ನಾಳೆ ಸ್ಕೂಲ್ ಲೀಡರ್ ಚಿತ್ರ ತೆರೆಗೆ

ಮೈಸೂರು: ಈ ಶುಕ್ರವಾರ ಸ್ಕೂಲ್ ಲೀಡರ್ ಚಿತ್ರ ತೆರೆ ಕಾಣಲಿದ್ದು‌,ಚಿತ್ರ ಮತ್ತು ‌ಚಿತ್ರ ತಂಡಕ್ಕೆ ಪಿ ಜಿ ಆರ್ ಎಸ್ ಎಸ್ ನವರು ಸೇರಿ ಹಲವಾರು ಮಂದಿ ಶುಭ ಕೋರಿದ್ದಾರೆ.

ಮೇ 30 ರಂದು ಉಡುಪಿ ಹಾಗೂ ಮಂಗಳೂರು ಜಿಲ್ಲೆಯ ಚಿತ್ರಮಂದಿರಗಳಲ್ಲಿ ಸ್ಕೂಲ್ ಲೀಡರ್ ಚಿತ್ರ ತೆರೆ ಕಾಣಲಿದೆ.

ನಿರ್ಮಾಪಕರಾದ ಸತ್ಯೇಂದ್ರ ಪೈ ಹಾಗೂ ರಜಾಕ್ ಪುತ್ತೂರು ಅವರ ನಿರ್ದೇಶನದಲ್ಲಿ ಚಿತ್ರೀಕರಣಗೊಂಡ ಈ ಚಿತ್ರದಲ್ಲಿ ಜನಿಷಾ ಲೋಬೋ ಹಾಗೂ ರಕ್ತದಾನಿ ನೀಮಾ ಲೋಬೋ ಅವರು ನಟಿಸಿರುವುದು ವಿಶೇಷ.

ಚಿತ್ರದಲ್ಲಿ 120 ಕ್ಕೂ ಹೆಚ್ಚು ಮಂದಿ ನಟಿಸಿದ್ದು, ಎಲ್ಲಾ ಕಲಾವಿದರಿಗೂ ಪಂಚಾಯತ್ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿ ಮತ್ತು ನಿರಾಶ್ರಿತರು ಮತ್ತು ವೃದ್ಧರ ಬೃಂದಾವನ ಮೈಸೂರ್ ವತಿಯಿಂದ ಶುಭ ಕೋರಿದ್ದಾರೆ.

ಮುಂಬರುವ ಬರುವ ದಿನಗಳಲ್ಲಿ ಸ್ಕೂಲ್ ಲೀಡರ್ ಚಿತ್ರವು ಮೈಸೂರಿನಲ್ಲೂ ತೆರೆ ಕಾಣಲಿ ಎಂದು ಸಂಸ್ಥೆಯ ರಾಜ್ಯಾಧ್ಯಕ್ಷ ಯಾದವ್ ಹರೀಶ್ ಮತ್ತು ಸಂಚಾಲಕ ರಕ್ತದಾನಿ ಮಂಜು ಮತ್ತು ವೃದ್ಧಾಶ್ರಮದ ತಾಯಂದಿರು ಆಶಿಸಿದ್ದಾರೆ.

ನಾಳೆ ಸ್ಕೂಲ್ ಲೀಡರ್ ಚಿತ್ರ ತೆರೆಗೆ Read More

ಗೌರಿ ಅಲಿಯಾಸ್ ಗೌರಿಶಂಕರ್ ಚಿತ್ರದ ಧ್ವನಿಮುದ್ರಣ ಕಾರ್ಯ ಪ್ರಾರಂಭ

ಮೈಸೂರು: ಮೈಸೂರಿನ ಯುವಕರೇ ನಿರ್ಮಿತ್ತಿರುವ ಗೌರಿ ಅಲಿಯಾಸ್ ಗೌರಿಶಂಕರ್ ಚಿತ್ರದ ಧ್ವನಿಮುದ್ರಣ ಕಾರ್ಯಕ್ಕೆ ಇಂದು ಅಧಿಕೃತವಾಗಿ ಚಾಲನೆ ದೊರೆತಿದೆ.

ಈ ಚಿತ್ರವನ್ನು ಮೈಸೂರಿನಲ್ಲಿಯೇ ಬೆಳೆದ ಪ್ರತಿಭಾವಂತ ಯುವ ನಿರ್ದೇಶಕ ಮಹೇಶ್ ಸಿಂಧುವಳ್ಳಿ ನಿರ್ದೇಶಿಸುತ್ತಿದ್ದಾರೆ, ಸಂಕಲನ ಕಾರ್ಯವನ್ನು ಸುರೇಶ್ ಡಿ. ಹೆಚ್. ನಿರ್ವಹಿಸುತ್ತಿದ್ದಾರೆ. ಛಾಯಾಗ್ರಹಣವನ್ನು ಸದಾಶಿವ ಹಿರೇಮಠ್ ಹಾಗೂ ಸಂಗೀತ ಸಂಯೋಜನೆಯನ್ನು ಅಭಿನಂದನ್ ಕಶ್ಯಪ್ ಕೈಗೆತ್ತಿಕೊಂಡಿದ್ದಾರೆ.

