಿರಿದು ಜಯಕಾರ ಕೂಗುತ್ತಿದ್ದರು.ಇನ್ನು ಮನೆ ಬಳಿ ಜನಸಾಗರವೇ ಸೇರಿತ್ತು ಸೇಬಿನ ಹಾರ,ಹೂವಿನ ಮಾಲೆ ಬೊಕೆಗಳನ್ನು ಫ್ಯಾನ್ಸ್ ನೀಡಿ ಸಂಭ್ರಮಿಸಿದರು.ಪಟಾಕಿ ಸಿಡಿಸಿ ಖುಷಿ ಪಟ್ಟರು.

ಶಿವಣ್ಣ ಮನೆಗೆ ಬಂದ ಕೂಡಲೇ ರಾಘವೇಂದ್ರ ರಾಜಕುಮಾರ್,ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಸಂಬಂಧಿಗಳು ಆಗಮಿಸಿ ಶುಭ ಕೋರಿದರು.

ಹ್ಯಾಟ್ರಿಕ್ ಹೀರೊ ತವರಿಗೆ‌ ವಾಪಸ್: ಅಭಿಮಾನಿಗಳ ಸಂಭ್ರಮ Read More

ಬಾಲಿವುಡ್ ನಟ‌ ಸೈಫ್ ಅಲಿ ಖಾನ್ ಡಿಸ್ಚಾರ್ಜ್

ಮುಂಬೈ:‌ ಚಾಕು ಇರಿತದಿಂದ ತೀವ್ರ ಗಾಯಗೊಂಡು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾರೆ.

ಐದು ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿದುಕೊಂಡು ಆರೋಗ್ಯ ಸುಧಾರಣೆಯಾದ ಕಾರಣ ಅವರು ಮನೆಗೆ ಮರಳಲಿದ್ದಾರೆ.

ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಜ.16 ರಂದು ಇರಿತಕ್ಕೊಳಗಾಗಿದ್ದ ನಟ ಸೈಫ್ ಅಲಿ ಖಾನ್, ಲೀಲಾವತಿ ಆಸ್ಪತ್ರೆಯಲ್ಲಿ ಐದು ಗಂಟೆಗಳ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆರು ಗಾಯಗಳಾಗಿದ್ದು ಎರಡು, ಮೂರು ಗಾಯಗಳು ತುಂಬಾ ಆಳವಾಗಿದ್ದವು.

ಅವರು ಆಸ್ಪತ್ರೆಗೆ ಸೇರಿದ ದಿನವೇ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು ಅದಾದ ಬಳಿಕ ಅವರನ್ನು ಐಸಿಯುದಿಂದ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಈಗ ಮನೆಗೆ ಕರೆದುಕೊಂಡು ಹೋಗಲಾಯಿತು.

ಆಸ್ಪತ್ರೆಯಿಂದ ಸೈಫ್ ಆರಾಮವಾಗಿ ನಡೆದುಕೊಂಡೇ ಕಾರಿನ ಬಳಿಗೆ ಬಂದರು.
ಇದನ್ನು ಕಂಡು ಸೈಫ್ ಫ್ಯಾನ್ ಗಳು ಫುಲ್ ಖುಷಿಯಾಗಿದ್ದಾರೆ.

ಬಾಲಿವುಡ್ ನಟ‌ ಸೈಫ್ ಅಲಿ ಖಾನ್ ಡಿಸ್ಚಾರ್ಜ್ Read More