ಮೈಸೂರಿನ ಉದಯೋನ್ಮುಖ ಕಲಾವಿದರು ಶಶಿ ಗೌಡ, ಅನೂಷಾ, ರಿಯಲ್ ಕೆಂಚ, ವಿಜಯ್ ಕಾರ್ತಿಕ್, ಸುಪ್ರೀತ್, ರಂಜನ್ ಎಸ್. ನಾಯಕ್, ರವಿಕುಮಾರ್ ಎಂ.ಬಿ., ಧನುಷ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

“ಗೌರಿ ಅಲಿಯಾಸ್ ಗೌರಿಶಂಕರ್” ಚಿತ್ರವು ಮೈಸೂರಿನ ಯುವಶಕ್ತಿಯ ಸೃಜನಾತ್ಮಕತೆಯ ಪ್ರತೀಕವಾಗಿದೆ. ಸ್ಥಳೀಯ ಚಿತ್ರರಂಗದಲ್ಲಿ ಹೊಸ ಬಿಂದುಗಳನ್ನು ಚಿತ್ರಿಸುತ್ತಿದೆ.

ಗೌರಿ ಅಲಿಯಾಸ್ ಗೌರೀಶಂಕರ ಸಂಪೂರ್ಣ ವಾಗಿ ಸ್ಥಳೀಯ ಪ್ರತಿಭೆಯಿಂದ ನಿರ್ಮಾಣವಾಗುತ್ತಿರುವುದು ವಿಶೇಷ. ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸಲಿದೆ ಎಂಬ ನಂಬಿಕೆಯನ್ನು ಚಿತ್ರತಂಡ ಇಟ್ಟು ಕೊಂಡಿದೆ.ಶುಭವಾಗಲಿ ಎಂದು ಹಲವಾರು ಮಂದಿ ಹಾರೈಸಿದ್ದಾರೆ.

ಗೌರಿ ಅಲಿಯಾಸ್ ಗೌರಿಶಂಕರ್ ಚಿತ್ರದ ಧ್ವನಿಮುದ್ರಣ ಕಾರ್ಯ ಪ್ರಾರಂಭ Read More

ಅತ್ಯಾಚಾರ ಆರೋಪದ ಮೇಲೆ ನಟ‌ ಮಡೆನೂರು ಮನು ಅರೆಸ್ಟ್

ಬೆಂಗಳೂರು: ಸಹ ನಟಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕುಲದಲ್ಲಿ ಕೀಳ್ಯಾವುದೋ ಚಿತ್ರದ ನಾಯಕ ನಟ ಮಡೆನೂರು ಮನು ಅವರನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ

ಸಹ ನಟಿ ನೀಡಿದ ದೂರಿನ ಮೇರೆಗೆ ಮಡೆನೂರು ಮನು ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಕರಣ ದಾಖಲಾದ ಬಳಿಕ ಮಡೆನೂರು ಮನು ಅವರು ವಿಡಿಯೊ ಮೂಲಕ ಸ್ಪಷ್ಟನೆ ನೀಡಿದ್ದರು. ಹಾಸನದಲ್ಲಿದ್ದ ಅವರನ್ನು ವಶಕ್ಕೆ ಪಡೆದು‌ ಬೆಂಗಳೂರಿಗೆ ಕರೆತರಲಾಗಿದೆ.

ಕುಲದಲ್ಲಿ ಕೀಳ್ಯಾವುದೋ ಚಿತ್ರವು ಶುಕ್ರವಾರ ಬಿಡುಗಡೆ ಆಗುತ್ತಿದೆ. ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದ್ದ ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ ಮಡೆನೂರು ಮನು ಪ್ರಸಿದ್ದಿಯಾಗಿದ್ದರು.

ಅತ್ಯಾಚಾರ ಆರೋಪದ ಮೇಲೆ ನಟ‌ ಮಡೆನೂರು ಮನು ಅರೆಸ್ಟ್ Read More

ಶತದಿನ ಪೂರೈಸಿದ ಭಗೀರಥ;ಮೈಸೂರಲ್ಲಿಅದ್ದೂರಿ ಸ್ಟಾರ್ ಮೆರವಣಿಗೆ

ಮೈಸೂರು: ಡೇರಿಂಗ್ ಸ್ಟಾರ್ ಎಸ್ ಜಯ ಪ್ರಕಾಶ್ ಅಭಿನಯಿಸಿರುವ ಭಗೀರಥ ಚಲನಚಿತ್ರ ಶತದಿನ ಪೂರೈಸಿದ ಹಿನ್ನೆಲೆಯಲ್ಲಿ
ನಗರದಲ್ಲಿ ಶನಿವಾರ‌ ಸ್ಟಾರ್ ಮೆರವಣಿಗೆ‌ ಅದ್ದೂರಿಯಾಗಿ ನಡೆಯಿತು.

ಡಾ. ರಾಜಕುಮಾರ್ ಸಂಘ, ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘ ಹಾಗೂ ಹಲವಾರು ಸಂಘ ಸಂಸ್ಥೆಗಳೊಂದಿಗೆ ಸ್ಟಾರ್ ಮೆರವಣಿಗೆ ಮಾಡಲಾಯಿತು.

ಮೆರವಣಿಗೆ ಮೂಲಕ ಭಗೀರಥ ಚಲನಚಿತ್ರ ತಂಡಕ್ಕೆ ಪ್ರೋತ್ಸಾಹ ನೀಡುವ ಜೊತೆಗೆ ಅಭಿನಂದನೆಯನ್ನು ಸಲ್ಲಿಸಲು ಪ್ರಭಾ ಚಿತ್ರ ಮಂದಿರಕ್ಕೆ ನೂರಾರು ಜನರೊಂದಿಗೆ ತೆರಳಿ ತಮಟೆ ಹಾಗೂ ಪಟಾಕಿಗಳನ್ನು ಸಿಡಿಸಿ, ನಾಯಕನಟರಾದ ಎಸ್ ಜಯಪ್ರಕಾಶ್ ರವರನ್ನು ಬರಮಾಡಿಕೊಳ್ಳಲಾಯಿತು.

ಅಪಾರ ಅಭಿಮಾನಿಗಳು ಎಸ್ ಜಯಪ್ರಕಾಶ್ ಅವರಿಗೆ ಹಾರ ತುರಾಯಿಗಳನ್ನು ಹಾಕಿ ಸಂಭ್ರಮಿಸಿದರು. ಭರ್ತಿಯಾದ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಕುಳಿತು ಅವರು ಸಿನಿಮಾ ವೀಕ್ಷಿಸಿದರು.

ಬೆಳಿಗ್ಗೆಯಿಂದ ಸಂಜೆವರೆಗೆ ಅಪಾರ ಅಭಿಮಾನಿಗಳು ಪ್ರಭಾ ಟಾಕೀಸ್ ಮುಂದೆ ತಮಟೆ ಮತ್ತು ಡೋಲು ಬಾರಿಸುತ್ತಾ ಪಟಾಕಿಗಳನ್ನು ಸಿಡಿಸುತ್ತಾ ನೃತ್ಯ ಮಾಡುವುದರ ಮೂಲಕ ಭಗೀರಥ
ಚಲನಚಿತ್ರ ಶತದಿನೋತ್ಸವವನ್ನು
ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಭಗೀರಥ ಚಲನಚಿತ್ರದ ನಿರ್ಮಾಪಕರಾದ ರಮೇಶ್, ಭೈರಪ್ಪ, ಡಾ . ರಾಜ್ ಅವರ ಕುಟುಂಬದ ಎಸ್ ಎ ಶ್ರೀನಿವಾಸ್, ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಡಾ. ರಾಜ್ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ವರಕೂಡು ಕೃಷ್ಣೇಗೌಡ, ಸಿಂದುವಳ್ಳಿ ಶಿವಕುಮಾರ್, ಹನುಮಂತಯ್ಯ, ಭಾಗ್ಯಮ್ಮ, ಪ್ರಭುಶಂಕರ, ಮಧುವನ ಚಂದ್ರು, ಕುಮಾರ್, ರಘು ಅರಸ್, ಬಸವರಾಜು , ಪ್ರದೀಪ್, ಅಭಿ, ಹನುಮಂತೆಗೌಡ, ರಘು ಆಚಾರ್, ಕೃಷ್ಣಪ್ಪ , ಸುಬ್ಬೇಗೌಡ, ಮಹೇಶ್ ಕುಮಾರ್, ಶಿವರಾಂ,ರವೀಶ್ ಮತ್ತಿತರರು ಡೇರಿಂಗ್ ಸ್ಟಾರ್ ಎಸ್ ಜಯಪ್ರಕಾಶ್ ಅವರೊಂದಿಗೆ ಕುಳಿತು ಸಿನಿಮಾ ವೀಕ್ಷಿಸಿದರು.

ಶತದಿನ ಪೂರೈಸಿದ ಭಗೀರಥ;ಮೈಸೂರಲ್ಲಿಅದ್ದೂರಿ ಸ್ಟಾರ್ ಮೆರವಣಿಗೆ Read More

ಪರಿದೃಶ್ಯ ನಾಲ್ಕನೇ ಆವೃತ್ತಿ ಚಿತ್ರೋತ್ಸವ:ಕಿರುಚಿತ್ರ, ಸಾಕ್ಷ ಚಿತ್ರಗಳಿಗೆ ಆಹ್ವಾನ

ಮೈಸೂರು: ಮೈಸೂರು ಸಿನಿಮಾ ಸೊಸೈಟಿಯ ಪ್ರಮುಖ ಚಿತ್ರೋತ್ಸವವಾದ ಪರಿದೃಶ್ಯ ನಾಲ್ಕನೇ ಆವೃತ್ತಿಯನ್ನು 6/02/2026 ರಿಂದ 8/02/2026 ವರೆಗೆ ವಿದ್ಯಾರ್ಥಿ ಮತ್ತು ವೃತ್ತಿಪರ ವಿಭಾಗಗಳಲ್ಲಿ ಆಯೋಜಿಸಲಾಗಿದೆ.

ಪರಿದೃಶ್ಯ ನಾಲ್ಕನೇ ಆವೃತ್ತಿಯ ಚಿತ್ರೋತ್ಸವಕ್ಕೆ ಕಿರುಚಿತ್ರ ಮತ್ತು ಸಾಕ್ಷ ಚಿತ್ರಗಳನ್ನು ಆಹ್ವಾನಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮೈನೂರು ಸಿನಿಮಾ ಸೊಸೈಟಿ ಅಧ್ಯಕ್ಷ ಚೇತನ್ ಎಂ ತಿಳಿಸಿದರು‌

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಚಿತ್ರಗಳು 1/01/2024ರ ನಂತರ ಚಿತ್ರೀಕರಣಗೊಂಡಿರಬೇಕು.

ಈ ಸ್ಪರ್ಧೆಯಲ್ಲಿ ಅತ್ಯುತ್ತಮ ಕಿರುಚಿತ್ರ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಛಾಯಾಚಿತ್ರ, ಅತ್ಯುತ್ತಮ ಚಿತ್ರಕಥೆ ಅತ್ಯುತ್ತಮ ಧ್ವನಿ ಸಂಯೋಜನೆ, ಹಾಗೂ ಇನ್ನೂ ಅನೇಕ ಪ್ರಶಸ್ತಿಗಳಿರುತ್ತದೆ ಎಂದು ವಿವರಿಸಿದರು.

ಚಿತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ 30 ಸೆಪ್ಟೆಂಬರ್ 2025. ಕಿರುಚಿತ್ರಗಳ ಅವಧಿ 1- 40 ನಿಮಿಷಗಳು ಮತ್ತು ಸಾಕ್ಷ್ಯಚಿತ್ರಗಳ ಅವಧಿಗಳು 120 ನಿಮಿಷಗಳವರೆಗೆ ಇರತಕ್ಕದ್ದು.

ಚಿತ್ರಗಳನ್ನು ಅಪ್ಲೋಡ್ ಮಾಡಲು ಈ ವೆಬ್ಸೈಟ್ ಬಳಸಬಹುದು. https://filmfreeway.com/paridrishya

ಹೆಚ್ಚಿನ ವಿವರಗಳಿಗೆ
www.mysurucinemasociety.com ಮತ್ತು ಮೊಬೈಲ್ -9980596824/9880435175 ನಲ್ಲಿ ಸಂಪರ್ಕಿಸಬಹುದು.

ಮೈಸೂರು ಸಿನಿಮಾ ಸೊಸೈಟಿ ಅಧ್ಯಕ್ಷ ಚೇತನ್ ಎಂ.ಅವರೊಂದಿಗೆ
ಕಾರ್ಯದರ್ಶಿ ಪದ್ಮಾವತಿ ಎಸ್ ಭಟ್,ಸಂಯೋಜಕ ಚೇತನ್ ಜಿ ಆರ್,ಜೋಗಿ ಮಂಜು ಮತ್ತಿತರರು ಹಾಜರಿದ್ದು ಬ್ರೋಶರ್ ಗಳನ್ನು ಬಿಡುಗಡೆ ಮಾಡಿದರು.

ಪರಿದೃಶ್ಯ ನಾಲ್ಕನೇ ಆವೃತ್ತಿ ಚಿತ್ರೋತ್ಸವ:ಕಿರುಚಿತ್ರ, ಸಾಕ್ಷ ಚಿತ್ರಗಳಿಗೆ ಆಹ್ವಾನ Read More

ಕನ್ನಡ ಮಹಿಳಾ ಕಿರುಚಿತ್ರೋತ್ಸವ: ಚಿತ್ರ ಸಲ್ಲಿಕೆಗೆ ಏ. 30 ಕೊನೆಯ ದಿನ

ಬೆಂಗಳೂರು: ಬೆಂಗಳೂರಿನಲ್ಲಿ
ಜೂನ್ 14 ರಂದು ನಡೆಯಲಿರುವ ಅವಳ ಹೆಜ್ಜೆ ಕಿರುಚಿತ್ರೋತ್ಸವ-2025 ಮಹಿಳೆಯರೇ ತಯಾರಿಸಿದ ಕಿರುಚಿತ್ರಗಳ ಸ್ಪರ್ಧೆನ್ನು ಇದೇ ಮೊದಲ ಬಾರಿಗೆ ಏರ್ಪಡಿಸಲಾಗಿದೆ.

ಈ ಸ್ಪರ್ಧೆಗೆ ಕಿರುಚಿತ್ರವನ್ನು ಸಲ್ಲಿಸಲು ಇನ್ನು ಕೆಲವೇ ದಿನಗಳ ಅವಕಾಶವಿದ್ದು,ಏ.30.ಕೊನೆಯ ದಿನ ಎಂದು ಅವಳ ಹೆಜ್ಜೆಯ ಸ್ಥಾಪಕಿ ಶಾಂತಲಾ ದಾಮ್ಲೆ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅತ್ಯುತ್ತಮ ಕಿರುಚಿತ್ರಕ್ಕೆ ಒಂದು ಲಕ್ಷ ನಗದು ಬಹುಮಾನ ಪಡೆಯುವ ಅವಕಾಶವಿದೆ. ಜೊತೆಗೆ, ಸಾಕ್ಷ್ಯಚಿತ್ರಗಳೂ ಸೇರಿದಂತೆ ಅನೇಕ ವಿಶೇಷ ವರ್ಗಗಳಲ್ಲಿ ತಲಾ ಒಂದು ಚಿತ್ರಕ್ಕೆ ಮೆಚ್ಚುಗೆಯ ಬಹುಮಾನ ನಗದು ಹತ್ತು ಸಾವಿರ ಪಡೆಯುವ ಅವಕಾಶವಿದೆ.

ಏಪ್ರಿಲ್ 30 ರೊಳಗೆ ಕಿರುಚಿತ್ರದ ಗುಪ್ತ ಲಿಂಕ್ ಮತ್ತು ಪ್ರವೇಶ ಶುಲ್ಕ 1000 ರೂ ಜೊತೆಗೆ ಅರ್ಜಿಯನ್ನು www.avalahejje.net ಮೂಲಕ ಸಲ್ಲಿಸಬೇಕು

ಕೆಲವು ವಿಶೇಷ ಸಂದರ್ಭಗಳಲ್ಲಿ ಪ್ರವೇಶ ಶುಲ್ಕಕ್ಕೆ ವಿನಾಯಿತಿ ಮತ್ತು ಕೆಲವು ದಿನಗಳ ಗಡುವು ವಿಸ್ತರಣೆ ನೀಡಲು ಸಾಧ್ಯವಿದೆ,ಆದರೆ ಈ ಬಗ್ಗೆ ಮನವಿಯನ್ನು ವೆಬ್ಸೈಟ್ ಮೂಲಕ ಏಪ್ರಿಲ್ 30 ರೊಳಗೆ ಸಲ್ಲಿಸಿದಲ್ಲಿ ಮಾತ್ರ ಪರಿಗಣಿಸಲಾಗುವುದು.

ಮಾಹಿತಿಗಳಿಗೆ ಮತ್ತು ಪ್ರಶ್ನೆಗಳಿದ್ದಲ್ಲಿ, 8867747236 ಗೆ ವಾಟ್ಸಾಪ್ ಅಥವಾ avalahejjefilms@gmail.com ಗೆ ಈಮೇಲ್ ಮಾಡಬೇಕೆಂದು ಕೋರಲಾಗಿದೆ.

ಕ್ಯಾಮೆರಾದ ಹಿಂದೆ ಮಹಿಳೆ ಇಲ್ಲದಿದ್ದರೆ, ಸಿನಿಮಾ ಪರದೆಯ ಮೇಲಿನ ಮಹಿಳಾ ಪಾತ್ರಗಳು ಕೇವಲ ಗ್ಲಾಮರ್ ಗೆ ಸೀಮಿತವಾಗುವ ಅಪಾಯವಿದೆ. ಮಹತ್ವಾಕಾಂಕ್ಷಿ ಚಿತ್ರ ನಿರ್ದೇಶಕಿಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು, ತಮ್ಮ ಗುರುತನ್ನು ಮೂಡಿಸಲು ಮತ್ತು ಲಿಂಗ ಸಮಾನತೆಯ ನಿಟ್ಟಿನಲ್ಲಿ ಕೊಡುಗೆ ನೀಡಲು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಅವಳ ಹೆಜ್ಜೆಯ ಸ್ಥಾಪಕಿ ಶಾಂತಲಾ ದಾಮ್ಲೆ ಮನವಿ ಮಾಡಿದ್ದಾರೆ.

ಅವಳ ಹೆಜ್ಜೆ ಕಿರುಚಿತ್ರೋತ್ಸವ ಕೇವಲ ಕಿರುಚಿತ್ರ ಸ್ಪರ್ಧೆಯಲ್ಲ. ಮಹಿಳಾ ಮುಖ್ಯಪಾತ್ರಗಳಿಗೆ, ಮಹಿಳೆಯರ ಅನುಭವ ಮತ್ತು ದೃಷ್ಟಿಕೋನಗಳಿಗೆ ವೇದಿಕೆ ಸೃಷ್ಟಿಸುವುದರ ಮೂಲಕ ಸಮಾನತೆಯತ್ತ ಇಡುತ್ತಿರುವ ದಿಟ್ಟ ಹೆಜ್ಜೆಯಾಗಿದೆ, ಸಲ್ಲಿಕೆ ಮಾರ್ಗಸೂಚಿಗಳಿಗಾಗಿ, www.avalahejje.net ಗೆ ಭೇಟಿ ನೀಡಬಹುದಾಗಿದೆ.

ಕನ್ನಡ ಮಹಿಳಾ ಕಿರುಚಿತ್ರೋತ್ಸವ: ಚಿತ್ರ ಸಲ್ಲಿಕೆಗೆ ಏ. 30 ಕೊನೆಯ ದಿನ Read More

ಯಕ್ಷಗಾನ ವೇಷದಲ್ಲಿ ಚಾಮುಂಡಿ ದೇವಿ ದರ್ಶನ ಪಡೆದ ರವಿ ಬಸ್ರೂರು

ಮೈಸೂರು: ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶನದ ವೀರ ಚಂದ್ರಹಾಸ ಚಿತ್ರದ ತಂಡದವರು ನಾಡ ಅದಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದರು.

ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್ ಅರ್ಪಿಸುತ್ತಿರುವ ರವಿ ಬಸ್ರೂರು ನಿರ್ದೇಶನದ
ದಕ್ಷಿಣ ಕನ್ನಡ ಭಾಗದ ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನ ಕಲೆಯ ಹಿನ್ನೆಲೆ
ಹಿರಿಮೆಯನ್ನು ನಾಡಿನ ಜನತೆಗೆ ಹೇಳಲು ಯಕ್ಷಗಾನ ಪ್ರಸಂಗ ಆಧಾರಿತ
ವೀರ ಚಂದ್ರಹಾಸ ಚಿತ್ರ ರಾಜ್ಯಾದ್ಯಂತ ತೆರೆಕಂಡಿದೆ,ಜತೆಗೆ ಉತ್ತಮ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗಿದೆ.

ಇದೀಗ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಚಿತ್ರತಂಡ ಭೇಟಿ ಕೊಟ್ಟು ದೇವಿಯ ದರ್ಶನ ಪಡೆಯಿತು.

ರವಿ ಬಸ್ರೂರು ಅವರು ಯಕ್ಷಗಾನ ವೇಷದಲ್ಲೇ ದೇವಿಯ ದರ್ಶನ ಪಡೆದುದು ವಿಶೇಷ.

ಈ ವೇಳೆ ಮಾತನಾಡಿದ
ರವಿ ಬಸ್ರೂರು ಅವರು, ವೀರ ಚಂದ್ರಹಾಸ ನನ್ನ ಹಲವಾರು ವರ್ಷಗಳ ಕನಸು, ಯಕ್ಷಗಾನವನ್ನು ವಿಶ್ವಮಾನ್ಯ ಮಾಡಬೇಕೆಂದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ ಎಂದು ತಿಳಿಸಿದರು.

ಈ ಚಿತ್ರದ ಎಲ್ಲಾ ಪಾತ್ರಗಳನ್ನು ನಿಜವಾದ ವೃತ್ತಿಪರ ಯಕ್ಷಗಾನ ಕಲಾವಿದರೆ ನಿರ್ವಹಿಸಿದ್ದಾರೆ, ಹಾಗಾಗಿ ಇಡೀ ಚಿತ್ರ ತುಂಬಾ ನೈಜ್ಯವಾಗಿ ಮೂಡಿಬಂದಿದೆ ಎಂದು ಹೇಳಿದರು.

ವಿಶೇಷ ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಭಿನಯಿಸುವ ಮೂಲಕ ನಮಗೆ ಆಶೀರ್ವದಿಸಿದ್ದಾರೆ ಎಂದು ರವಿ ಖುಷಿಯಿಂದ ತಿಳಿಸಿದರು.

ನಂತರ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಅವಧೂತ ಅರ್ಜುನ್ ಗುರೂಜಿ ಅವರ ಆಶೀರ್ವಾದ ಪಡೆದು ಅವರ ಜೊತೆ ಡಿ ಆರ್ ಸಿ ಮಾಲ್ ನಲ್ಲಿ
ಪ್ರೇಕ್ಷಕರ ಜೊತೆ ರವಿ ಬಸ್ರೂರು ಚಿತ್ರ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಚಿತ್ರತಂಡ ಹಾಗೂ ಕಲಾವಿದ ಪ್ರಕಾಶ್ ಚಿಕ್ಕಪಾಳ್ಯ, ಸಮಾಜ ಸೇವಕರಾದ ಜೋಗಿ ಮಂಜು, ರಿಷಿ ವಿಶ್ವಕರ್ಮ, ವಿಕ್ರಂ ಅಯ್ಯಂಗಾರ್, ಮಹಾನ್ ಶ್ರೇಯಸ್ ಮತ್ತಿತರರು ಹಾಜರಿದ್ದರು.

ಯಕ್ಷಗಾನ ವೇಷದಲ್ಲಿ ಚಾಮುಂಡಿ ದೇವಿ ದರ್ಶನ ಪಡೆದ ರವಿ ಬಸ್ರೂರು Read More

ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ ವಿಧಿವಶ

ಬೆಂಗಳೂರು: ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಬ್ಯಾಂಕ್ ಜನಾರ್ಧನ್ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ತಡರಾತ್ರಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ.

ತಕ್ಷಣ ಮನೆಯವರು ಆಸ್ಪತ್ರೆಗೆ ಕರೆತಂದರು,ಆದರೆ ಚಿಕಿತ್ಸೆ ಫಲಕಾರಿಯಾಗದೇ ಮುಂಜಾನೆ 2.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಪಾರ್ಥಿವ ಶರೀರವನ್ನ ಸುಲ್ತಾನ್ ಪಾಳ್ಯದಲ್ಲಿರುವ ಅವರ ನಿವಾಸಕ್ಕೆ ಶಿಫ್ಟ್‌ ಮಾಡಿದ್ದು ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.

ತಂದೆ ಸಾವಿನ ಕುರಿತು ಮಾಹಿತಿ ನೀಡಿರುವ ಬ್ಯಾಂಕ್‌ ಜನಾರ್ಧನ್‌ ಅವರ ಪುತ್ರ ಗುರುಪ್ರಸಾದ್‌, 20 ದಿನಗಳಿಂದ ಆಸ್ಪತ್ರೆಗೆ ಹೋಗುತ್ತಿದ್ದರು, ಸಾಕಷ್ಟು ಟ್ರೀಟ್ಮೆಂಟ್‌ ಕೊಡಿಸಿದ್ದೆವು. ಮೂರು ದಿನಗಳಿಂದ ಆರೋಗ್ಯ ಸಮಸ್ಯೆ ಏರುಪೇರು ಆಗುತ್ತಿತ್ತು. ನಂತರ ಆಸ್ಪತ್ರೆಗೆ ದಾಖಲು ಮಾಡಿದ್ವು, ನಿನ್ನೆ ತುಂಬಾ ಉಸಿರಾಟದ ಸಮಸ್ಯೆಯಾಗಿತ್ತು. ವೈದ್ಯರು ಕೂಡ ತುಂಬಾ ಪ್ರಯತ್ನ ಪಟ್ಟರು ಆದರೂ ನಮ್ಮ ತಂದೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ ಬೆಳಗಿನ ಜಾವ 2.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು ಎಂದು ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ ವಿಧಿವಶ Read More

ಬಾಲಿವುಡ್ ಖ್ಯಾತ ನಟ ಮನೋಜ್ ಕುಮಾರ್ ವಿಧಿವಶ

ಮುಂಬೈ,ಏ.4: ಬಾಲಿವುಡ್ ಖ್ಯಾತ ನಟ,ದಿಗ್ಗಜ, ನಿರ್ದೇಶಕ ಮನೋಜ್ ಕುಮಾರ್ ಅವರು
ವಯೋಸಹಜ ಖಾಯಿಲೆಯಿಂದ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಅವರು ದೇಶಭಕ್ತಿ ಚಲನಚಿತ್ರಗಳಲ್ಲೇ ಹೆಚ್ಚು ನಟಿಸಿ ಪ್ರಸಿದ್ದರಾಗಿದ್ದರು ಮತ್ತು ಭರತ್ ಕುಮಾರ್ ಎಂಬ ಅಡ್ಡ ಹೆಸರಿನಿಂದ ಹೆಸರುವಾಸಿಯಾಗಿದ್ದರು.

ಮನೋಜ್ ಕುಮಾರ್ ಅವರಿಗೆ 87 ವರ್ಷ ವಯಸ್ಸಾಗಿತ್ತು.ಜುಲೈ 24, 1937 ರಲ್ಲಿ ಹರಿಕೃಷ್ಣ ಗಿರಿ ಗೋಸ್ವಾಮಿಯಾಗಿ ಜನಿಸಿದ ಮನೋಜ್ ಕುಮಾರ್ ದೇಶಭಕ್ತಿ ಚಲನಚಿತ್ರಗಳಲ್ಲಿ ಹೆಚ್ಚು ನಟಿಸಿದ್ದರು.

ಮನೋಜ್ ಕುಮಾರ್ ಶಹೀದ್, ಉಪ್ಕಾರ್, ಪುರಬ್ ಔರ್ ಪಶ್ಚಿಮ್, ಮತ್ತು “ರೋಟಿ ಕಪಡಾ ಔರ್ ಮಕಾನ್ ಸೇರಿದಂತೆ ದೇಶಭಕ್ತಿಯ ಕಥಾವಸ್ತುವಿನ ಚಲನಚಿತ್ರಗಳಲ್ಲಿ ನಟಿಸಿದ್ದರು.

ಮನೋಜ್ ಕುಮಾರ್ ಅವರನ್ನು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ 1992 ರಲ್ಲಿ ಪದ್ಮಶ್ರೀ ಮತ್ತು 2015 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಬಾಲಿವುಡ್ ಖ್ಯಾತ ನಟ ಮನೋಜ್ ಕುಮಾರ್ ವಿಧಿವಶ Read More

ಏ.1ರಂದು ನಿಂಬಿಯ ಬನಾದ ಮ್ಯಾಗ ತೆರೆಗೆ

ಮೈಸೂರು: ನಟಸಾರ್ವಭೌಮ ಡಾ.ರಾಜಕುಮಾರ್ ಅವರ ದೊಡ್ಡ ಮಗಳು ಲಕ್ಷ್ಮಿ ಗೋವಿಂದರಾಜು ಅವರ ಪುತ್ರ
ಷಣ್ಮುಖ ಗೋವಿಂದರಾಜ್ ನಟಿಸಿರುವ
ನಿಂಬಿಯ ಬನಾದ ಮ್ಯಾಗ‌ ಚಲನಚಿತ್ರವು ಏಪ್ರಿಲ್ 1ರಂದು ತೆರೆಗೆ ಬರಲಿದೆ.

ಇಂದು ಖಾಸಗಿ ಹೋಟೆಲಲ್ಲಿ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡವು ಚಲನಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು.

ನಾಯಕ ನಟ ಷಣ್ಮುಖ ಗೋವಿಂದರಾಜ್ ಮಾತನಾಡಿ, ಸಿನಿಮಾ ಮಾಡಲು ಇಷ್ಟವಿದ್ದರೂ ನನ್ನನ್ನು ಹಾಕಿಕೊಳ್ಳಲು ಯಾರೂ ಮುಂದೆ ಬರುತ್ತಿರಲಿಲ್ಲ, ತಂದೆ ತಾಯಿ ಸಹ ಇದರ ಬಗ್ಗೆ ನನ್ನನ್ನು ಕೇಳಲಿಲ್ಲ, ನಾನೊಂದು ಕಂಪನಿಯಲ್ಲಿ ಉದ್ಯೋಗಿಯಾಗಿದ್ದೆ ನನ್ನನ್ನು ನಿರ್ಮಾಪಕರಾದ ಮಹಾದೇಶ ಹಾಗೂ ನಿರ್ದೇಶಕರಾದ ಅಶೋಕ್ ಕಡಬ ಅವರು ನನ್ನನ್ನು ಸಂಪರ್ಕಿಸಿ ನಿಮಗಾಗಿ ಒಂದು ಚಿತ್ರಕಥೆ ಇದೆ ದಯವಿಟ್ಟು ನೀವೇ ಅದರಲ್ಲಿ ನಾಯಕ ನಟನ ಪಾತ್ರ ಮಾಡಬೇಕು ಎಂದು ಕೇಳಿಕೊಂಡರು ಎಂದು ಹೇಳಿದರು.

ತಂದೆ ತಾಯಿಯನ್ನು ಒಪ್ಪಿಸಿ ಚಿತ್ರಕಥೆ ಕೇಳಿದಾಗ ನಟಿಸಲು ಒಪ್ಪಿಗೆ ಕೊಟ್ಟರು, ಇದೊಂದು ಸುಂದರ ಸಂಸಾರಿಕ ಚಿತ್ರವಾಗಿದ್ದು ತಂದೆ ತಾಯಿ ಮಗನ ಸುತ್ತ ಹೆಣದ ಕಥೆಯಾಗಿದೆ, ಸುಂದರವಾದ ನಾಲ್ಕು ಹಾಡುಗಳು ಮೂಡಿಬಂದಿವೆ ಎಂದು ತಿಳಿಸಿದರು.

ತಾತ ರಾಜಕುಮಾರ್, ಶಿವಣ್ಣ, ರಾಘಣ್ಣ ಅವರು ಹಾಕಿಕೊಟ್ಟ ಮಾರ್ಗದಲ್ಲೇ ನಡೆಯುತ್ತೇನೆ ಎಂದು ಷಣ್ಮುಖ ಹೇಳಿದರು.

ಮತ್ತೊಬ್ಬ ನಾಯಕ ನಟ ಸುನಾದ್ ರಾಜ್ ಮಾತನಾಡಿ, 93 ರಲ್ಲಿ ಮೇಘಮಾಲೆ ಚಿತ್ರದಲ್ಲಿ ನಟಿಸಿ ನಂತರ ಕೆಲ ಸಿನಿಮಾಗಳಲ್ಲಿ ನಟನೆ ಮಾಡಿ,ನಂತರ ಬಿಜಿನೆಸ್ ಕಡೆಗೆ ತೊಡಗಿಸಿಕೊಂಡೆ ಎಂದು ತಿಳಿಸಿದರು.

ಒಂದು ಯೂಟ್ಯೂಬ್ ಸಂದರ್ಶನದಲ್ಲಿ ಇಂಟರ್ವ್ಯೂ ಕೊಟ್ಟಾಗ ಅದರಲ್ಲಿ ಸುಮಾರು ಕಮೆಂಟ್ ಗಳು ಬಂದವು, ಸರ್ ನೀವು ಯಾಕೆ ಪುನಃ ನಟನೆ ಮಾಡಬಾರದು ಎಂದು ಕೇಳಿದರು,ನನ್ನ ಮಗಳ ಮುಂದೆ ಬಣ್ಣ ಹಚ್ಚಬೇಕೆಂದು ಪುನಃ ಸಿನಿಮಾದಲ್ಲಿ ನಟಿಸಿದೆ. ಈ ಚಿತ್ರದಲ್ಲಿ ಮೊದಲನೇ ಶಾಟ್ ಎದುರಿಸಿದಾಗ ನನಗೆ ಯಾವುದೇ ರೀತಿಯ ತೊಂದರೆ ಆಗಲಿಲ್ಲ 25 ವರ್ಷದ ಹಿಂದೆ ಹೇಗೆ ನಡೆಸಿದ್ದೇನೋ ಹಾಗೆ ನಟಿಸಿದೆ ಎಂದು ತಿಳಿಸಿದರು.

ಕರ್ನಾಟಕದ 70 ಸಿನಿಮಾ ಮಂದಿರದಲ್ಲಿ ನಿಂಬಿಯ ಬನಾದ ಮ್ಯಾಗ ಬಿಡುಗಡೆಯಾಗುತ್ತಿದೆ ಎಂದು ಹೇಳಿದರು.

ನಿರ್ಮಾಪಕ ಮದೇಶ್ ಅವರು ಮಾತನಾಡಿ ಸಿನಿಮಾ ಸುಮಾರು ಒಂದು ಕೋಟಿ ಬಜೆಟ್ ನದ್ದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ನಿರ್ಮಾಪಕ ಎಸ್.ಎ ಶ್ರೀನಿವಾಸ್, ಸುನಾದ್ ರಾಜ್, ಸಂದೀಪ್ ಮಲಾನಿ ಮತ್ತಿತರರು ಉಪಸ್ಥಿತರಿದ್ದರು.

ಏ.1ರಂದು ನಿಂಬಿಯ ಬನಾದ ಮ್ಯಾಗ ತೆರೆಗೆ Read More